ಕೋವಿಡ್​-19 ಲಸಿಕೆ ಪಡೆದು ರಾತ್ರೋರಾತ್ರಿ ಮಿಲಿಯನೇರ್​ ಆದ ಯುವತಿ!

ಪ್ರಪಂಚದಾದ್ಯಂತ ಕೋವಿಡ್ -19 ಲಸಿಕೆಯನ್ನು ತೆಗೆದುಕೊಳ್ಳುವಂತೆ ಸರ್ಕಾರಗಳು ಜನರನ್ನು ಪ್ರೋತ್ಸಾಹಿಸುತ್ತಿವೆ. ಇದೇ ರೀತಿ ಆಸ್ಟ್ರೇಲಿಯಾದಲ್ಲಿ ಪ್ರೋತ್ಸಾಹ ನೀಡುವ ಸಲುವಾಗಿ ಲಸಿಕೆ ಲಾಟರಿ ಬಹುಮಾನವನ್ನು ಘೋಷಿಸಿತ್ತು.
ಜೋನ್ನೆ ಝು(ಚಿತ್ರ ಕೃಪೆ ಟ್ವಿಟರ್)
ಜೋನ್ನೆ ಝು(ಚಿತ್ರ ಕೃಪೆ ಟ್ವಿಟರ್)

ಸಿಡ್ನಿ: ಪ್ರಪಂಚದಾದ್ಯಂತ ಕೋವಿಡ್ -19 ಲಸಿಕೆಯನ್ನು ತೆಗೆದುಕೊಳ್ಳುವಂತೆ ಸರ್ಕಾರಗಳು ಜನರನ್ನು ಪ್ರೋತ್ಸಾಹಿಸುತ್ತಿವೆ. ಇದೇ ರೀತಿ ಆಸ್ಟ್ರೇಲಿಯಾದಲ್ಲಿ ಪ್ರೋತ್ಸಾಹ ನೀಡುವ ಸಲುವಾಗಿ ಲಸಿಕೆ ಲಾಟರಿ ಬಹುಮಾನವನ್ನು ಘೋಷಿಸಿತ್ತು.

ಆಸ್ಟ್ರೇಲಿಯಾದಲ್ಲಿ ಲಸಿಕೆ ಹಾಕಿಸಿಕೊಂಡ ಬಳಿಕ ರಾತ್ರೋರಾತ್ರಿ 25 ವರ್ಷದ ಮಹಿಳೆಯೊಬ್ಬರು ಮಿಲಿಯನೇರ್​ ಆಗಿದ್ದಾರೆ. ಈ ಬಹುಮಾನವನ್ನು ಗೆದ್ದ ಲಕ್ಷಾಂತರ ಆಸ್ಟ್ರೇಲಿಯನ್ನರಲ್ಲಿ ಜೋನ್ನೆ ಝು ಕೂಡ ಒಬ್ಬರು.

ಭಾನುವಾರ ಜೋನ್ನೆ ಝು ಅವರನ್ನು ದಿ ಮಿಲಿಯನ್ ಡಾಲರ್ ವ್ಯಾಕ್ಸ್ ಅಲೈಯನ್ಸ್ ಲಾಟರಿಯ ವಿಜೇತೆ ಎಂದು ಘೋಷಿಸಲಾಯಿತು. ಆಕೆ ಕೋವಿಡ್​​-19 ವ್ಯಾಕ್ಸಿನೇಷನ್‌ ಪಡೆದಿದ್ದಕ್ಕೆ 7.4 ಕೋಟಿ ರೂ. ಗೆದ್ದಿದ್ದಾಳೆ.

"ಈ ಹಣದಲ್ಲಿ ನಾನು ನನ್ನ ಕುಟುಂಬವನ್ನು ಚೀನಾಕ್ಕೆ ಕರೆದುಕೊಂಡು ಹೋಗಲು ಬಯಸುತ್ತೇನೆ. ಅಲ್ಲದೇ ಚೀನೀ ಹೊಸ ವರ್ಷಕ್ಕೆ ಅವರನ್ನು ಪಂಚತಾರಾ ಹೋಟೆಲ್‌ನಲ್ಲಿ ಇರಿಸಲು ಬಯಸುತ್ತೇನೆ. ಕುಟುಂಬದವರಿಗೆ ಉಡುಗೊರೆಗಳನ್ನು ನೀಡುತ್ತೇನೆ. ಉಳಿದ ಹಣವನ್ನು ಹೂಡಿಕೆ ಮಾಡುತ್ತೇನೆ. ಭವಿಷ್ಯದಲ್ಲಿ ಹೆಚ್ಚು ಹಣ ಸಂಪಾದಿಸಿ, ಜನರಿಗೆ ಸಹಾಯ ಮಾಡುತ್ತೇನೆ ”ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com