ಸಿಖ್ ಗುರುದ್ವಾರ ಧ್ವಂಸ; ಹಿಂದೂ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಿದವರ ಬಂಧನ: ತಾಲಿಬಾನ್ ವಕ್ತಾರ

ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಹಿಂದೂ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಿದವರನ್ನು ಕಾಬೂಲ್ ಪೊಲೀಸರು ಬಂಧಿಸಿ ವಿಚಾರಣೆಗೆ ಗುರಿಪಡಿಸಿದ್ದಾರೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.
ಜಬಿಹುಲ್ಲಾ ಮುಜಾಹಿದ್
ಜಬಿಹುಲ್ಲಾ ಮುಜಾಹಿದ್

ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಹಿಂದೂ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಿದವರನ್ನು ಕಾಬೂಲ್ ಪೊಲೀಸರು ಬಂಧಿಸಿ ವಿಚಾರಣೆಗೆ ಗುರಿಪಡಿಸಿದ್ದಾರೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.

ಶಸ್ತ್ರಸಜ್ಜಿತ ಗುಂಪೊಂದು ಗುರುದ್ವಾರವನ್ನು ಧ್ವಂಸಗೊಳಿಸಿದ ನಂತರ ಅಫ್ಘಾನಿಸ್ತಾನದಲ್ಲಿರುವ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ವ್ಯಾಪಕ ಕಳವಳ ವ್ಯಕ್ತವಾಗಿರುವ ಬೆನ್ನಲ್ಲೇ ಹಂಗಾಮಿ ಉಪ ಮಂತ್ರಿಯಾಗಿರುವ ಮುಜಾಹಿದ್ ಅವರು ಶನಿವಾರ ಈ ಕುರಿತು ಟ್ವೀಟ್ ನಲ್ಲಿ ತಿಳಿಸಿದ್ದಾರೆ. 

ಶಂಕಿತ ತಾಲಿಬಾನ್ ಸೇನಾಪಡೆಗಳು ಅಫ್ಘಾನಿಸ್ತಾನ ಕಾಬೂಲ್‌ನಲ್ಲಿ ಗುರುದ್ವಾರ ಕಾರ್ಟೆ ಪರ್ವಾನ್ ಅನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಅಫ್ಘಾನ್ ಹಿಂದೂಗಳು ಮತ್ತು ಸಿಖ್‌ ಸಮುದಾಯದ ಸುರಕ್ಷತೆಗೆ ಆಗ್ರಹ ಕೇಳಿಬಂದಿದೆ. ಪ್ರಕರಣದ ಕೆಲ ದಿನಗಳ ಬಳಿಕ ಶನಿವಾರ ಅಫ್ಘಾನ್ ಹಿಂದೂಗಳು ಮತ್ತು ಸಿಖ್‌ಗಳ ಕೌನ್ಸಿಲ್ ಗುರುದ್ವಾರದಲ್ಲಿ ಸಭೆ ನಡೆಸಿ ಸಮುದಾಯದ ಸುರಕ್ಷತೆಗಾಗಿ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿ, ತಕ್ಷಣವೇ ಸ್ಥಳಾಂತರಿಕ್ಕೆ ಮುಂದಾಗುವಂತೆ ಒತ್ತಾಯಿಸಿದೆ.

ಅಫ್ಘಾನಿಸ್ತಾನದಲ್ಲಿ ಭಾರತೀಯ ನಾಗರಿಕರು ಸೇರಿದಂತೆ 200 ಮಂದಿ ಭಾಗವಹಿಸಿದ ಕೌನ್ಸಿಲ್ ಸಭೆಯಲ್ಲಿ, ಅಜ್ಞಾತ ಪಡೆಗಳಿಂದ ಗುರುದ್ವಾರ ಧ್ವಂಸಗೊಳಿಸುವುದು ಮತ್ತು ಉತ್ತರ ನಗರ ಕುಂಡುಜ್‌ನಲ್ಲಿನ ಶಿಯಾ ಮಸೀದಿಯ ಮೇಲೆ ಶುಕ್ರವಾರ ನಡೆದ ಹಲ್ಲೆ ಸೇರಿದಂತೆ ಅನೇಕ ಮುಗ್ಧ ಅಫ್ಘಾನಿಸ್ತಾನೀಯರ ಹತ್ಯೆಯಂತಹ ದುಷ್ಕೃತ್ಯದ ಕುರಿತು ಚರ್ಚಿಸಲಾಯಿತು. ಇದೇ ವೇಳೆ ಸಭೆಯು ಕ್ರೂರ ಹತ್ಯೆಗಳನ್ನು ಖಂಡಿಸಿತು.

ಹಿಂದೂ ಮತ್ತು ಸಿಖ್ ಸಮುದಾಯದ ಸುಮಾರು 200 ಸದಸ್ಯರು ಸೇರಿದ್ದ ಸಭೆಯ ಅಧ್ಯಕ್ಷತೆಯನ್ನು ಕಾಬೂಲ್‌ನ ಅಸಮೈ ಮಂದಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಮ್ ಶರಣ್ ಸಿಂಗ್ ವಹಿಸಿದ್ದರು, ಕಾಬೂಲ್‌ನ ಗುರುದ್ವಾರ ಕಾರ್ತೇ ಪರ್ವಾನ್‌ನ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಗುರುನಮ್ ಸಿಂಗ್ ಅವರ ಉಪ ಅಧ್ಯಕ್ಷರಾಗಿದ್ದರು ಮತ್ತು ಗುರುದ್ವಾರ ಕರ್ತೆ ಪರ್ವಾನ್‌ನ ಮುಖ್ಯ ಗ್ರಂಥವಾದ ಸತ್ವಿರ್ ಸಿಂಗ್ ನಿರ್ವಹಣೆಯ ಜವಾಬ್ದಾರಿ ವಹಿಸಿದ್ದರು.

ಕಾಬೂಲ್ ನಲ್ಲಿ ಅಕ್ಟೋಬರ್ 5 ರಂದು, ತಾಲಿಬಾನ್ ಸೇನೆಯನ್ನು ಹೋಲುವ ಭಾರಿ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು, ಗುರುದ್ವಾರ ಕಾರ್ಟೆ ಪರ್ವಾನ್‌ಗೆ ಪ್ರವೇಶಿಸಿ, ಅಲ್ಲಿನ ಮೂವರು ಕಾವಲುಗಾರರನ್ನು ಕಟ್ಟಿ, ಗುರುದ್ವಾರ ಕಚೇರಿಯ ಬೀರುಗಳನ್ನು, ಕೆಲವು ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿದೆ. ಸಿಸಿಟಿವಿ ಕ್ಯಾಮರಾಗಳ ತುಣುಕನ್ನು ಸ್ಥಳೀಯ ತಾಲಿಬಾನ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದರೂ, ಗುರುದ್ವಾರವನ್ನು ಧ್ವಂಸ ಮಾಡಿದ ಶಸ್ತ್ರಸಜ್ಜಿತ ವ್ಯಕ್ತಿಗಳನ್ನು ಗುರುತಿಸುವ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com