ಪ್ರತಿಕಾರದ ದಾಳಿ: ಏರ್ ಸ್ಟ್ರೈಕ್ ಮೂಲಕ ಗಾಜಾದ ಸುರಂಗಗಳನ್ನು ಧ್ವಂಸ ಮಾಡಿದ ಇಸ್ರೇಲ್

ಗಾಜಾ ಪ್ರದೇಶದಲ್ಲಿ ಏರ್ ಸ್ಟ್ರೈಕ್ ನಡೆಸಿ 15 ಕಿಲೋಮೀಟರ್ (ಒಂಬತ್ತು ಮೈಲಿ) ಉದ್ದದ ಉಗ್ರ ಸುರಂಗಗಳು ಮತ್ತು ಒಂಬತ್ತು ಹಮಾಸ್ ಕಮಾಂಡರ್ಗಳ ಮನೆಗಳನ್ನು ಇಸ್ರೇಲ್ ಸೇನೆ ನಾಶಪಡಿಸಿದೆ. 
ದಾಳಿಗೊಳಗಾದ ಸುರಂಗದ ದೃಶ್ಯ
ದಾಳಿಗೊಳಗಾದ ಸುರಂಗದ ದೃಶ್ಯ

ಗಾಜಾ ಸಿಟಿ: ಗಾಜಾ ಪ್ರದೇಶದಲ್ಲಿ ಏರ್ ಸ್ಟ್ರೈಕ್ ನಡೆಸಿ 15 ಕಿಲೋಮೀಟರ್(ಒಂಬತ್ತು ಮೈಲಿ) ಉದ್ದದ ಉಗ್ರ ಸುರಂಗಗಳು ಮತ್ತು ಒಂಬತ್ತು ಹಮಾಸ್ ಕಮಾಂಡರ್ಗಳ ಮನೆಗಳನ್ನು ಇಸ್ರೇಲ್ ಸೇನೆ ನಾಶಪಡಿಸಿದೆ. 

ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು ಇಸ್ರೇಲ್ ಸೇನೆ ಕಳೆದ ಒಂದು ವಾರದಿಂದ ಗಾಜಾ ಸಿಟಿ ಮೇಲೆ ನಿಂತರ ದಾಳಿ ನಡೆಸುತ್ತಿದೆ. ಇಸ್ರೇಲಿ ಮಿಲಿಟರಿ ಹಮಾಸ್‌ನ ಉಗ್ರಗಾಮಿಗಳ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ನೂರಾರು ವೈಮಾನಿಕ ದಾಳಿಗಳನ್ನು ನಡೆಸಿದೆ.

ಈ ಹಿಂದಿನ ದಾಳಿಯಲ್ಲಿ 42 ಮಂದಿ ಮೃತಪಟ್ಟಿದ್ದು ಮೂರು ಕಟ್ಟಡಗಳು ನೆಲಸಮಗೊಂಡಿವೆ. ಬೆಳಗ್ಗಿನ ಸ್ಟ್ರೈಕ್‌ ನಿಂದ ಮೃತಪಟ್ಟವರ ಬಗ್ಗೆ ತಕ್ಷಣದ ಮಾಹಿತಿ ಇಲ್ಲ. ಗಾಜಾ ನಗರದಲ್ಲಿ ಮೂರು ಅಂತಸ್ತಿನ ಕಟ್ಟಡವು ಹೆಚ್ಚು ಹಾನಿಗೊಳಗಾಗಿದೆ. ಏರ್ ಸ್ಟ್ರೈಕ್ ಗೂ ಮುನ್ನ 10 ನಿಮಿಷಗಳ ಮೊದಲು ಮಿಲಿಟರಿ ಎಚ್ಚರಿಕೆ ನೀಡಿತು. ಹೀಗಾಗಿ ಎಲ್ಲರೂ ಜಾಗ ಖಾಲಿ ಮಾಡಿದ್ದರು ಎಂದು ನಿವಾಸಿಗಳು ಹೇಳಿದ್ದಾರೆ. 

ಗಾಜಾ ಮೇಯರ್ ಯಾಹ್ಯಾ ಸರ್ರಾಜ್ ಅಲ್-ಜಜೀರಾ ಟಿವಿಗೆ ವೈಮಾನಿಕ ದಾಳಿಯು ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯನ್ನುಂಟು ಮಾಡಿದೆ ಎಂದು ಹೇಳಿದರು. "ಸಂಘರ್ಷ ಹೀಗೆ ಮುಂದುವರಿದರೆ ಪರಿಸ್ಥಿತಿಗಳು ಹದಗೆಡುತ್ತವೆ ಎಂದು ಅವರು ಹೇಳಿದರು.

ಗಾಜಾದ ಏಕೈಕ ವಿದ್ಯುತ್ ಕೇಂದ್ರವು ಇಂಧನದ ಕೊರತೆಯಿಂದಾಗಿ ಸ್ಥಬ್ಧಗೊಳ್ಳಲಿದೆ ಯು.ಎನ್. ಭೂಪ್ರದೇಶವು ಈಗಾಗಲೇ 8-12 ಗಂಟೆಗಳ ದೈನಂದಿನ ವಿದ್ಯುತ್ ಕಡಿತವನ್ನು ಅನುಭವಿಸುತ್ತದೆ. ಇನ್ನು ನೀರಿನ ಸರಬರಾಜು ಕಡಿಮೆಯಾಗಿದೆ ಎಂದರು.  

ಗಾಜಾದ ಪ್ಯಾಲೇಸ್ಟಿನಿಯನ್ ಉಗ್ರರು ಇಸ್ರೇಲ್‌ ಮೇಲೆ 3,100 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿದ್ದಾರೆ. ಗಾಜಾದಲ್ಲಿ ನೂರಾರು ವೈಮಾನಿಕ ದಾಳಿಯಲ್ಲಿ ಕನಿಷ್ಠ 188 ಪ್ಯಾಲೆಸ್ಟೀನಿಯಾದ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 55 ಮಕ್ಕಳು ಮತ್ತು 33 ಮಹಿಳೆಯರು ಸೇರಿದ್ದಾರೆ, 1,230 ಜನರು ಗಾಯಗೊಂಡಿದ್ದಾರೆ. ಇತ್ತ ಇಸ್ರೇಲ್ ಕಡೆ 5 ವರ್ಷದ ಬಾಲಕ ಮತ್ತು ಯೋಧ ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com