ಜಾಗತಿಕ ಪ್ರಾಮುಖ್ಯತೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಿ-20 ಶೃಂಗಸಭೆ 'ಫಲಪ್ರದ': ಪ್ರಧಾನಿ ಮೋದಿ

ರೋಮ್ ನಲ್ಲಿ ನಡೆದ ಎರಡು ದಿನಗಳ ಜಿ-20 ಶೃಂಗಸಭೆ "ಫಲಪ್ರದ"ವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಣ್ಣಿಸಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ರೋಮ್: ರೋಮ್ ನಲ್ಲಿ ನಡೆದ ಎರಡು ದಿನಗಳ ಜಿ-20 ಶೃಂಗಸಭೆ "ಫಲಪ್ರದ"ವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಣ್ಣಿಸಿದ್ದಾರೆ.

‘ರೋಮ್‌ನಲ್ಲಿ ನಡೆದ ಜಿ-20 ರಾಷ್ಟ್ರಗಳ ಶೃಂಗಸಭೆ ಫಲಪ್ರದವಾಗಿದೆ. ಈ ಶೃಂಗಸಭೆಯ ನಂತರ ನಾವು ಗ್ಲಾಸ್ಗೊಗೆ ಹೊರಟಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಶೃಂಗಸಭೆಯಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದು, ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವುದು, ಆರ್ಥಿಕ ಸಹಕಾರವನ್ನು ಹೆಚ್ಚಿಸುವುದು ಮತ್ತು ಆವಿಷ್ಕಾರದತ್ತ ಗಮನಹರಿಸುವುದು ಸೇರಿದಂತೆ ಜಾಗತಿಕ ಪ್ರಾಮುಖ್ಯತೆಯ ಹಲವು ವಿಷಯಗಳ ಕುರಿತು ವಿಶ್ವ ನಾಯಕರು ವಿಸ್ತೃತವಾದ ಚರ್ಚೆ ನಡೆಸಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಜಿ20 ಸಮಿತಿಯ ನಾಯಕರು ಎರಡು ದಿನಗಳ ಶೃಂಗಸಭೆಯಲ್ಲಿ ಪ್ರಕಟಿಸಲಾದ 'ರೋಮ್ ಘೋಷಣೆ'ಯನ್ನು ಅಳವಡಿಸಿಕೊಳ್ಳಲು ಒಪ್ಪಿಗೆ ಸೂಚಿಸಿದರು. ಮಾತ್ರವಲ್ಲ, ‘ಕೋವಿಡ್-19‘ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಜಾಗತಿಕವಾಗಿ ಒಳಿತಾಗುತ್ತದೆ ಎಂದು  ಒಪ್ಪಿಕೊಳ್ಳುವ ಮೂಲಕ  ಆರೋಗ್ಯ ಕ್ಷೇತ್ರದಲ್ಲಿನ ಬೆಳವಣಿಗೆಗಳ ಕುರಿತು ಪರಿಣಾಮಕಾರಿ ಸಂದೇಶವನ್ನು ನೀಡಿದ್ದಾರೆ.

ಇಂಧನ ಮತ್ತು ಹವಾಮಾನ ಈ ಎರಡೂ ವಿಷಯಗಳ ಬಗ್ಗೆ ಜಿ20 ಶೃಂಗಸಭೆಯಲ್ಲಿ ಹೆಚ್ಚು ಚರ್ಚೆ ನಡೆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com