ಅಫ್ಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳು 'ಆದಷ್ಟು ಬೇಗ' ಶಾಲೆಗೆ ಮರಳಲು ಅವಕಾಶ: ತಾಲಿಬಾನ್
ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳು ಆದಷ್ಟು ಬೇಗ ಶಾಲೆಗೆ ಮರಳಲು ಅವಕಾಶ ನೀಡಲಾಗುವುದು ಎಂದು ತಾಲಿಬಾನ್ ಮಂಗಳವಾರ ತನ್ನ ಎಲ್ಲ ಪುರುಷ ಸಂಪುಟದಲ್ಲಿ ಉಳಿದ ಸ್ಥಾನಗಳನ್ನು ಘೋಷಿಸಿದ ನಂತರ ಹೇಳಿದೆ.
Published: 21st September 2021 01:38 PM | Last Updated: 21st September 2021 01:38 PM | A+A A-

ಜಬಿಹುಲ್ಲಾ ಮುಜಾಹಿದ್
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳು ಆದಷ್ಟು ಬೇಗ ಶಾಲೆಗೆ ಮರಳಲು ಅವಕಾಶ ನೀಡಲಾಗುವುದು ಎಂದು ತಾಲಿಬಾನ್ ಮಂಗಳವಾರ ತನ್ನ ಎಲ್ಲ ಪುರುಷ ಸಂಪುಟದಲ್ಲಿ ಉಳಿದ ಸ್ಥಾನಗಳನ್ನು ಘೋಷಿಸಿದ ನಂತರ ಹೇಳಿದೆ.
"ನಾವು ಈ ವಿಚಾರವನ್ನು ಅಂತಿಮಗೊಳಿಸುತ್ತಿದ್ದೇವೆ... ಅದು ಆದಷ್ಟು ಬೇಗ ಹೆಣ್ಣು ಮಕ್ಕಳು ಶಾಲೆಗೆ ಮರಳಲು ಅವಕಾಶ ನೀಡಲಾಗುವುದು" ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಬಾಲಕಿಯರ ಶಿಕ್ಷಣದ ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ. ಆದರೆ ಮಹಿಳಾ ವ್ಯವಹಾರಗಳ ಸಚಿವಾಲಯ ಬಂದ್ ಮಾಡಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಮುಜಾಹಿದ್ ನಿರಾಕರಿಸಿದ್ದಾರೆ.
ಇದನ್ನು ಓದಿ: ಅಫ್ಘಾನಿಸ್ತಾನದಲ್ಲಿ ಮಾಧ್ಯಮಿಕ ಶಾಲೆಗೆ ಬಾಲಕಿಯರಿಗೆ, ಶಿಕ್ಷಕಿಯರಿಗೆ ಪ್ರವೇಶವಿಲ್ಲ, ಮಹಿಳಾ ಸಚಿವಾಲಯ ಬಂದ್
ಶಿಕ್ಷಣ ಸಚಿವಾಲಯವು ಕಳೆದ ವಾರಾಂತ್ಯದಲ್ಲಿ ಮಾಧ್ಯಮಿಕ ಶಾಲೆಯ ಪುರುಷ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶಾಲೆಗೆ ಮರಳುವಂತೆ ಆದೇಶಿಸಿತ್ತು. ಆದರೆ ದೇಶದ ಮಹಿಳಾ ಶಿಕ್ಷಕರು ಮತ್ತು ಬಾಲಕಿಯರ ಬಗ್ಗೆ ಯಾವುದೇ ಉಲ್ಲೇಖ ಮಾಡಿರಲಿಲ್ಲ.
ಇನ್ನು ತಾಲಿಬಾನ್ ಸರ್ಕಾರ ಮಹಿಳಾ ವ್ಯವಹಾರಗಳ ಸಚಿವಾಲಯವನ್ನು ಸ್ಥಗಿತಗೊಳಿಸಿದ್ದು, ಅದನ್ನು ತಮ್ಮ ಮೊದಲ ಆಳ್ವಿಕೆಯಲ್ಲಿ ಜಾರಿಯಲ್ಲಿದ್ದ ಕಟ್ಟುನಿಟ್ಟಾದ ಧಾರ್ಮಿಕ ಸಿದ್ಧಾಂತವನ್ನು ಜಾರಿಗೊಳಿಸುವ ಇಲಾಖೆಯನ್ನಾಗಿ ಬದಲಾಯಿಸಲಾಗಿದೆ.