ವೈರಲ್ ಸುದ್ದಿ: ಅಬ್ಬಾ! ಮೊಬೈಲ್ ನಿಂದ ಪ್ರಾಣ ಉಳಿಯಿತು; ಬುಲೆಟ್ ತಗುಲಲಿಲ್ಲ!

ಕಾಲ್ ಮಾಡೋಕೆ, ಇಂಟರ್ ನೆಟ್ ಬ್ರೌಸ್ ಮಾಡೋಕೆ ಮಾತ್ರ ಮೊಬೈಲ್ ಉಪಯೋಗಕ್ಕೆ ಬರುತ್ತೆ ಅನ್ಕೊಂಡಿದ್ವಿ. ಆದ್ರೆ, ಸ್ಮಾರ್ಟ್ ಫೋನ್ ಗಳು ಮನುಷ್ಯನ ಪ್ರಾಣ ಸಹ ಉಳಿಸ್ತಾ ಇವೆ. 
ಮೊಬೈಲ್
ಮೊಬೈಲ್

ಬ್ರೆಜಿಲ್: ಕಾಲ್ ಮಾಡೋಕೆ, ಇಂಟರ್ ನೆಟ್ ಬ್ರೌಸ್ ಮಾಡೋಕೆ ಮಾತ್ರ ಮೊಬೈಲ್ ಉಪಯೋಗಕ್ಕೆ ಬರುತ್ತೆ ಅನ್ಕೊಂಡಿದ್ವಿ. ಆದ್ರೆ, ಸ್ಮಾರ್ಟ್ ಫೋನ್ ಗಳು ಮನುಷ್ಯನ ಪ್ರಾಣ ಸಹ ಉಳಿಸ್ತಾ ಇವೆ. 

ಹೌದು ಬ್ರೆಜಿಲ್ ನಲ್ಲಿ ಮೋಟೋರೋಲಾ 5ಜಿ ಸ್ಮಾರ್ಟ್ ಫೋನು, ವ್ಯಕ್ತಿಯೊಬ್ಬನ ಪ್ರಾಣ ಉಳಿಸಿದೆ.

ನಮ್ಗೂ-ನಿಮ್ಗೂ ಇರೋ ಹಾಗೇ ಬ್ರೆಜಿಲ್ ವ್ಯಕ್ತಿಗೆ ಮೊಬೈಲ್ ಕ್ರೇಜ್ ಇತ್ತು. ಅದರ ಹಿಂದಿನ ಕವರ್ ಅನ್ನು ಡಿಸೈನ್ ಮಾಡಿಸಿ(Incredible Hulk) ಎಂಬ ಟೆಕ್ಸ್ಟ್ ಸಹ ಮುದ್ರಿಸಿದ್ದ. ಈಗ ಅದೇ ಹಲ್ಕ್ ಆತನ ಜೀವ ಉಳಿಸಿದೆ. 

ಆಗಿದ್ದೇನೆಂದರೆ, ದರೋಡೆಕೋರರ ಕೈಗೆ ಬ್ರೆಜಿಲ್ ವ್ಯಕ್ತಿ ಸಿಕ್ಕಿ ಬಿದ್ದಿದ್ದ. ಈ ವೇಳೆ ಆತನ ಮೇಲೆ ಫೈರ್ ಮಾಡಲಾಗಿತ್ತು. ಆದರೆ, ಅದೃಷ್ಟವಶಾತ್ ಆತ ಬದುಕುಳಿದಿದ್ದ. ಅವನ ಸೊಂಟಕ್ಕೆ ಸ್ವಲ್ಪ ಗಾಯವಾಗಿತ್ತಷ್ಟೇ. ಆದ್ರೆ ಅವನ ಗ್ಯಾಜೆಟ್ ನ ಸ್ಕ್ರೀನ್ ಪೀಸ್ ಪೀಸ್ ಆಗಿತ್ತು. ವ್ಯಕ್ತಿಯೊಬ್ಬನ ಮೇಲೆ ಬುಲೆಟ್ ದಾಳಿ ನಡೆದು, ಮೊಬೈಲ್ ನಿಂದ ಪ್ರಾಣ ಉಳಿದ ಮೇಲೆ ಈ ವಿಚಾರ ಹೆಚ್ಚು ಸುದ್ದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com