ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರೋಮ್ ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಇಟಲಿಯ ರೋಮ್ ಗೆ ಆಗಮಿಸಿದ್ದಾರೆ. ರೋಮ್ ನಲ್ಲಿ ಪ್ರಧಾನಿ ಮೋದಿ, ಜಾಗತಿಕ ಆರ್ಥಿಕತೆ, ಕೋವಿಡ್-19 ಸಾಂಕ್ರಾಮಿಕದಿಂದ ಆರೋಗ್ಯ ಚೇತರಿಕೆ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
Published: 29th October 2021 11:20 AM | Last Updated: 29th October 2021 11:21 AM | A+A A-

ಪ್ರಧಾನಿ ನರೇಂದ್ರ ಮೋದಿ
ಇಟಲಿ: ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಇಟಲಿಯ ರೋಮ್ ಗೆ ಆಗಮಿಸಿದ್ದಾರೆ. ರೋಮ್ ನಲ್ಲಿ ಪ್ರಧಾನಿ ಮೋದಿ, ಜಾಗತಿಕ ಆರ್ಥಿಕತೆ, ಕೋವಿಡ್-19 ಸಾಂಕ್ರಾಮಿಕದಿಂದ ಆರೋಗ್ಯ ಚೇತರಿಕೆ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಮೋದಿ, ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರೋಮ್ ಗೆ ಆಗಮಿಸಿದ್ದೇನೆ, ಇದು ಜಾಗತಿಕ ಸಮಸ್ಯೆಗಳ ಕುರಿತು ಚರ್ಚಿಸಲು ಪ್ರಮುಖವಾದ ವೇದಿಕೆಯಾಗಿದೆ. ರೋಮ್ ಭೇಟಿಯೊಂದಿಗೆ ಇತರ ಕಾರ್ಯಕ್ರಮಗಳನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
Landed in Rome to take part in the @g20org Summit, an important forum to deliberate on key global issues. I also look forward to other programmes through this visit to Rome. pic.twitter.com/e4UuIIfl7f
— Narendra Modi (@narendramodi) October 29, 2021
ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ಮೋದಿ, ಇಟಲಿ ಪ್ರಧಾನ ಮಂತ್ರಿ ಮಾರಿಯೊ ಡ್ರಾಗೈ ಅವರ ಆಹ್ವಾದನ ಮೇರೆಗೆ ಇಂದಿನಿಂದ ಅಕ್ಟೋಬರ್ 31ರವರೆಗೆ ರೋಮ್ ಮತ್ತು ವ್ಯಾಟಿಕನ್ ಸಿಟಿಗೆ ಭೇಟಿ ನೀಡುತ್ತಿದ್ದೇನೆ, ತದನಂತರ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಆಹ್ವಾನದ ಮೇರೆಗೆ ನೆವೆಂಬರ್ 1 ಮತ್ತು 2 ರಂದು ಇಂಗ್ಲೆಂಡ್ ನ ಗ್ಲಾಸ್ಗೋಗೆ ಭೇಟಿ ನೀಡುವುದಾಗಿ ತಿಳಿಸಿದ್ದರು.