ಜರ್ಮನಿಯ ಹೈಸ್ಪೀಡ್ ರೈಲಿನಲ್ಲಿ ಚಾಕುವಿನಿಂದ ದಾಳಿ, ಹಲವರಿಗೆ ಗಾಯ
ಜರ್ಮನಿಯಲ್ಲಿ ಹೈಸ್ಪೀಡ್ ರೈಲಿನಲ್ಲಿ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ನಡೆಸಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ಬೆಳಗ್ಗೆ ದೃಢಪಡಿಸಿದ್ದಾರೆ.
Published: 06th November 2021 06:17 PM | Last Updated: 06th November 2021 06:17 PM | A+A A-

ಸಾಂದರ್ಭಿಕ ಚಿತ್ರ
ಬರ್ಲಿನ್: ಜರ್ಮನಿಯಲ್ಲಿ ಹೈಸ್ಪೀಡ್ ರೈಲಿನಲ್ಲಿ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ನಡೆಸಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ಬೆಳಗ್ಗೆ ದೃಢಪಡಿಸಿದ್ದಾರೆ.
ಇಂದು ಬೆಳಗ್ಗೆ ಸ್ಥಳೀಯ ಕಾಲಮಾನ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ರೈಲಿನಲ್ಲಿ ಚಾಕುವಿನಿಂದ ದಾಳಿ ನಡೆಸಿದ ಬಗ್ಗೆ ತಾವು ಕರೆ ಸ್ವೀಕರಿಸಿದ್ದಾಗಿ ಪೊಲೀಸರು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.
ಈ ರೈಲು ಜರ್ಮನಿಯ ಹೈ-ಸ್ಪೀಡ್ ICE ರೈಲುಗಳಲ್ಲಿ ಒಂದಾಗಿದ್ದು, ದಾಳಿಯ ಸಮಯದಲ್ಲಿ ರೈಲು ಬವೇರಿಯನ್ ನಗರಗಳಾದ ರೆಗೆನ್ಸ್‌ಬರ್ಗ್ ಮತ್ತು ನ್ಯೂರೆಂಬರ್ಗ್ ನಡುವೆ ಪ್ರಯಾಣಿಸುತ್ತಿತ್ತು.
ಪ್ರಸ್ತುತ ರೈಲನ್ನು ನಿಲ್ಲಿಸಲಾಗಿದ್ದು, ಸೆಬರ್ಸ್‌ಡಾರ್ಫ್‌ನ ರೈಲು ನಿಲ್ದಾಣದಲ್ಲಿ ದಾಳಿಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ. ಆದರೆ ನಿರ್ದಿಷ್ಟವಾಗಿ ಎಷ್ಟು ಜನ ಗಾಯಗೊಂಡಿದ್ದಾರೆ ಎಂಬುದು ತಿಳಿದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.