ಚೀನಾದ ಗಗನಯಾತ್ರಿಗಳಿಂದ ಹೊಸ ಕಕ್ಷೀಯ ಕೇಂದ್ರದ ಹೊರಗೆ ಮೊದಲ ಬಾಹ್ಯಾಕಾಶ ನಡಿಗೆ

ಚೀನಾದ ಇಬ್ಬರು ಗಗನಯಾತ್ರಿಗಳು ಹೊಸ ಕಕ್ಷೀಯ ಕೇಂದ್ರದ ಹೊರಗೆ ಮೊದಲ ಸ್ಪೇಸ್ ವಾಕ್ ನಡೆಸಿದ್ದಾರೆ. 15 ಮೀಟರ್ (50 ಅಡಿ) ಉದ್ದದ ರೊಬೋಟಿಕ್ ಆರ್ಮ್ ನ್ನು ಹೊಸ ಕಕ್ಷೀಯ ಕೇಂದ್ರದಲ್ಲಿ ಸ್ಥಾಪನೆ ಮಾಡಲಾಗಿದೆ.
ಚೀನಾದ ಗಗನಯಾತ್ರಿಗಳು
ಚೀನಾದ ಗಗನಯಾತ್ರಿಗಳು

ಬೀಜಿಂಗ್: ಚೀನಾದ ಇಬ್ಬರು ಗಗನಯಾತ್ರಿಗಳು ಹೊಸ ಕಕ್ಷೀಯ ಕೇಂದ್ರದ ಹೊರಗೆ ಮೊದಲ ಸ್ಪೇಸ್ ವಾಕ್ ನಡೆಸಿದ್ದಾರೆ. 15 ಮೀಟರ್ (50 ಅಡಿ) ಉದ್ದದ ರೊಬೋಟಿಕ್ ಆರ್ಮ್ ನ್ನು ಹೊಸ ಕಕ್ಷೀಯ ಕೇಂದ್ರದಲ್ಲಿ ಸ್ಥಾಪನೆ ಮಾಡಲಾಗಿದೆ.

ಲಿಯು ಬೊಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೋ ಇಬ್ಬರು ಗಗನ ಯಾತ್ರಿಗಳು ಹೊಸ ಕಕ್ಷೀಯ ಕೇಂದ್ರದ ಹೊರಗೆ ಇದ್ದರೆ ತಂಡದ ಮತ್ತೋರ್ವ ಸದಸ್ಯ ಕಮಾಂಡರ್ ನೀ ಹೈಶೆಂಗ್ ಕೇಂದ್ರದ ಒಳಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಜೂ.17 ರಂದು ಚೀನಾದ ಗಗನಯಾತ್ರಿಗಳು ಮೂರು ತಿಂಗಳ ಮಿಷನ್ ನ್ನು ಕೈಗೊಂಡಿದ್ದು ಮೇ ತಿಂಗಳಲ್ಲಿ ಮಂಗಳನ ಮೇಲೆ ರೋಬೋಟ್ ರೋವರ್ ಲ್ಯಾಂಡ್ ಆದ ಮಹತ್ವದ ಬಾಹ್ಯಾಕಾಶ ಯೋಜನೆಯ ಭಾಗವಾಗಿದೆ.

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯ 100 ನೇ ವಾರ್ಷಿಕೋತ್ಸವದ ಅಂಗವಾಗಿ ಈ ಮಿಷನ್ ನ್ನು ಕೈಗೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com