ಕಾಬುಲ್ ಡ್ರೋನ್ ದಾಳಿಯಲ್ಲಿ 10 ಮಂದಿ ನಾಗರಿಕರ ಸಾವು: 'ನಮ್ಮ ಕಡೆಯಿಂದ ಆದ ತಪ್ಪು, ಕ್ಷಮಿಸಿ' ಎಂದ ಅಮೆರಿಕ!

ಕಳೆದ ತಿಂಗಳು ಅಫ್ಘಾನಿಸ್ತಾನ ರಾಜಧಾನಿ ಕಾಬುಲ್ ನಲ್ಲಿ ನಡೆದ ಡ್ರೋನ್ ದಾಳಿ ತಮ್ಮಿಂದ ಆದ ತಪ್ಪು ಎಂದು ಅಮೆರಿಕ ಮಿಲಿಟರಿಯ ಉನ್ನತ ಕಮಾಂಡರ್ ಒಪ್ಪಿಕೊಂಡಿದ್ದಾರೆ. 
ಕಾಬುಲ್ ನಲ್ಲಿ ಕಳೆದ ತಿಂಗಳು ನಡೆದ ಡ್ರೋನ್ ದಾಳಿ ನಂತರದ ದೃಶ್ಯ
ಕಾಬುಲ್ ನಲ್ಲಿ ಕಳೆದ ತಿಂಗಳು ನಡೆದ ಡ್ರೋನ್ ದಾಳಿ ನಂತರದ ದೃಶ್ಯ

ವಾಷಿಂಗ್ಟನ್: ಕಳೆದ ತಿಂಗಳು ಅಫ್ಘಾನಿಸ್ತಾನ ರಾಜಧಾನಿ ಕಾಬುಲ್ ನಲ್ಲಿ ನಡೆದ ಡ್ರೋನ್ ದಾಳಿ ತಮ್ಮಿಂದ ಆದ ತಪ್ಪು ಎಂದು ಅಮೆರಿಕ ಮಿಲಿಟರಿಯ ಉನ್ನತ ಕಮಾಂಡರ್ ಒಪ್ಪಿಕೊಂಡಿದ್ದಾರೆ. 

ಕಾಬುಲ್ ಏರ್ ಪೋರ್ಟ್ ಬಳಿ ನಡೆದ ಆತ್ಮಹತ್ಯಾ ದಾಳಿಯ ನಂತರ ಐಸಿಸ್-ಕೆ ಉಗ್ರರನ್ನು ಗುರಿಯಾಗಿಟ್ಟುಕೊಂಡು ನಡೆಸಲಾಗಿದ್ದ ಡ್ರೋನ್ ದಾಳಿಯಲ್ಲಿ 10 ಮಂದಿ ನಾಗರಿಕರು ಮೃತಪಟ್ಟಿದ್ದರು. ಅವರಲ್ಲಿ ಏಳು ಮಂದಿ ಮಕ್ಕಳು ಕೂಡ ಸೇರಿದ್ದಾರೆ.

ಆಗಸ್ಟ್ 29ರ ಡ್ರೋನ್ ಸ್ಟ್ರೈಕ್ ನ ತನಿಖೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅಮೆರಿಕ ಕೇಂದ್ರ ಕಮಾಂಡ್ ನ ಉನ್ನತ ಕಮಾಂಡರ್ ಜನರಲ್ ಫ್ರಾಂಕ್ ಮೆಕೆಂಜಿ, ವಾಹನ ಮತ್ತು ಡ್ರೋನ್ ದಾಳಿಯಲ್ಲಿ ಮೃತಪಟ್ಟವರು ಐಸಿಸ್-ಕೆ ಜೊತೆ ಸಂಬಂಧ ಹೊಂದಿದ್ದಿರಬಹುದು ಅಥವಾ ಯುಎಸ್ ಪಡೆಗಳಿಗೆ ನೇರ ಬೆದರಿಕೆಯಾಗಿದ್ದಿರಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಆದಾಗ್ಯೂ, 13 ಸೈನಿಕರು, ನಾವಿಕರು ಮತ್ತು ನೌಕಾಪಡೆಗಳು ಮತ್ತು 100 ಕ್ಕೂ ಹೆಚ್ಚು ನಾಗರಿಕರನ್ನು ಕೊಂದ ಐಸಿಸ್-ಕೆ ದಾಳಿಯ ನಂತರ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಪರಿಸ್ಥಿತಿ ಹಿನ್ನೆಲೆಯಲ್ಲಿ ಡ್ರೋನ್ ದಾಳಿಯನ್ನು ಪರಿಗಣಿಸಬೇಕು ಎಂದಿದ್ದಾರೆ.

ಅಲ್ಲದೆ, ಮತ್ತೊಂದು ದಾಳಿ ನಡೆಯುವ ಸಾಕಷ್ಟು ಸಾಧ್ಯತೆಯನ್ನು ಗುಪ್ತಚರ ಇಲಾಖೆ ತಿಳಿಸಿತ್ತು. ತನಿಖೆ ನಡೆಸಿದ ಬಳಿಕ ಸಾಕಷ್ಟು ವಿಶ್ಲೇಷಣೆ ನಡೆಸಿದ ಬಳಿಕ ಕಂಡುಬಂದ ವಿಷಯ ಏಳು ಮಕ್ಕಳು ಸೇರಿದಂತೆ 10 ಮಂದಿ ನಾಗರಿಕರು ಡ್ರೋನ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು. ಅದು ನಮ್ಮ ಕಡೆಯಿಂದ ಆದ ತಪ್ಪು. ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ.  ಮಿಲಿಟರಿ ಕಮಾಂಡರ್ ಆಗಿ, ಈ ಡ್ರೋನ್ ದಾಳಿಗೆ ನಾನೇ ಸಂಪೂರ್ಣ ಹೊಣೆಯಾಗಿದ್ದು ನಾಗರಿಕರ ಸಾವಿಗೂ ನಾವೇ ಕಾರಣ, ಅವರ ಕುಟುಂಬಸ್ಥರಿಗೆ ನಮ್ಮ ಸಂತಾಪಗಳು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com