2 ನೇ ಹಂತದ ಲಾಟರಿ ಮೂಲಕ ಹೆಚ್1ಬಿ ವೀಸಾ ಅರ್ಜಿಗಳ ಆಯ್ಕೆಗೆ ಮುಂದಾದ ಅಮೆರಿಕ 

ಅಪರೂಪವಾಗಿ ನಡೆಸುವ ಎರಡನೇ ಲಾಟರಿಯ ಮೂಲಕ ಮೊದಲ ಹಂತದ ಆಯ್ಕೆಯಲ್ಲಿ ವೀಸಾ ಪಡೆಯಲು ಸಾಧ್ಯವಾಗದ ವಿದೇಶಿಗರಿಗೆ ಹೆಚ್1 ಬಿ ವೀಸಾ ಆಯ್ಕೆ ಮಾಡಲು ಅಮೆರಿಕ ಮುಂದಾಗಿದೆ. 
ಹೆಚ್1ಬಿ ವೀಸಾ
ಹೆಚ್1ಬಿ ವೀಸಾ

ವಾಷಿಂಗ್ ಟನ್: ಅಮೆರಿಕದ ಹೆಚ್1 ಬಿ ವೀಸಾ ಪಡೆಯಲು ಯತ್ನಿಸುತ್ತಿದ್ದ ಭಾರತೀಯ ಐಟಿ ಉದ್ಯೋಗಿಗಳಿಗೆ ಅಮೆರಿಕ ಸಿಹಿ ಸುದ್ದಿ ನೀಡಿದ್ದು, ಅಲ್ಲಿನ ವಲಸೆ ಸಂಸ್ಥೆ (immigration agency) ಅಪರೂಪವಾಗಿ ನಡೆಸುವ ಎರಡನೇ ಲಾಟರಿಯ ಮೂಲಕ ಮೊದಲ ಹಂತದ ಆಯ್ಕೆಯಲ್ಲಿ ವೀಸಾ ಪಡೆಯಲು ಸಾಧ್ಯವಾಗದ ವಿದೇಶಿಗರಿಗೆ ಹೆಚ್1 ಬಿ ವೀಸಾ ಆಯ್ಕೆ ಮಾಡಲು ಮುಂದಾಗಿದೆ. 

ಅಮೆರಿಕದ ಪೌರತ್ವ ಹಾಗೂ ವಲಸೆ ಸೇವೆ (ಯುಎಸ್ ಸಿಐಎಸ್) ಈ ಬಗ್ಗೆ ಮಾಹಿತಿ ನೀಡಿದ್ದು, ಈ ವರ್ಷದ ಪ್ರಾರಂಭದಲ್ಲಿ ನಡೆಸಲಾಗಿದ್ದ ಗಣಕೀಕೃತ ಡ್ರಾ ನಲ್ಲಿ ಕಾಂಗ್ರೆಸ್ ಅನುಮೋದನೆ ನೀಡಿರುವ ಸಂಖ್ಯೆಯಷ್ಟು ಹೆಚ್1 ಬಿ ವೀಸಾಗಳು ಆಯ್ಕೆಯಾಗಿರಲಿಲ್ಲ. 

ತಾಂತ್ರಿಕ ನೈಪುಣ್ಯತೆ ಹೊಂದಿರುವ ಐಟಿ ಉದ್ಯೋಗಿಗಳನ್ನು ಅಮೆರಿಕದ ಸಂಸ್ಥೆಗಳು ನೇಮಕ ಮಾಡಿಕೊಳ್ಳುವುದಕ್ಕಾಗಿ ಹೆಚ್1 ಬಿ ವೀಸಾಗಳು ಸಹಕಾರಿಯಾಗಿದ್ದು, ಐಟಿ ಕ್ಷೇತ್ರದಲ್ಲಿರುವ ಅತಿ ಹೆಚ್ಚು ಭಾರತೀಯ ಉದ್ಯೋಗಿಗಳು ಹೆಚ್1 ಬಿ ವೀಸ ಪಡೆಯುವುದಕ್ಕೆ ಯತ್ನಿಸುತ್ತಾರೆ. 

ವಾರ್ಷಿಕವಾಗಿ 65,000 ಹೆಚ್1 ಬಿ ವೀಸಾಗಳ ಮಿತಿಯನ್ನು ಅಮೆರಿಕದ ಕಾಂಗ್ರೆಸ್ ನಿಗದಿಪಡಿಸಿದೆ. ಅಮೆರಿಕದ ಸ್ನಾತಕೋತ್ತರ ಪದವಿ ಹೊಂದಿರುವವರಿಂದ ಸಲ್ಲಿಕೆಯಾಗುವ ಮೊದಲ 20,000 ಅರ್ಜಿಗಳಿಗೆ ಕಾಂಗ್ರೆಸ್ ನಿಗದಿಪಡಿಸಿರುವ ಮಿತಿಯಿಂದ ವಿನಾಯ್ತಿ ದೊರೆಯಲಿವೆ.

ಕಾಂಗ್ರೆಸ್ ನಿಗದಿಪಡಿಸಿರುವ ಸಂಖ್ಯೆಯ ಹೆಚ್1 ಬಿ ವೀಸಾಗಳನ್ನು ನೀಡುವುದಕ್ಕೆ ಮೊದಲ ಆಯ್ಕೆ ಪ್ರಕ್ರಿಯೆಯಲ್ಲಿ ಸಾಧ್ಯವಾಗಲಿಲ್ಲ ಈ ಹಿನ್ನೆಲೆಯಲ್ಲಿ ಅಪರೂಪವಾಗಿ ನಡೆಯುವ ಎರಡನೇ ಲಾಟರಿ ಪ್ರಕ್ರಿಯೆಯ ಮೂಲಕ ಹೆಚ್1 ಬಿ ವೀಸಾ ಅರ್ಜಿಗಳ ಆಯ್ಕೆ ನಡೆಸಲಾಗುತ್ತಿದೆ ಎಂದು ಅಮೆರಿಕ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com