ಬಕ್ರಿದ್ ಆಚರಿಸಲು ಗ್ರಾಮಕ್ಕೆ ತೆರಳುತ್ತಿದ್ದಾಗ ಭೀಕರ ಅಪಘಾತ: 30 ಮಂದಿ ಕಾರ್ಮಿಕರ ದುರ್ಮರಣ!

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಡೇರಾ ಘಾಜಿ ಖಾನ್ ನ ಸಿಂಧೂ ಹೆದ್ದಾರಿಯಲ್ಲಿ ಪ್ರಯಾಣಿಕರ ಬಸ್ ವೊಂದು ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 30 ಜನರು ಸಾವನ್ನಪ್ಪಿದ್ದು, ಇತರ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Published: 19th July 2021 06:51 PM  |   Last Updated: 19th July 2021 07:13 PM   |  A+A-


Accident Photo

ಅಪಘಾತದ ದೃಶ್ಯ

Posted By : Vishwanath S
Source : PTI

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಡೇರಾ ಘಾಜಿ ಖಾನ್ ನ ಸಿಂಧೂ ಹೆದ್ದಾರಿಯಲ್ಲಿ ಪ್ರಯಾಣಿಕರ ಬಸ್ ವೊಂದು ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 30 ಜನರು ಸಾವನ್ನಪ್ಪಿದ್ದು, ಇತರ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ನತದೃಷ್ಟ ಬಸ್ ಸಿಯಾಲ್ ಕೋಟ್ ನಿಂದ ರಾಜನ್ ಪುರಕ್ಕೆ ತೆರಳುತ್ತಿತ್ತು. ಅಪಘಾತ ಸ್ಥಳಕ್ಕೆ ತಕ್ಷಣವೇ ರಕ್ಷಣಾ ಸಿಬ್ಬಂದಿ ಧಾವಿಸಿ,ಗಾಯಾಳುಗಳನ್ನು ಡೇರಾ ಘಾಜಿ ಖಾನ್ ನ ಡಿಎಚ್ ಕ್ಯು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಡೇರಾ ಘಾಜಿ ಖಾನ್ ನ ಆಯುಕ್ತ ಡಾ.ಇರ್ಷಾದ್ ಅಹ್ಮದ್ ತಿಳಿಸಿದ್ದಾರೆ. 

ಗಾಯಗೊಂಡ ನಾಲ್ವರ ಸ್ಥಿತಿ ಗಂಭೀರವಾಗಿದ್ದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ. ಘಟನೆಯಲ್ಲಿ 30 ಮಂದಿ ಸಾವನ್ನಪ್ಪಿರುವುದನ್ನು ಪಾಕಿಸ್ತಾನ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಚೌಧರಿ ದೃಢಪಡಿಸಿದ್ದಾರೆ.

ರಸ್ತೆ ಅಪಘಾತಗಳನ್ನು ತಪ್ಪಿಸಲು ಮತ್ತು ಜನರ ಜೀವ ಉಳಿಸಲು ಜನರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಮತ್ತು ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಫವಾದ್ ಹೇಳಿದ್ದಾರೆ. ಘಟನೆಯ ಬಗ್ಗೆ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಮತ್ತು ಆಂತರಿಕ ಸಚಿವ ಶೇಖ್ ರಶೀದ್ ಸಹ ದುಃಖ ವ್ಯಕ್ತಪಡಿಸಿದ್ದಾರೆ.


Stay up to date on all the latest ಅಂತಾರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp