ಬೈಡನ್-‌ ಕಮಲಾ ಹ್ಯಾರಿಸ್‌ ಭಿನ್ನಾಭಿಪ್ರಾಯ? ಹುದ್ದೆ ತ್ಯಜಿಸಲಿರುವ ಸಂವಹನ ನಿರ್ದೇಶಕಿ!

ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸಂವಹನ ನಿರ್ದೇಶಕಿ ಆಶೆಲಿ ಎಟಿಯೆನ್ ಅವರು ಡಿಸೆಂಬರ್‌ನಲ್ಲಿ ಬೈಡನ್ ಆಡಳಿತದಲ್ಲಿನ ತಮ್ಮ ಹುದ್ದೆ ತ್ಯಜಿಸಲಿದ್ದಾರೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.
ಬೈಡನ್-‌ ಕಮಲಾ ಹ್ಯಾರಿಸ್‌
ಬೈಡನ್-‌ ಕಮಲಾ ಹ್ಯಾರಿಸ್‌

ವಾಷಿಂಗ್ಟನ್: ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸಂವಹನ ನಿರ್ದೇಶಕಿ ಆಶೆಲಿ ಎಟಿಯೆನ್ ಅವರು ಡಿಸೆಂಬರ್‌ನಲ್ಲಿ ಬೈಡನ್ ಆಡಳಿತದಲ್ಲಿನ ತಮ್ಮ ಹುದ್ದೆ ತ್ಯಜಿಸಲಿದ್ದಾರೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.

ಎಟಿಯೆನ್‌ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ತಂಡದ ಪ್ರಮುಖ ಸದಸ್ಯರಾಗಿದ್ದು, ಅಧ್ಯಕ್ಷ ಜೋ ಬೈಡನ್ ಆಡಳಿತದ ಗುರಿಗಳನ್ನು ಮುನ್ನಡೆಸಲು ದಣಿವರಿಯಿಲ್ಲದೆ ಕೆಲಸ ಮಾಡಿದ್ದಾರೆ, ಆದರೆ, ಇತರ ಅವಕಾಶಗಳ ಅನುಸರಿಸಿ ಅವರು ಡಿಸೆಂಬರ್‌ನಲ್ಲಿ ಕಚೇರಿಯನ್ನು ತೊರೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದೆ.  ಹ್ಯಾರಿಸ್ ಹಾಗೂ ಅಧ್ಯಕ್ಷ ಜೋ ಬೈಡನ್ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯಗಳ ವರದಿಗಳ ನಡುವೆ ಈ ಸುದ್ದಿ ಬಂದಿದೆ.

ಶ್ವೇತಭವನದ ವಕ್ತಾರ ಜೆನ್ ಪ್ಸಾಕಿ ಭಾನುವಾರ ವರದಿಗಳನ್ನು ನಿರಾಕರಿಸಿದ್ದರು. ಹ್ಯಾರಿಸ್ ಅವರು ಪ್ರಮುಖ ಪಾಲುದಾರೆ, ದಿಟ್ಟ ನಾಯಕಿ ಎಂದು ಹೇಳಿದ್ದರು. 2024 ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಯೋಜನೆಗಳ ಬಗ್ಗೆ ತಾವು ಪ್ರಸ್ತುತ ಬೈಡನ್ ಅವರೊಂದಿಗೆ ಚರ್ಚಿಸುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ಹ್ಯಾರಿಸ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com