ಪಾಕಿಸ್ತಾನದಿಂದ ಕಾಬೂಲ್ ಗೆ ಸೋಮವಾರದಿಂದ ವಾಣಿಜ್ಯ ವಿಮಾನ ಸೇವೆ ಪ್ರಾರಂಭ

ಪಾಕಿಸ್ತಾನ ಅಂತಾರಾಷ್ಟ್ರೀಯ ಏರ್ ಲೈನ್ಸ್ (ಪಿಐಎ) ಇಸ್ಲಾಮಾಬಾದ್ ನಿಂದ ಕಾಬೂಲ್ ಗೆ ಮುಂದಿನ ವಾರದಿಂದ ವಾಣಿಜ್ಯ ವಿಮಾನಗಳನ್ನು ಪ್ರಾರಂಭಿಸಲಿದೆ. 
ಪಾಕಿಸ್ತಾನ ವಿಮಾನ
ಪಾಕಿಸ್ತಾನ ವಿಮಾನ

ಇಸ್ಲಾಮಾಬಾದ್: ಪಾಕಿಸ್ತಾನ ಅಂತಾರಾಷ್ಟ್ರೀಯ ಏರ್ ಲೈನ್ಸ್ (ಪಿಐಎ) ಇಸ್ಲಾಮಾಬಾದ್ ನಿಂದ ಕಾಬೂಲ್ ಗೆ ಮುಂದಿನ ವಾರದಿಂದ ವಾಣಿಜ್ಯ ವಿಮಾನಗಳನ್ನು ಪ್ರಾರಂಭಿಸಲಿದೆ. 

ತಾಲೀಬಾನ್ ಕಳೆದ ತಿಂಗಳು ಅಧಿಕಾರ ವಹಿಸಿಕೊಂಡ ಬಳಿಕ ಅಫ್ಘಾನಿಸ್ತಾನಕ್ಕೆ ವಿದೇಶವೊಂದು ಪ್ರಾರಂಭಿಸುತ್ತಿರುವ ಮೊದಲ ವಾಣಿಜ್ಯ ವಿಮಾನಗಳ ಸೇವೆ ಇದಾಗಿದೆ. 

ಆ.30 ರಂದು 120,000 ಮಂದಿ ರಕ್ಷಣೆಯ ಸಂದರ್ಭದಲ್ಲಿ ಕಾಬೂಲ್ ವಿಮಾನ ನಿಲ್ದಾಣ ಹಾನಿಗೊಳಗಾಗಿತ್ತು. ತಾಲೀಬಾನ್ ಕತಾರಿಯ ತಾಂತ್ರಿಕ ಸಹಾಯ ಪಡೆದು ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪುನಾರಂಭ ಮಾಡಲು ಯತ್ನಿಸುತ್ತಿದೆ.

"ನಮಗೆ ಅಫ್ಘಾನಿಸ್ತಾನಕ್ಕೆ ವಿಮಾನಗಳ ಕಾರ್ಯಾಚರಣೆ ನಡೆಸಲು ಎಲ್ಲಾ ತಾಂತ್ರಿಕ ಕ್ಲಿಯರೆನ್ಸ್ ಗಳೂ ದೊರೆತಿವೆ. ಸೆ.13 ರಂದು ಕಾಬೂಲ್ ಗೆ ಇಸ್ಲಾಮಾಬಾದ್ ನಿಂದ ಮೊದಲ ವಾಣಿಜ್ಯ ವಿಮಾನ ತೆರಳಲಿದೆ" ಎಂದು ಪಿಐಎ ವಕ್ತಾರ ಅಬ್ದುಲ್ಲಾ ಹಫೀಜ್ ಖಾನ್ ಎಎಫ್ ಪಿ ಗೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com