3ನೇ ಬಾರಿಗೆ ನೇಪಾಳ ಪ್ರಧಾನಿಯಾಗಿ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ನೇಮಕ!

ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ಸಿಪಿಎನ್-ಮಾವೋವಾದಿ ಸೆಂಟರ್(ಸಿಪಿಎನ್-ಎಂಸಿ) ಅಧ್ಯಕ್ಷ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಅವರನ್ನು ನೇಪಾಳದ ಹೊಸ ಪ್ರಧಾನಿಯಾಗಿ ನೇಮಿಸಿದ್ದಾರೆ.
ಪ್ರಚಂಡ
ಪ್ರಚಂಡ
Updated on

ಕಠ್ಮಂಡು: ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ಸಿಪಿಎನ್-ಮಾವೋವಾದಿ ಸೆಂಟರ್(ಸಿಪಿಎನ್-ಎಂಸಿ) ಅಧ್ಯಕ್ಷ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಅವರನ್ನು ನೇಪಾಳದ ಹೊಸ ಪ್ರಧಾನಿಯಾಗಿ ನೇಮಿಸಿದ್ದಾರೆ. ಇದಕ್ಕೂ ಮೊದಲು ಪುಷ್ಪ ಕಮಲ್ ದಹಲ್ ನೇಪಾಳದ ಅಧ್ಯಕ್ಷರಿಗೆ ಮುಂದಿನ ಪ್ರಧಾನಿಯಾಗಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದರು.

ಪ್ರಚಂಡ ಅವರು ಪಕ್ಷೇತ್ತರ ಸಂಸದರು ಸೇರಿದಂತೆ 169 ಸಂಸದರ ಬೆಂಬಲವಿದೆ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದರು. ಈ ಹಿಂದೆ ಮಾಜಿ ಪ್ರಧಾನಿ ಕೆ. ಪಿ.ಶರ್ಮಾ ಓಲಿ ನೇತೃತ್ವದಲ್ಲಿ ಸಿಪಿಎನ್-ಯುಎಂಎಲ್, ಸಿಪಿಎನ್-ಎಂಸಿ, ರಾಷ್ಟ್ರೀಯ ಸ್ವತಂತ್ರ ಪಕ್ಷ(ಆರ್‌ಎಸ್‌ಪಿ) ಮತ್ತು ಇತರ ಸಣ್ಣ ಪಕ್ಷಗಳ ಮಹತ್ವದ ಸಭೆ ನಡೆಯಿತು. ಇದರಲ್ಲಿ 'ಪ್ರಚಂಡ' ನೇತೃತ್ವದಲ್ಲಿ ಸರ್ಕಾರ ರಚಿಸಲು ಒಮ್ಮತ ಮೂಡಿತ್ತು. 

ಇನ್ನು ಮುಂದಿನ ಎರಡೂವರೆ ವರ್ಷಗಳ ಕಾಲ ಪ್ರಚಂಡ ಅವರೇ ಪ್ರಧಾನಿಯಾಗಿಯೇ ಇರುತ್ತಾರೆ ಎಂದು ಮೈತ್ರಿಕೂಟದಲ್ಲಿ ಭಾಗವಾಗಿರುವ ಪಕ್ಷಗಳು ಹೇಳಿವೆ. ಇದರ ನಂತರ, ಸಿಪಿಎನ್-ಯುಎಂಎಲ್ ನಾಯಕ ಮಾಜಿ ಪ್ರಧಾನಿ ಒಲಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ.

ಪ್ರಚಂಡ ಮತ್ತು ಓಲಿ ಅವರು ಸರದಿ ಆಧಾರದ ಮೇಲೆ ಸರ್ಕಾರವನ್ನು ಮುನ್ನಡೆಸಲು ಒಪ್ಪಿಕೊಂಡಿದ್ದಾರೆ. ಅಲ್ಲದೆ ಪ್ರಚಂಡ ಅವರನ್ನು ಮೊದಲ ಪ್ರಧಾನಿ ಮಾಡಲು ಓಲಿ ಒಪ್ಪಿಗೆಯನ್ನು ವ್ಯಕ್ತಪಡಿಸಿದ್ದಾರೆ. ಹೊಸ ಸರ್ಕಾರವು 275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ 169 ಸದಸ್ಯರ ಬೆಂಬಲವನ್ನು ಹೊಂದಿದೆ. ಇದರಲ್ಲಿ ಸಿಪಿಎನ್-ಯುಎಂಎಲ್‌ನ 78, ಸಿಪಿಎನ್-ಎಂಸಿಯಿಂದ 32, ಆರ್‌ಎಸ್‌ಪಿಯ 20, ಆರ್‌ಪಿಪಿಯಿಂದ 14, ಜೆಎಸ್‌ಪಿಯಿಂದ 12, ಆರು ಜನ್ಮತ್ ಮತ್ತು ಸಿವಿಲ್ ಲಿಬರೇಶನ್ ಪಾರ್ಟಿಯ ಮೂವರು. ಅಲ್ಲದೆ ಸದಸ್ಯರ ಜೊತೆಗೆ ಸ್ವತಂತ್ರ ಸಂಸದರೂ ಸೇರಿದ್ದಾರೆ.

ವಾಸ್ತವವಾಗಿ, ನೇಪಾಳಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿತ್ತು. ಆದರೆ ಅಧ್ಯಕ್ಷರು ನೀಡಿದ ಗಡುವಿನೊಳಗೆ ಸರ್ಕಾರವನ್ನು ರಚಿಸಲು ವಿಫಲವಾಗಿತ್ತು. ಅದರ ನಂತರ CPN-UML ಪ್ರಚಂಡ ನೇತೃತ್ವದಲ್ಲಿ ಹೊಸ ಸರ್ಕಾರವನ್ನು ರಚಿಸಲು ಉಪಕ್ರಮವನ್ನು ತೆಗೆದುಕೊಂಡಿತು. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ನೇಪಾಳಿ ಕಾಂಗ್ರೆಸ್ 89 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿದೆ. ಆದರೆ CPN-UML ಮತ್ತು CPN-MC ಕ್ರಮವಾಗಿ 78 ಮತ್ತು 32 ಸ್ಥಾನಗಳನ್ನು ಹೊಂದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com