ದಾಖಲೆಯ ಮೂರನೇ ಅವಧಿಗೂ ಷಿ ಜಿನ್ಪಿಂಗ್ ಚೀನಾ ಅಧ್ಯಕ್ಷ ಗಾದಿಯಲ್ಲಿ ಮುಂದುವರಿಕೆ: ಕಮ್ಯುನಿಸ್ಟ್ ಪಕ್ಷದ ಸಭೆ ಅನುಮೋದನೆ
ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ನ.11 ರಂದು ಮಹತ್ವದ ನಿರ್ಣಯ ಕೈಗೊಂಡಿದ್ದು, ಅಧ್ಯಕ್ಷ ಗಾದಿಯಲ್ಲಿ ದಾಖಲೆಯ ಮೂರನೇ ಅವಧಿಗೆ ಮುಂದುವರೆಯುವುದಕ್ಕೆ ಅನುಮೋದನೆ ನೀಡಿದೆ.
Published: 12th November 2021 01:23 AM | Last Updated: 04th January 2023 04:15 PM | A+A A-

ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್
ಬೀಜಿಂಗ್: ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ನ.11 ರಂದು ಮಹತ್ವದ ನಿರ್ಣಯ ಕೈಗೊಂಡಿದ್ದು, ಅಧ್ಯಕ್ಷ ಗಾದಿಯಲ್ಲಿ ದಾಖಲೆಯ ಮೂರನೇ ಅವಧಿಗೆ ಮುಂದುವರೆಯುವುದಕ್ಕೆ ಅನುಮೋದನೆ ನೀಡಿದೆ.
ಚೀನಾದ ಕಮ್ಯುನಿಸ್ಟ್ ಪಕ್ಷದ 100 ವರ್ಷಗಳ ಇತಿಹಾಸದಲ್ಲಿ ಅದರ ಸ್ಥಾಪಕ ಮಾವೋ ಝೆಡಾಂಗ್ ಹಾಗೂ ಆತನ ಉತ್ತರಾಧಿಕಾರಿ ಡೆಂಗ್ ಷಿಯೋಪಿಂಗ್ ನ ನಂತರದ ಅವಧಿಯಲ್ಲಿ ಕೈಗೊಳ್ಳಲಾಗುತ್ತಿರುವ ಮೈಲಿಗಲ್ಲಿನ ನಿರ್ಣಯ ಇದಾಗಿದೆ.
ನ.08 ರಿಂದ 11 ವರೆಗೆ ಬೀಜಿಂಗ್ ನಲ್ಲಿ 19 ನೇ ಸಿಪಿಸಿ ಸೆಂಟ್ರಲ್ ಸಮಿತಿಯ 6 ನೇ ಸರ್ವಸದಸ್ಯರ ಅಧಿವೇಶನ ನಡೆದಿದೆ.
ಸಭೆಯಲ್ಲಿ ಕೈಗೊಂಡ ಇನ್ನಿತರ ಹಲವು ನಿರ್ಧಾರಗಳ ಬಗ್ಗೆ ನ.12 ರಂದು ಪಕ್ಷ ಪತ್ರಿಕಾಗೋಷ್ಠಿಯ ಮೂಲಕ ಮಾಹಿತಿ ನೀಡಲಿದೆ.
ಇನ್ನು ಷಿ ಜಿನ್ಪಿಂಗ್ ಅವರ ನಾಯಕತ್ವದ ಬಗ್ಗೆ 14 ಪುಟಗಳ ಸಂವಹನ ಶ್ಲಾಘನೆಯನ್ನು ಚೀನಾದ ಕಮ್ಯುನಿಸ್ಟ್ ಪಕ್ಷ ಬಿಡುಗಡೆ ಮಾಡಿದ್ದು, ಅವರೇ ಮುಂದಿನ ಅವಧಿಗೂ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಷಿ ಜಿನ್ಪಿಂಗ್ ಮುಂದಿನ ವರ್ಷ 5 ವರ್ಷಗಳ ಅಧ್ಯಕ್ಷ ಗಾದಿಯ 2 ನೇ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ. ಈ ಸಭೆಯಲ್ಲಿ 400 ಮಂದಿ ಪಕ್ಷದ ಹಿರಿಯ ನಾಯಕರು ಭಾಗಿಯಾಗಿದ್ದರು.