ಲಂಡನ್: 'ಚಾರ್ಲಿ ಹೆಬ್ಡೊ' ಟಿ-ಶರ್ಟ್ ಧರಿಸಿದ್ದ ಮಹಿಳೆಗೆ ಚೂರು ಇರಿತ

ಲಂಡನ್ ಪಾರ್ಕ್ ನಲ್ಲಿ ಚಾರ್ಲಿ ಹೆಬ್ಡೊ' ಟಿ-ಶರ್ಟ್ ಧರಿಸಿದ್ದ ಮಹಿಳೆಗೆ ಆಗಂತುಕ ಚೂರಿ ದಾಳಿ ನಡೆಸಿದ್ದು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಬ್ರಿಟನ್ ಪೊಲೀಸರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಲಂಡನ್ ಪಾರ್ಕ್ ನಲ್ಲಿ ಚಾರ್ಲಿ ಹೆಬ್ಡೊ' ಟಿ-ಶರ್ಟ್ ಧರಿಸಿದ್ದ ಮಹಿಳೆಗೆ ಆಗಂತುಕ ಚೂರಿ ದಾಳಿ ನಡೆಸಿದ್ದು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಬ್ರಿಟನ್ ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಫ್ರೆಂಚ್ ನಿಯತಕಾಲಿಕೆ ಚಾರ್ಲಿ ಹೆಬ್ಡೊ ಮೇಲೆ ಜಿಹಾದಿಗಳು ದಾಳಿ ನಡೆಸಿದ್ದರು. ಇನ್ನು ಮಹಿಳೆ ಚಾರ್ಲಿ ಹೆಬ್ಡೊ ಕಾರ್ಟೂನ್‌ ಟಿ ಶರ್ಟ್ ಧರಿಸಿರುವುದು ದೃಶ್ಯಾವಳಿಗಳಿಂದ ತಿಳಿದುಬಂದಿದೆ ಎಂದರು.

ಹೈಡ್ ಪಾರ್ಕ್‌ನ ಸ್ಪೀಕರ್ಸ್ ಕಾರ್ನರ್‌ನಲ್ಲಿ ಭಾನುವಾರ ಮಧ್ಯಾಹ್ನ ನಡೆದ ದಾಳಿಯಲ್ಲಿ 39 ವರ್ಷದ ಮಹಿಳೆ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ.

ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಛತ್ರಿ ಹಿಡಿದುಕೊಂಡಿದ್ದ ಮಹಿಳೆ ಮೇಲೆ ವ್ಯಕ್ತಿಯೋರ್ವ ಚಾಕುವಿನಿಂದ ಹಲವು ಬಾರಿ ಇರಿದಿರುವುದು ಸ್ಪಷ್ಟವಾಗಿ ಕಾಣಿಸಿದೆ ಎಂದರು.

ಮಹಿಳೆ ಧರಿಸಿದ್ದ ಟಿ-ಶರ್ಟ್‌ನಲ್ಲಿ ಚಾರ್ಲಿ ಹೆಬ್ಡೊ ಲಾಂಗೋ ಮತ್ತು ಕಾರ್ಟೂನ್ ಇದೆ. ಕಾರ್ಟೂನ್ ಗೆ ಮುಸ್ಲಿಂ ವ್ಯಕ್ತಿಯೊಬ್ಬ ಚುಂಬಿಸುತ್ತಿರುವುದು ಕಾಣಬಹುದಾಗಿದೆ. ಪ್ರೀತಿ ದ್ವೇಷಕ್ಕಿಂತ ಬಲವಾಗಿದೆ ಎಂದು ಬರೆಯಲಾಗಿದೆ.

ಮೊಹಮ್ಮದ್ ಪೈಗಂಬರ್ ವಿವಾದಾತ್ಮಕ ಚಿತ್ರ ಪ್ರಕಟಿಸಿದ್ದ ಚಾರ್ಲಿ ಹೆಬ್ಡೊದ ಮೇಲೆ 2015ರ ಜನವರಿಯಲ್ಲಿ ದಾಳಿ ನಡೆದಿದ್ದು ಈ ವೇಳೆ 12 ಮಂದಿ ಸಿಬ್ಬಂದಿ ಮೃತಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com