"ಮನಿಕೆ ಮಾಗೆ ಹಿತೆ" ಗಾಯಕಿಯನ್ನು ಗೌರವಿಸಲು ಶ್ರೀಲಂಕಾ ಸಂಸತ್ತು ನಿರ್ಧಾರ
"ಮನಿಕೆ ಮಾಗೆ ಹಿತೆ" ಹಾಡಿನಿಂದ ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಸ್ಥಳೀಯ ಗಾಯಕಿ ಯೋಹಾನಿ ಡಿ ಸಿಲ್ವಾ ಅವರನ್ನು ನವೆಂಬರ್ 23 ರಂದು ಸನ್ಮಾನಿಸಲು ಶ್ರೀಲಂಕಾ ಸಂಸತ್ತು ನಿರ್ಧರಿಸಿದೆ.
Published: 19th November 2021 08:06 PM | Last Updated: 19th November 2021 08:06 PM | A+A A-

ಯೋಹಾನಿ ಡಿ ಸಿಲ್ವಾ
ಕೊಲಂಬೊ: "ಮನಿಕೆ ಮಾಗೆ ಹಿತೆ" ಹಾಡಿನಿಂದ ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಸ್ಥಳೀಯ ಗಾಯಕಿ ಯೋಹಾನಿ ಡಿ ಸಿಲ್ವಾ ಅವರನ್ನು ನವೆಂಬರ್ 23 ರಂದು ಸನ್ಮಾನಿಸಲು ಶ್ರೀಲಂಕಾ ಸಂಸತ್ತು ನಿರ್ಧರಿಸಿದೆ.
ಪ್ರಧಾನಿ ಮಹಿಂದಾ ರಾಜಪಕ್ಸೆ, ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಮತ್ತು ಇತರ ಹಲವಾರು ಸಂಸದರು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮ ಆರೋಗ್ಯ ಮಾರ್ಗಸೂಚಿಗಳ ಪ್ರಕಾರ ನಡೆಯಲಿದೆ ಎಂದು ಸಂಸತ್ತಿನ ಪ್ರಕಟಣೆ ತಿಳಿಸಿದೆ.
ಚೀನಾ ಸೇರಿದಂತೆ ವಿಶ್ವದ ಎಲ್ಲಾ ಭಾಗಗಳಲ್ಲಿ "ಮನಿಕೆ ಮಾಗೆ ಹಿತೆ" ಹಾಡು ಜನಪ್ರಿಯಗೊಂಡಿದೆ. ಅಲ್ಲದೆ ಭಾರತದಲ್ಲಿ ಬಾಲಿವುಡ್ ಹಾಡುಗಳಿಗೆ ಹಿನ್ನೆಲೆ ಗಾಯಕಿಯಾಗಿ ಅವಕಾಶ ಪಡೆದುಕೊಳ್ಳಲು ಕಾರಣವಾಗಿದೆ.
ಈ ಹಾಡನ್ನು ಯೂಟ್ಯೂಬ್‌ನಲ್ಲಿ 183 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ, ಇದು ಶ್ರೀಲಂಕಾದ ಸ್ಥಳೀಯ ಸಂಗೀತ ಉದ್ಯಮಕ್ಕೆ ಉತ್ತೇಜನ ನೀಡಿದೆ.