ಇಸ್ರೇಲಿನ ಪೆಗಾಸಸ್ ಸ್ಪೈವೇರ್ ಗೆ ವಿಶ್ವದಾದ್ಯಂತ 50,000 ಫೋನ್ ನಂಬರ್ ಲಿಂಕ್: ವರದಿ

ವಿಶ್ವದಾದ್ಯಂತದ ಕಾರ್ಯಕರ್ತರು, ಪತ್ರಕರ್ತರು, ವ್ಯಾಪಾರ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿದಂತೆ ಹತ್ತಾರು ಸ್ಮಾರ್ಟ್‌ಫೋನ್ ಸಂಖ್ಯೆಗಳ ಡಾಟಾವನ್ನು ಸರ್ಕಾರಗಳಿಗೆ ಸ್ಪೈವೇರ್ ಸರಬರಾಜು ಮಾಡಿದ ಆರೋಪವನ್ನು ಇಸ್ರೇಲಿನ ಪೆಗಾಗಸ್ ಸಂಸ್ಥೆ ಮೇಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ವಿಶ್ವದಾದ್ಯಂತದ ಕಾರ್ಯಕರ್ತರು, ಪತ್ರಕರ್ತರು, ವ್ಯಾಪಾರ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿದಂತೆ ಹತ್ತಾರು ಸ್ಮಾರ್ಟ್‌ಫೋನ್ ಸಂಖ್ಯೆಗಳ ಡಾಟಾವನ್ನು ಸರ್ಕಾರಗಳಿಗೆ ಸ್ಪೈವೇರ್ ಸರಬರಾಜು ಮಾಡಿದ ಆರೋಪವನ್ನು ಇಸ್ರೇಲಿನ ಪೆಗಾಗಸ್ ಸಂಸ್ಥೆ ಮೇಲಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಭಿನ್ನಮತೀಯರ ಮೇಲೆ ಕಣ್ಣಿಡಲು ಈ ಸ್ಪೈವೇರ್ ಸಹಾಯ ಮಾಡಿದೆ ಎಂದು 2016ರಲ್ಲಿ ಸಂಶೋಧಕರು ಆರೋಪಿಸಿದಾಗಿನಿಂದ ಈ ವಿಷಯ ಸುದ್ದಿಯಲ್ಲಿದೆ. ಎನ್ಎಸ್ಒ ಗ್ರೂಪ್ ಮತ್ತು ಪೆಗಾಸಸ್ ಮಾಲ್ವೇರ್ - ಫೋನ್‌ನ ಕ್ಯಾಮೆರಾ ಅಥವಾ ಮೈಕ್ರೊಫೋನ್ ಅನ್ನು ಬದಲಾಯಿಸುವ ಮತ್ತು ಅದರ ಡೇಟಾ ಪಡೆಯುತ್ತದೆ ಸಾಮರ್ಥ್ಯವಿದೆ ಎಂದು ಆರೋಪ ಕೇಳಿಬಂದಿತ್ತು.

ದಿ ವಾಷಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್, ಲೆ ಮಾಂಡೆ ಮತ್ತು ಇತರ ಮಾಧ್ಯಮಗಳ ಸಹಯೋಗದ ತನಿಖೆ ಗೌಪ್ಯತೆ ಕಾಳಜಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಖಾಸಗಿ ಸಂಸ್ಥೆಯ ಸಾಫ್ಟ್‌ವೇರ್ ಗಳನ್ನು ಎಷ್ಟು ಪ್ರಮಾಣದಲ್ಲಿ ದುರುಪಯೋಗಪಡಿಸಿಕೊಳ್ಳಬಹುದು ಎಂಬುದನ್ನು ಬಹಿರಂಗಪಡಿಸಿದೆ.

2016ರಿಂದ ಎನ್‌ಎಸ್‌ಒಯಿಂದ ಸುಮಾರು 50,000ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್ ಸಂಖ್ಯೆಗಳು ಸೋರಿಕೆಯಾಗಿದೆ ಎಂದು ಸುದ್ದಿ ಸಂಸ್ಥೆಗಳು ತಿಳಿಸಿವೆ. ಆದರೂ ಎಷ್ಟು ಸಾಧನಗಳನ್ನು ನಿಜವಾಗಿ ಗುರಿಪಡಿಸಲಾಗಿದೆ ಅಥವಾ ಸಮೀಕ್ಷೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ತನ್ನ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಎಂದು ವಾದಿಸಿದೆ.

ಈ ಪಟ್ಟಿಯಲ್ಲಿ ಮೆಕ್ಸಿಕೋದ 15,000 ಸಂಖ್ಯೆಗಳಿವೆ. ಇನ್ನು ಭಾರತದ ರಾಜಕಾರಣಿಗಳು ಮತ್ತು ಪ್ರಮುಖ ಪತ್ರಕರ್ತರು ಸೇರಿದಂತೆ 300 ಜನರ ನಂಬರ್ ಗಳಿವೆ.

2019ರಲ್ಲಿ ತನ್ನ ನಾಗರಿಕರ ಮೇಲೆ ಕಣ್ಣಿಡಲು ಮಾಲ್ವೇರ್ ಬಳಸಲಾಗುತ್ತಿದೆ ಎಂಬುದನ್ನು ಕಳೆದ ವಾರ ಕೇಂದ್ರ ಸರ್ಕಾರ ನಿರಾಕರಿಸಿತ್ತು. ಅಲ್ಲದೆ ನಿರ್ದಿಷ್ಟ ಜನರ ಮೇಲೆ ಸರ್ಕಾರದ ಕಣ್ಗಾವಲು ಕುರಿತ ಆರೋಪಗಳಿಗೆ ಯಾವುದೇ ದೃಢವಾದ ಆಧಾರ ಅಥವಾ ಸತ್ಯವಿಲ್ಲ ಎಂದು ಪುನರುಚ್ಛರಿಸಿತ್ತು.

ಈ ಪಟ್ಟಿಯಲ್ಲಿರುವ 37 ಸ್ಮಾರ್ಟ್‌ಫೋನ್‌ಗಳ ಫೋರೆನ್ಸಿಕ್ ವಿಶ್ಲೇಷಣೆಯು 2018ರಲ್ಲಿ ಕೊಲೆಯಾಗಿದ್ದ ಸೌದಿ ಪತ್ರಕರ್ತ ಜಮಾಲ್ ಖಶೋಗ್ಗಿ ಮತ್ತು ಅವರ ಆಪ್ತ ಇಬ್ಬರು ಮಹಿಳೆಯರನ್ನು ಸಾಫ್ಟ್ ವೇರ್ ಮೂಲಕ ಹ್ಯಾಕ್‌ ಮಾಡಲಾಗಿದೆ ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com