ವಿದೇಶಿ ಕರೆನ್ಸಿ ನಿಷೇಧಿಸಿದ ಅಫ್ಘಾನಿಸ್ತಾನ: ಉಲ್ಲಂಘನೆ ಮಾಡುವವರಿಗೆ 'ಕ್ರಮ'ದ ಎಚ್ಚರಿಕೆ
ಈಗಾಗಲೇ ಕುಸಿಯುತ್ತಿರುವ ಅಫ್ಘಾನಿಸ್ತಾನದ ಆರ್ಥಿಕತೆ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಮತ್ತೊಂದು ನಿರ್ಧಾರವನ್ನು ತಾಲೀಬಾನ್ ಕೈಗೊಂಡಿದ್ದು ವಿದೇಶಿ ಕರೆನ್ಸಿ ಬಳಕೆಯ ಮೇಲೆ ಸಂಪೂರ್ಣ ನಿಷೇಧ ಹೇರಿದೆ.
Published: 03rd November 2021 05:20 PM | Last Updated: 04th November 2021 01:39 PM | A+A A-

ತಾಲೀಬಾನ್
ಕಾಬೂಲ್: ಈಗಾಗಲೇ ಕುಸಿಯುತ್ತಿರುವ ಅಫ್ಘಾನಿಸ್ತಾನದ ಆರ್ಥಿಕತೆ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಮತ್ತೊಂದು ನಿರ್ಧಾರವನ್ನು ತಾಲೀಬಾನ್ ಕೈಗೊಂಡಿದ್ದು ವಿದೇಶಿ ಕರೆನ್ಸಿ ಬಳಕೆಯ ಮೇಲೆ ಸಂಪೂರ್ಣ ನಿಷೇಧ ಹೇರಿದೆ.
ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿ ಯಾರಾದರೂ ವಿದೇಶಿ ಕರೆನ್ಸಿ ಬಳಸಿದ್ದೇ ಆದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಾಲೀಬಾನ್ ಎಚ್ಚರಿಕೆ ನೀಡಿದೆ.
"ಇಸ್ಲಾಮಿಕ್ ಎಮಿರೇಟ್ (ತಾಲೀಬಾನ್) ಎಲ್ಲಾ ನಾಗರಿಕರಿಗೆ, ಅಂಗಡಿಗಳಿಗೆ, ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಅಫ್ಘಾನಿಯಲ್ಲೇ ವ್ಯವಹರಿಸಬೇಕು, ವಿದೇಶಿ ಕರೆನ್ಸಿಯನ್ನು ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.
ಅಫ್ಘಾನಿಸ್ತಾನದ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಹೆಚ್ಚು ಚಲಾವಣೆಯಲ್ಲಿರುವ ವಿನಿಮಯದ ಕರೆನ್ಸಿಯಾಗಿದೆ. ಗಡಿ ಭಾಗಗಳಲ್ಲಿ ಪಾಕಿಸ್ತಾನದ ದೇಶದ ಕರೆನ್ಸಿಯ ವಿನಿಮಯ ಹೆಚ್ಚಾಗಿದೆ.