ಕ್ಸಿನ್‌ಜಿಯಾಂಗ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪದ ತನಿಖೆ ಬದಲಿಗೆ 'ಸ್ನೇಹಪರ' ಭೇಟಿ ನೀಡಿ: ವಿಶ್ವಸಂಸ್ಥೆ ನಾಯಕರಿಗೆ ಚೀನಾ

ಕ್ಸಿನ್‌ಜಿಯಾಂಗ್‌ನಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ 'ಗಂಭೀರ' ವರದಿಗಳನ್ನು ಪರಿಶೀಲಿಸಲು ಯುಎನ್ ಮಾನವ ಹಕ್ಕುಗಳ ಹೈಕಮಿಷನರ್ಮಿಚೆಲ್ ಬಾಚೆಲೆಟ್ ಅವರ ಕರೆಯನ್ನು ಚೀನಾ ಮಂಗಳವಾರ ನಿರಾಕರಿಸಿದೆ, ಅಲ್ಲದೆ "ಸ್ನೇಹಪರ ಭೇಟಿಗೆ" ಸ್ವಾಗತವಿದೆ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಕ್ಸಿನ್‌ಜಿಯಾಂಗ್‌ನಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ 'ಗಂಭೀರ' ವರದಿಗಳನ್ನು ಪರಿಶೀಲಿಸಲು ಯುಎನ್ ಮಾನವ ಹಕ್ಕುಗಳ ಹೈಕಮಿಷನರ್ಮಿಚೆಲ್ ಬಾಚೆಲೆಟ್ ಅವರ ಕರೆಯನ್ನು ಚೀನಾ ಮಂಗಳವಾರ ನಿರಾಕರಿಸಿದೆ, ಅಲ್ಲದೆ "ಸ್ನೇಹಪರ ಭೇಟಿಗೆ" ಸ್ವಾಗತವಿದೆ ಎಂದು ಹೇಳಿದೆ.

ಯುಎಸ್ ಮತ್ತು ಇಯು ಇತರ ಹಲವು ದೇಶಗಳ ಜೊತೆಗೆ ಚೀನಾ ಕ್ಸಿನ್‌ಜಿಯಾಂಗ್‌ನಲ್ಲಿರುವ ಅಲ್ಪಸಂಖ್ಯಾತ ಮುಸ್ಲಿಂ ಉಯಿಗರ್‌ಗಳ ವಿರುದ್ಧ ನರಮೇಧವನ್ನು ನಡೆಸಿದೆ ಎಂದು ಆರೋಪಿಸಿದೆ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಅಂತರರಾಷ್ಟ್ರೀಯ ತನಿಖೆಗೆ ಕರೆ ನೀಡಿವೆ.

ಸೋಮವಾರ ಜಿನೀವಾದಲ್ಲಿ ನಡೆದ ಮಾನವ ಹಕ್ಕುಗಳ ಮಂಡಳಿಯ 47 ನೇ ಅಧಿವೇಶನದಲ್ಲಿ ಅವರು ಮಾಡಿದ ಭಾಷಣದಲ್ಲಿ, ಬ್ಯಾಚೆಲೆಟ್, 'ಕ್ಸಿನ್‌ಜಿಯಾಂಗ್ ಉಯಿಘರ್ ಸ್ವಾಯತ್ತ ಪ್ರದೇಶಕ್ಕೆ ಅರ್ಥಪೂರ್ಣ ಪ್ರವೇಶ ಸೇರಿದಂತೆ ಭೇಟಿಗಾಗಿ ನಾನು ಚೀನಾ ಜತೆಗೆ ಚರ್ಚಿಸುವುದನ್ನು ಮುಂದುವರಿಸಿದ್ದೇನೆ ಮತ್ತು ಇದನ್ನು ಸಾಧಿಸಬಹುದು ಎಂದು ಭಾವಿಸುತ್ತೇವೆ

ಧಾರ್ಮಿಕ ಉಗ್ರವಾದದಿಂದ ದೂರವಾಗುವುದನ್ನು ತಪ್ಪಿಸುವ ಉದ್ದೇಶದಿಂದ, ಶಿಕ್ಷಣ ಶಿಬಿರ ಎಂಬ  ಸಾಮೂಹಿಕ ಬಂಧನ ಶಿಬಿರಗಳಲ್ಲಿ ಲಕ್ಷಾಂತರ ಉಯಿಗರ್‌ಗಳನ್ನು ಬಂಧಿಸಲಾಗಿದೆ ಎಂಬ ಆರೋಪವನ್ನು ಚೀನಾ ಬಲವಾಗಿ ನಿರಾಕರಿಸಿದೆ.

ಬಾಚೆಲೆಟ್  ಅವರ ಟೀಕೆಗಳಿಗೆ ಚೀನಾದ  ತಿಕ್ರಿಯೆ ಕೇಳಿದಾಗ, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾ ವೋ ಲಿಜಿಯಾನ್ ಕ್ಸಿನ್‌ಜಿಯಾಂಗ್ ಸಂಬಂಧಿತ ವಿಷಯಗಳ ಬಗ್ಗೆ ಯುಎನ್‌ನ ಉನ್ನತ ಮಾನವ ಹಕ್ಕುಗಳ ಮುಖ್ಯಸ್ಥರು ನೀಡಿರುವ ಹೇಳಿಕೆಗಳು "ಸತ್ಯಗಳಿಗೆ ವಿರುದ್ಧವಾಗಿದೆ" ಎಂದು ಹೇಳಿದರು.

"ಕ್ಸಿನ್‌ಜಿಯಾಂಗ್‌ಗೆ ಭೇಟಿ ನೀಡಲು ಹೈಕಮಿಷನರ್ ಅವರನ್ನು ನಾವು ಸ್ವಾಗತಿಸುತ್ತೇವೆ. ಕ್ಸಿನ್‌ಜಿಯಾಂಗ್ ಭೇಟಿಗಾಗಿ ಚೀನಾಕ್ಕೆ ಬರಲು ನಾವು ಹೈಕಮಿಷನರ್‌ಗೆ ಬಹಳ ಹಿಂದೆಯೇ ಆಹ್ವಾನವನ್ನು ನೀಡಿದ್ದೇವೆ ಮತ್ತು ಈ ವಿಷಯದ ಕುರಿತು ನಾವು ಸಂವಹನ ನಡೆಸುತ್ತಿದ್ದೇವೆ. ಈ ಭೇಟಿಯು ತಪ್ಪಿಗಾಗಿ  ತನಿಖೆ ಎಂದು ಕರೆಯಲ್ಪಡುವ ಬದಲು ದ್ವಿಪಕ್ಷೀಯ ವಿನಿಮಯ ಮತ್ತು ಸಹಕಾರವನ್ನು ಉತ್ತೇಜಿಸುವ ಉದ್ದೇಶದಿಂದ ಸ್ನೇಹಪರ ಭೇಟಿಯಾಗಿರಬೇಕು" ಎಂದು ಅವರು ಹೇಳಿದ್ದಾರೆ.

"ಈ ಸಮಸ್ಯೆಯನ್ನು ಬಳಸಿಕೊಂಡು ರಾಜಕೀಯ ಕುಶಲತೆ ತೋರಲು  ಚೀನಾದ ಮೇಲೆ ಒತ್ತಡ ಹೇರಲು ಯಾರಾದರೂ ಮಾಡುವ ಯಾವುದೇ ಪ್ರಯತ್ನವನ್ನು ನಾವು  ವಿರೋಧಿಸುತ್ತೇವೆ" ಎಂದು ಅವರು ಹೇಳಿದರು.

ಕ್ಸಿನ್‌ಜಿಯಾಂಗ್‌ನಲ್ಲಿ ಮುಸ್ಲಿಂ ಉಯಿಗರ್‌ಗಳ ವಿರುದ್ಧದ ನರಮೇಧದ ಆರೋಪದ ಬಗ್ಗೆ ತನಿಖೆ ನಡೆಸಲು ಒತ್ತಾಯಿಸುತ್ತಿರುವ ಯುಎಸ್ ಮತ್ತು ಇಯು ಅನ್ನು ನೇರವಾಗಿ ಹೆಸರಿಸದೆ, ಕೆಲವು ದೇಶಗಳು ಚೀನಾವನ್ನು ಹಣಿಯಲು  ಮತ್ತು ಚೀನಾದ ಅಭಿವೃದ್ಧಿಯನ್ನು ಕುಂದಿಸಲು  ಕ್ಸಿನ್‌ಜಿಯಾಂಗ್ ವಿರುದ್ಧ "ಸುಳ್ಳು ಮತ್ತು ತಪ್ಪು ಮಾಹಿತಿ" ಹರಡುತ್ತಿವೆ ಎಂದು ಹೇಳಿದರು.

"ಕ್ಸಿನ್‌ಜಿಯಾಂಗ್ ಪ್ರಾಂತ್ಯದ ಉಯಿಘರ್ ಮುಸ್ಲಿಂ ಬಹುಸಂಖ್ಯಾತ ಪ್ರಾಂತ್ಯದಲ್ಲಿ ನೆಲೆಗೊಂಡಿರುವ ಪೂರ್ವ ತುರ್ಕಿಸ್ತಾನ್ ಇಸ್ಲಾಮಿಕ್ ಮೂವ್‌ಮೆಂಟ್ (ಇಟಿಐಎಂ), 2013 ರಲ್ಲಿ ಬೀಜಿಂಗ್‌ನ ನಿಷೇಧಿತ ನಗರದಲ್ಲಿ ನಡೆದ ಒಂದು ಘಟನೆ ಸೇರಿದಂತೆ ಪ್ರಾಂತ್ಯ ಮತ್ತು ಹೊರಗಡೆ ಹಲವಾರು ಹಿಂಸಾತ್ಮಕ ದಾಳಿಗೆ ಕಾರಣವಾಗಿದೆ ಎಂದು ಚೀನಾ ಆರೋಪಿಸಿದೆ. ಕಳೆದ ವರ್ಷ ಕ್ಸಿನ್‌ಜಿಯಾಂಗ್‌ನ ಪ್ರತ್ಯೇಕತಾವಾದಿ ಉಗ್ರಗಾಮಿ ಸಂಘಟನೆಯನ್ನು ತನ್ನ ಭಯೋತ್ಪಾದಕ ಸಂಘಟನೆಗಳ ಪಟ್ಟಿಯಿಂದ  ತೆಗೆದುಹಾಕಿದ್ದಕ್ಕಾಗಿ ಅದು ತೀವ್ರವಾಗಿ ಟೀಕಿಸಿತ್ತು, ಇದು ಜಾಗತಿಕ ಭಯೋತ್ಪಾದನೆಯ ವಿರುದ್ಧ ಹೋರಾಡುವ ಅಮೆರಿಕಾದ ದ್ವಿಮುಖ ನೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com