ಇಂಗ್ಲೆಂಡ್ ಪ್ರಧಾನಿ ಹುದ್ದೆ ರೇಸ್ ನಲ್ಲಿ ಭಾರತ ಮೂಲದ ರಿಷಿ ಸುನಕ್, ಸುಯೆಲ್ಲಾ ಬ್ರಾವರ್‌ಮನ್ ಮುಂಚೂಣಿಯಲ್ಲಿ

ಭಾರತ ಮೂಲದ ಇಂಗ್ಲೆಂಡಿನ ಮಾಜಿ ಚಾನ್ಸೆಲರ್ ರಿಷಿ ಸುನಕ್, ಅಟಾರ್ನಿ ಜನರಲ್ ಸುಯೆಲ್ಲಾ ಬ್ರಾವರ್‌ಮನ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಬ್ರಿಟನ್ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅವರ ಬದಲಿಗೆ ನೇಮಕಗೊಳ್ಳುವ ಪ್ರಧಾನಿ ಹುದ್ದೆಯ  8 ಆಕಾಂಕ್ಷಿಗಳಲ್ಲಿ ಪ್ರಮುಖರಾಗಿದ್ದಾರೆ. 
ಪ್ರಚಾರದಲ್ಲಿ ತೊಡಗಿರುವ ರಿಷಿ ಸುನಕ್
ಪ್ರಚಾರದಲ್ಲಿ ತೊಡಗಿರುವ ರಿಷಿ ಸುನಕ್
Updated on

ಲಂಡನ್: ಭಾರತ ಮೂಲದ ಇಂಗ್ಲೆಂಡಿನ ಮಾಜಿ ಚಾನ್ಸೆಲರ್ ರಿಷಿ ಸುನಕ್, ಅಟಾರ್ನಿ ಜನರಲ್ ಸುಯೆಲ್ಲಾ ಬ್ರಾವರ್‌ಮನ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಬ್ರಿಟನ್ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅವರ ಬದಲಿಗೆ ನೇಮಕಗೊಳ್ಳುವ ಪ್ರಧಾನಿ ಹುದ್ದೆಯ  8 ಆಕಾಂಕ್ಷಿಗಳಲ್ಲಿ ಪ್ರಮುಖರಾಗಿದ್ದಾರೆ. 

ಇನ್ನು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್, ಹೊಸ ಚಾನ್ಸೆಲರ್ ನಧಿಮ್ ಜಹಾವಿ, ವಾಣಿಜ್ಯ ಸಚಿವ ಪೆನ್ನಿ ಮೊರ್ಡಾಂಟ್, ಮಾಜಿ ಕ್ಯಾಬಿನೆಟ್ ಮಂತ್ರಿಗಳಾದ ಕೆಮಿ ಬಡೆನೊಚ್ ಮತ್ತು ಜೆರೆಮಿ ಹಂಟ್ ಮತ್ತು ಟೋರಿ ಬ್ಯಾಕ್‌ಬೆನ್‌ಚರ್ ಟಾಮ್ ತುಗೆನ್‌ಧಾಟ್ ಅವರು ಸಹ ಪ್ರಧಾನಿ ಹುದ್ದೆ ರೇಸ್ ನಲ್ಲಿದ್ದಾರೆ.

ಪ್ರಧಾನಿ ಹುದ್ದೆಯ ನಾಮಾಂಕಿತಕ್ಕೆ ಈಗಾಗಲೇ ಔಪಚಾರಿಕವಾಗಿ ತಮ್ಮ ಪ್ರಚಾರವನ್ನು ಪ್ರಾರಂಭಿಸಿರುವ ರಿಷಿ ಸುನಕ್ ಅವರು ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಹಿಂದೆ ಹೆಚ್ಚಿನ ಸಂಖ್ಯೆಯ ಸಂಸದರು ಇದ್ದಾರೆ. 

ಇನ್ನು 42 ವರ್ಷದ ಬ್ರೇವರ್ಮನ್ ಕೂಡ ತಮಗೆ ಹೆಚ್ಚಿನ ಸಂಸದರ ಬೆಂಬಲವಿದೆ ಎಂದಿದ್ದಾರೆ. ಕೇನ್ಯಾ ಮತ್ತು ಮಾರಿಷಸ್ ನಿಂದ 1960ರ ದಶಕದಲ್ಲಿ ಬ್ರಿಟನ್ ನಿಂದ ಬ್ರೇವರ್ಮನ್ ಅವರ ಪೋಷಕರು ವಲಸೆ ಹೋಗಿದ್ದರು. 2015ರಿಂದ ಫರೆಹಮ್ ಕ್ಷೇತ್ರದ ಸಂಸದರಾಗಿದ್ದಾರೆ. 

ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ಕನಿಷ್ಠ 20 ಸಂಸದರ ಬೆಂಬಲ ಅಗತ್ಯವಿದ್ದು, ಅಷ್ಟು ಸಂಸದರು ಬೆಂಬಲ ಸೂಚಿಸಿದರೆ ಮೊದಲ ಸುತ್ತಿನಲ್ಲಿ ಅರ್ಹತೆ ಪಡೆಯುತ್ತಾರೆ. ಇಂದು ಮೊದಲ ಸುತ್ತಿನ ಮತ ಎಣಿಕೆ ನಡೆಯಲಿದೆ. ಇನ್ನು ಎರಡನೇ ಸುತ್ತು ಪ್ರವೇಶಿಸಬೇಕಾದರೆ 30 ಸಂಸದರ ಬೆಂಬಲ ಸಿಗಬೇಕು. ಈಗಾಗಲೇ ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡಿದ್ದು 20 ಸಂಸದರ ಬೆಂಬಲ ಗಳಿಸದೆ ಪಾಕಿಸ್ತಾನ ಮೂಲದ ಮಾಜಿ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜವೀದ್ ಮತ್ತು ವಿದೇಶಾಂಗ ಇಲಾಖೆ ಸಚಿವ ರೆಹಮಾನ್ ಖಿಸ್ಟಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. 

ಈ ವಾರ ಇಬ್ಬರು ಅಭ್ಯರ್ಥಿಗಳ ಆಯ್ಕೆಯ ಬ್ಯಾಲಟ್ ಮೂಲಕ ಮತದಾನ ಮಾಡುವ ಪ್ರಕ್ರಿಯೆ ಮುಗಿಯದಿದ್ದರೆ ಮುಂದಿನ ವಾರಕ್ಕೆ ಮುಂದೂಡಬಹುದು. ಜುಲೈ 21ರಂದು ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಕೊನೆಯ ದಿನವಾಗಿರುತ್ತದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ನೋಡಿಕೊಳ್ಳಲು 1922 ಚೈರ್ ಸರ್ ಗ್ರಹಮ್ ಬ್ರಾಡಿ ಸಮಿತಿಯಿರುತ್ತದೆ. 

ಇದೇ ಸಮಿತಿ ಬ್ರಿಟನ್ ನ ನೂತನ ಟೋರಿ ನಾಯಕನ ಹೆಸರನ್ನು ಸೆಪ್ಟೆಂಬರ್ 5ರಂದು ಘೋಷಿಸುತ್ತದೆ. ಸೆಪ್ಟೆಂಬರ್ 7ರಂದು ಸಂಸತ್ತನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಅಂತಿಮವಾಗಿ ಇಬ್ಬರು ಅಂದಾಜು 2 ಲಕ್ಷ ಟೋರಿ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾರೆ. ನಂತರ ಅಂಚೆ ಮತಗಳನ್ನು ಪರಿಗಣಿಸಲಾಗುತ್ತದೆ. ಯಾರು ಅತಿ ಹೆಚ್ಚು ಮತಗಳನ್ನು ಗಳಿಸುತ್ತಾರೆಯೋ ಅವರು ಇಂಗ್ಲೆಂಡಿನ ನೂತನ ಪ್ರಧಾನಿಯಾಗುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com