ಮಹಿಳೆಯರು ಮಕ್ಕಳನ್ನಷ್ಟೇ ಹೆರಬೇಕು, ಮಂತ್ರಿಗಳಾಗಬಾರದು: ತಾಲಿಬಾನ್ ವಕ್ತಾರ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಘೋಷಿಸಿರುವ ಬೆನ್ನಲ್ಲೇ ಇದೀಗ ತಾಲಿಬಾನ್ ವಕ್ತಾರ ಜೆಕ್ರುಲ್ಲಾ ಹಾಶಮಿ, ಮಹಿಳೆಯರು ಮಂತ್ರಿಗಳಾಗಬಾರದು. ಅವರು ಮಕ್ಕಳನ್ನು ಮಾತ್ರ ಹೆರಬೇಕು ಎಂದು ಹೇಳಿದ್ದಾರೆ.
Published: 10th September 2021 05:22 PM | Last Updated: 10th September 2021 05:22 PM | A+A A-

ಅಫ್ಘಾನ್ ಮಹಿಳೆ
ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಘೋಷಿಸಿರುವ ಬೆನ್ನಲ್ಲೇ ಇದೀಗ ತಾಲಿಬಾನ್ ವಕ್ತಾರ ಜೆಕ್ರುಲ್ಲಾ ಹಾಶಮಿ, ಮಹಿಳೆಯರು ಮಂತ್ರಿಗಳಾಗಬಾರದು. ಅವರು ಮಕ್ಕಳನ್ನು ಮಾತ್ರ ಹೆರಬೇಕು ಎಂದು ಹೇಳಿದ್ದಾರೆ.
ಈ ಮೂಲಕ ತಾಲಿಬಾನಿಗಳು ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕುವ ಕಾರ್ಯ ಮುಂದುವರೆಸಿದ್ದಾರೆ. ಮಹಿಳೆಯರನ್ನು ಮಂತ್ರಿ ಆಗಬಾರದು. ಅವರಿಗೆ ಮಹತ್ವದ ಜವಾಬ್ದಾರಿ ಕೊಟ್ಟರೆ ಅವರ ಮೇಲೆ ಮತ್ತಷ್ಟು ಬಾರ ಹೇರಿದಂತಾಗುತ್ತದೆ. ಹೀಗಾಗಿ ಮಹಿಳೆಯರು ಕೇವಲ ಮಕ್ಕಳಿಗೆ ಜನ್ಮ ನೀಡಬೇಕು ಅಷ್ಟೇ ಎಂದು ಮಾಧ್ಯಮ ಸಂದರ್ಶನವದಲ್ಲಿ ಹಾಶಮಿ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಕೆಲ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದು ಅವರೆಲ್ಲಾ ಇಡೀ ಮಹಿಳಾ ಸಮುದಾಯವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಮೆರಿಕಾ ಭದ್ರತಾ ಮಂಡಳಿಯ ಭಯೋತ್ಪಾದಕ ಕಪ್ಪುಪಟ್ಟಿಯಲ್ಲಿ ಅಘ್ಘಾನಿಸ್ತಾನದ ಹಾಲಿ ಪ್ರಧಾನಿ ಮುಲ್ಲಾ ಹಸನ್ ಮತ್ತು ಅವರ ಇಬ್ಬರು ನಿಯೋಗಿಗಳು ಸೇರಿದಂತೆ ತಾಲಿಬಾನ್ ನ ಹಂಗಾಮಿ ಸರ್ಕಾರದ ಕನಿಷ್ಠ 14 ಸದಸ್ಯರು ಇದ್ದಾರೆ.
ಇನ್ನು ಜಾಗತಿಕ ಭಯೋತ್ಪಾದಕ ಸಿರಾಜುದ್ದೀನ್ ಹಕ್ಕಾನಿ ತಲೆ ಮೇಲೆ 10 ಮಿಲಿಯನ್ ಡಾಲರ್ ಬಹುಮಾನವಿದ್ದು ಆತ ಹಂಗಾಮಿ ಆಂತರಿಕ ಮಂತ್ರಿಯಾಗಿದ್ದಾನೆ.