ಅತ್ಯಾಚಾರಿಗಳ ಕಾಮಾಸಕ್ತಿ ಕುಗ್ಗಿಸಲು ಕೆಮಿಕಲ್‌ ಕ್ಯಾಸ್ಟ್ರೇಶನ್‌: ಮಸೂದೆಗೆ ಪಾಕ್ ಸಂಸತ್​​ ಅಂಗೀಕಾರ! ಏನಿದು ಕೆಮಿಕಲ್ ಕ್ಯಾಸ್ಟ್ರೇಶನ್?

ಅತ್ಯಾಚಾರದ ಅಪರಾಧಿಗಳ ಕಾಮಾಸಕ್ತಿ ಕುಗ್ಗಿಸಲು ಮುಂದಾಗಿರುವ ಪಾಕಿಸ್ತಾನ ಸರ್ಕಾರಕ್ಕೆ ಒಂದು ರೀತಿಯಲ್ಲಿ ಜಯ ಸಿಕ್ಕಿದೆ. ಕಾಮಾಶಕ್ತಿ ಕುಗ್ಗಿಸಲು ರಾಸಾಯನಿಕ ಬಳಕೆ ಮಾಡುವ ಮಸೂದೆಗೆ ಪಾಕ್ ಸಂಸತ್​​ನಲ್ಲಿ ಅಂಗೀಕಾರ ಸಿಕ್ಕಿದೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್ : ಅತ್ಯಾಚಾರದ ಅಪರಾಧಿಗಳ ಕಾಮಾಸಕ್ತಿ ಕುಗ್ಗಿಸಲು ಮುಂದಾಗಿರುವ ಪಾಕಿಸ್ತಾನ ಸರ್ಕಾರಕ್ಕೆ ಒಂದು ರೀತಿಯಲ್ಲಿ ಜಯ ಸಿಕ್ಕಿದೆ. ಕಾಮಾಶಕ್ತಿ ಕುಗ್ಗಿಸಲು ರಾಸಾಯನಿಕ ಬಳಕೆ ಮಾಡುವ ಮಸೂದೆಗೆ ಪಾಕ್ ಸಂಸತ್​​ನಲ್ಲಿ ಅಂಗೀಕಾರ ಸಿಕ್ಕಿದೆ.

ಪ್ರಧಾನಿ ಕಳೆದ ವರ್ಷ ಈ ಮಸೂದೆಗೆ ತಾತ್ವಿಕ ಒಪ್ಪಿಗೆ ನೀಡಿದ್ದರು. ಈಗ ಪಾರ್ಲಿಮೆಂಟ್​​ನಲ್ಲಿ ಮಸೂದೆ ಅಂಗೀಕಾರವಾಗಿದೆ. ಪಾಕಿಸ್ತಾನದಲ್ಲಿ ಮಹಿಳೆಯರು, ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ.

ಅತ್ಯಾಚಾರ ಅಪರಾಧಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಇದರ ಜೊತೆಗೆ ಆರೋಪಿಗಳ ವೃಷಣವನ್ನೇ ಕತ್ತರಿಸಬೇಕೆಂದು ಆಗ್ರಹ ಮಾಡಲಾಗಿತ್ತು. ಇದಕ್ಕೆಲ್ಲಾ ವಿಭಿನ್ನವಾಗಿ ಈಗ ಈ ಮಸೂದೆ ಅಂಗೀಕಾರವಾಗಿದೆ.

ಏನಿದು ಕೆಮಿಕಲ್ ಕ್ಯಾಸ್ಟ್ರೇಶನ್?

ಅತ್ಯಾಚಾರವೆಸಗುವ ಅಪರಾಧಿಯ ಮೇಲೆ ರಾಸಾಯನಿಕ ಬಳಕೆ ಮಾಡುವುದರಿಂದ ಆತನ ಜೀವಿತಾವಧಿಯಲ್ಲಿ ಮತ್ತೆ ಸಂಭೋಗ ನಡೆಸಲು ಅಸಮರ್ಥನಾಗಿರುತ್ತಾನೆ. ಆದರೆ ನ್ಯಾಯಾಲಯ ಹಾಗೂ ಕೋರ್ಟ್​ ಇದಕ್ಕೆ ಅನುಮತಿ ನೀಡುವುದು ಕಡ್ಡಾಯ.

ದಕ್ಷಿಣ ಕೊರಿಯಾ, ಪೋಲೆಂಡ್​, ಅಮೆರಿಕದ ಕೆಲವೊಂದು ರಾಜ್ಯಗಳಲ್ಲಿ ಈ ಶಿಕ್ಷೆ ಜಾರಿಯಲ್ಲಿದೆ.2020ರ ನವೆಂಬರ್​ ತಿಂಗಳಲ್ಲಿ ಲಾಹೋರ್​-ಸಿಯಾಲ್​ಕೋಟ್​​ ರೋಡ್​ನಲ್ಲಿ ಮಕ್ಕಳ ಎದುರೇ ಮಹಿಳೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಇದಕ್ಕೆ ಎಲ್ಲೆಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ದೇಶಾದ್ಯಂತ ಪ್ರತಿಭಟನೆ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com