ಪ್ರಿನ್ಸ್ ಚಾರ್ಲ್ಸ್
ಪ್ರಿನ್ಸ್ ಚಾರ್ಲ್ಸ್

ಬ್ರಿಟನ್ ಪ್ರಿನ್ಸ್ ಚಾರ್ಲ್ಸ್ ಚಾರಿಟಿಗೆ ಬಿನ್ ಲ್ಯಾಡನ್ ಕುಟುಂಬದಿಂದ 1.19 ಮಿಲಿಯನ್ ಡಾಲರ್ ದಾನ! 

9/11 ಮಾಸ್ಟರ್ ಮೈಂಡ್ ಒಸಾಮಾ ಬಿನ್ ಲ್ಯಾಡನ್ ಕುಟುಂಬದವರು ಬ್ರಿಟನ್ ರಾಜಮನೆತನದ ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್ ಗೆ ಸೇರಿದ ದತ್ತಿ ಟ್ರಸ್ಟ್ ಗೆ 1.19 ಮಿಲಿಯನ್ ಡಾಲರ್, (ಅಥವಾ 1.21 ಮಿಲಿಯನ್ ಯುರೋ) ನಷ್ಟು ಹಣವನ್ನು ದಾನ ಮಾಡಿದ್ದಾರೆಂಬ ಸುದ್ದಿ ಈಗ ಬಹಿರಂಗವಾಗಿದೆ. 
Published on

ಲಂಡನ್: 9/11 ಮಾಸ್ಟರ್ ಮೈಂಡ್ ಒಸಾಮಾ ಬಿನ್ ಲ್ಯಾಡನ್ ಕುಟುಂಬದವರು ಬ್ರಿಟನ್ ರಾಜಮನೆತನದ ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್ ಗೆ ಸೇರಿದ ದತ್ತಿ ಟ್ರಸ್ಟ್ ಗೆ 1.19 ಮಿಲಿಯನ್ ಡಾಲರ್, (ಅಥವಾ 1.21 ಮಿಲಿಯನ್ ಯುರೋ) ನಷ್ಟು ಹಣವನ್ನು ದಾನ ಮಾಡಿದ್ದಾರೆಂಬ ಸುದ್ದಿ ಈಗ ಬಹಿರಂಗವಾಗಿದೆ. 

ಸಂಡೇ ಟೈಮ್ಸ್ ನಲ್ಲಿ ಈ ಕುರಿತ ವರದಿ ಪ್ರಕಟವಾಗಿದ್ದು, ಸೌದಿ ಅರೇಬಿಯಾದಲ್ಲಿರುವ ಕುಟುಂಬ ಸದಸ್ಯರ ನಡೆಯಲ್ಲಿ ಯಾವುದೇ ತಪ್ಪು ಇಲ್ಲದೇ ಇದ್ದರೂ ಕ್ರಿಮಿನಲ್ ಅಪರಾಧಗಳ ಆರೋಪಗಳು ಕೇಳಿಬಂದಿರುವ 73 ವರ್ಷಗಳ ಪ್ರಿನ್ಸ್ ಚಾರಿಟಿ ಸಂಸ್ಥೆಗಳ ಮೇಲಿನ ಪರಿಶೀಲನೆಗಳನ್ನು ಹೆಚ್ಚಿಸುತ್ತದೆ. ಪ್ರಿನ್ಸ್ ಚಾರ್ಲ್ಸ್ ಗೆ ಆತನ ಸಲಹೆಗಾರರು ಒಸಾಮಾ ಬಿನ್ ಲ್ಯಾಡನ್ ಗೆ ಸಂಬಂಧಿಸಿದ ಯಾರಿಂದಲೂ ಹಣ ಪಡೆಯದಂತೆ ಸಲಹೆ ನೀಡಿದ್ದಾರೆ. 

ಈ ಸಲಹೆಗಳ ಹೊರತಾಗಿಯೂ 2013 ರಲ್ಲಿ ಒಸಾಮಗೆ ಸಂಬಂಧಿಸಿದವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಚಾರ್ಲ್ಸ್ 73 ಪ್ರಿನ್ಸ್ ಆಫ್ ವ್ಹೇಲ್ಸ್ ಚಾರಿಟಬಲ್ ಫಂಡ್ (ಪಿಡಬ್ಲ್ಯುಸಿಎಫ್) ಗೆ ಹಣ ಸ್ವೀಕರಿಸಲು ಒಪ್ಪಿಗೆ ಸೂಚಿಸಿದ್ದರು. ಆಗಿನ ಐವರು ಟ್ರಸ್ಟಿಗಳು ಈ ದತ್ತಿ ಸ್ವೀಕರಿಸುವುದಕ್ಕೆ ಒಪ್ಪಿಗೆ ಸೂಚಿಸಿದ್ದರು ಎಂದು ಪಿಡಬ್ಲ್ಯುಸಿಎಫ್ ನ ಅಧ್ಯಕ್ಷರು ಹೇಳಿದ್ದಾರೆ. 

ಸೌದಿ ಉದ್ಯಮಿಯನ್ನೊಳಗೊಂಡ ಕ್ಯಾಷ್ ಫಾರ್ ಆನರ್ಸ್ (ಸನ್ಮಾನ, ಬಿರುದು, ಗೌರವಗಳಿಗಾಗಿ ಹಣ)   ಹಗರಣದ ಬಗ್ಗೆ ಚಾರ್ಲ್ಸ್ ಚಾರಿಟಬಲ್ ಫೌಂಡೇಷನ್ ಗಳ ವಿರುದ್ಧ ಬ್ರಿಟೀಷ್ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದರು. ಈ ಆರೋಪಗಳಿಗೆ ಸಂಬಂಧಿಸಿದಂತೆ ನಡೆದ ಆಂತರಿಕ ತನಿಖೆಯ ಬಳಿಕ ದಿ ಪ್ರಿನ್ಸ್ ಫೌಂಡೇಷನ್ ನ ಮುಖ್ಯಸ್ಥರು ಕಳೆದ ವರ್ಷ ರಾಜೀನಾಮೆ ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com