ತೈಲ ಟ್ಯಾಂಕರ್ ಪಲ್ಟಿ: ತೈಲಕ್ಕಾಗಿ ಮುಗಿಬಿದ್ದ ಜನ; ಈ ವೇಳೆ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಠ 92 ಮಂದಿ ಸಜೀವದಹನ!

ಸಿಯೆರಾ ಲಿಯೋನ್ ರಾಜಧಾನಿ ಬಳಿ ತೈಲ ಟ್ಯಾಂಕರ್ ಪಲ್ಟಿಯಾಗಿದ್ದು ತೈಲವನ್ನು ಸಂಗ್ರಹಿಸಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದು ಈ ವೇಳೆ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 92 ಮಂದಿ ಸಜೀವ ದಹನವಾಗಿದ್ದಾರೆ. ಅಲ್ಲದೆ 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಫ್ರೀಟೌನ್: ಸಿಯೆರಾ ಲಿಯೋನ್ ರಾಜಧಾನಿ ಬಳಿ ತೈಲ ಟ್ಯಾಂಕರ್ ಪಲ್ಟಿಯಾಗಿದ್ದು ತೈಲವನ್ನು ಸಂಗ್ರಹಿಸಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದು ಈ ವೇಳೆ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 92 ಮಂದಿ ಸಜೀವ ದಹನವಾಗಿದ್ದಾರೆ. ಅಲ್ಲದೆ 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಫ್ರೀಟೌನ್‌ನ ಪೂರ್ವದ ಉಪನಗರವಾದ ವೆಲ್ಲಿಂಗ್‌ಟನ್‌ನಲ್ಲಿ ಕಳೆದ ರಾತ್ರಿ ಬಸ್ ಗೆ ಡಿಕ್ಕಿಯಾಗಿ ಟ್ಯಾಂಕರ್‌ ಪಲ್ಟಿಯಾಗಿತ್ತು. ಈ ವೇಳೆ ತೈಲ ಸಂಗ್ರಹಿಸಲು ಜನರು ಮುಗಿಬಿದ್ದಿದ್ದಾಗ ದುರಂತ ಸಂಭವಿಸಿದೆ.

ಕನ್ನಾಟ್ ಆಸ್ಪತ್ರೆಗೆ ಇಂದು ಬೆಳಿಗ್ಗೆ 92 ಶವಗಳನ್ನು ತರಲಾಗಿದೆ ಎಂದು ವರದಿಯಾಗಿದೆ. ಸಿಬ್ಬಂದಿ ಸದಸ್ಯ ಫೊಡೆ ಮೂಸಾ ಪ್ರಕಾರ, ಸುಮಾರು 30 ತೀವ್ರವಾಗಿ ಸುಟ್ಟ ಗಾಯಗಳಾಗಿದ್ದು ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ ಎಂದಿದ್ದಾರೆ.

ಘಟನೆ ಕುರಿತಂತೆ ಅಧ್ಯಕ್ಷ ಜೂಲಿಯಸ್ ಮಾದಾ ಬಯೋ, 'ಭಯಾನಕ ಜೀವಹಾನಿ' ಎಂದು ವಿಷಾದಿಸಿದರು.

ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಮತ್ತು ದುರಂತದಲ್ಲಿ ಅಂಗವಿಕಲರಾದವರಿಗೆ ನನ್ನ ಆಳವಾದ ಸಹಾನುಭೂತಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com