ಭಾರತ, ಇಂಡೋನೇಷ್ಯಾ ಶ್ರೀಮಂತ ಪರಂಪರೆ ಹಂಚಿಕೊಂಡಿವೆ; ಬಾಲಿಯಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಭಾರತ ಮತ್ತು ಇಂಡೋನೇಷ್ಯಾ ಶ್ರೀಮಂತ ಪರಂಪರೆಯನ್ನು ಹಂಚಿಕೊಂಡಿದ್ದು, ಒಳ್ಳೆಯ ಸಮಯ ಮತ್ತು ಸವಾಲಿನ ಸಮಯಗಳಲ್ಲಿ ಸೌಹಾರ್ದಯುತ ಸಂಬಂಧವನ್ನು ಕಾಯ್ದುಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬಾಲಿಯಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ
ಬಾಲಿಯಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ

ಬಾಲಿ: ಭಾರತ ಮತ್ತು ಇಂಡೋನೇಷ್ಯಾ ಶ್ರೀಮಂತ ಪರಂಪರೆಯನ್ನು ಹಂಚಿಕೊಂಡಿದ್ದು, ಒಳ್ಳೆಯ ಸಮಯ ಮತ್ತು ಸವಾಲಿನ ಸಮಯಗಳಲ್ಲಿ ಸೌಹಾರ್ದಯುತ ಸಂಬಂಧವನ್ನು ಕಾಯ್ದುಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಲು ಇಂಡೋನೇಷ್ಯಾದ ಬಾಲಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಬಾಲಿಯಲ್ಲಿನ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದು,  ಉಭಯ ದೇಶಗಳೂ ತಮ್ಮ ತಮ್ಮ ನೆಲದ ಅದ್ಭುತ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದಕ್ಕೆ ಪ್ರಸ್ಪರ ಸಹಾಯ ಮಾಡಿವೆ ಎಂದು ಹೇಳಿದ್ದಾರೆ. 

ಬಾಲಿ ಮಹರ್ಷಿ ಮಾರ್ಕಾಂಡೇಯ ಹಾಗೂ ಮಹರ್ಷಿ ಅಗಸ್ತ್ಯರು ಪ್ರವರ್ಧಿಸಿದ ಪ್ರಾಚೀನ ಭೂಮಿಯಾಗಿದೆ. ಭಾರತ ಹಿಮಾಲಯವನ್ನು ಹೊಂದಿದ್ದರೆ ಇಂಡೋನೇಷ್ಯಾ ಮೌಂಟ್ ಆಗುಂಗ್ ನ್ನು ಹೊಂದಿದೆ. ಭಾರತದಲ್ಲಿ ಗಂಗಾ ಇದ್ದರೆ, ಇಂಡೋನೇಷ್ಯಾದಲ್ಲಿ ತೀರ್ಥ ಗಂಗಾ ಇದೆ. ನಾವು ಸಂಸ್ಕೃತಿ ಹಾಗೂ ಸಂಪ್ರದಾಯಗಳ ಮೂಲಕ ಒಗ್ಗಟ್ಟಾಗಿದ್ದೇವೆ ಎಂದು ಮೋದಿ ಹೇಳಿದ್ದಾರೆ. 

ಬಲಿಯಾತ್ರ ಮಹೋತ್ಸವ ಉಲ್ಲೇಖ

ಪ್ರಧಾನಿ ಮೋದಿ ಒಡಿಶಾದಲ್ಲಿ ಆಚರಿಸಲಾಗುವ ಮಲಿಯಾತ್ರ ಮಹೋತ್ಸವ ಹಾಗೂ ಅದಕ್ಕೆ ಇರುವ ಇಂಡೋನೇಷ್ಯಾದ ನಂಟಿನ ಬಗ್ಗೆಯೂ ಮಾತನಾಡಿದ್ದಾರೆ. "ನಾನು ನಿಮ್ಮೊಂದಿಗೆ ಬಾಲಿಯಲ್ಲಿ ಮಾತನಾಡುತ್ತಿದ್ದೇನೆ ಹಾಗೂ ನಾವು ಇಂಡೋನೇಷ್ಯಾದ ಸಂಪ್ರದಾಯದ ಹಾಡುಗಳನ್ನು  ಬಲಿಯಾತ್ರ ಮಹೋತ್ಸವ ನಡೆಯುತ್ತಿರುವ ಒಡಿಶಾದಲ್ಲಿ ಹಾಡುತ್ತೇವೆ. ಈ ಮಹೋತ್ಸವ ಸಾವಿರಾರು ವರ್ಷಗಳ ಭಾರತ- ಇಂಡೋನೇಷ್ಯಾ ನಡುವಿನ ಸಾವಿರಾರು ವರ್ಷಗಳ ವಾಣಿಜ್ಯ ವ್ಯಾಪಾರ ಸಂಬಂಧವನ್ನು ನೆನಪಿಸುತ್ತದೆ. ಇಂಡೋನೇಷ್ಯಾದ ಜನತೆ ಈ ಬಾರಿಯ ಬಲಿಯಾತ್ರ ಮಹೋತ್ಸವದ ಫೋಟೋಗಳನ್ನು ನೋಡಿದರೆ ಅವರಿಗೆ ಹೆಮ್ಮೆ ಮತ್ತು ಸಂತೋಷವಾಗುತ್ತದೆ ಎಂದು ಮೋದಿ ಹೇಳಿದ್ದಾರೆ. 

ರಾಮಮಂದಿರ ಕುರಿತು

ಇದೇ ವೇಳೆ ಎರಡೂ ರಾಷ್ಟ್ರಗಳ ಧಾರ್ಮಿಕ ನಂಬಿಕೆಗಳ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದ್ದು, ಇಂಡೋನೇಷ್ಯಾದಲ್ಲಿ ನೀವು ಭಗವಾನ್ ವಿಷ್ಣು ಹಾಗೂ ಭಗವಾನ್ ರಾಮನನ್ನು ಪೂಜಿಸುತ್ತೀರಿ, ಅಯೋಧ್ಯೆಯಲ್ಲಿನ ರಾಮಮಂದಿರಕ್ಕೆ ಶಿಲಾನ್ಯಾಸ ಮಾಡುವಾಗ ಇಂಡೋನೇಷ್ಯಾ ರಾಮಾಯಣದ ಸಂಪ್ರದಾಯವನ್ನು ಪ್ರೀತಿಯಿಂದ ಗೌರವಿಸಿದ್ದೇವೆ. ಅಯೋಧ್ಯೆ, ದ್ವಾರಕೆಗೆ ಭೇಟಿ ನೀಡಲು ಇಚ್ಛಿಸದವರು ಇಂಡೋನೇಷ್ಯಾದಲ್ಲಿ ಸಿಗುವುದು ವಿರಳ ಎಂದಿರುವ ಮೋದಿ, ಸಂಸ್ಕೃತಿ ಒಂದೇ ಆಗಿದ್ದಾಗ, ಮಾನವತ್ವದೆಡೆಗೆ ದೃಷ್ಟಿ ಒಂದೇ ಆಗಿರುವಾಗ ಅಭಿವೃದ್ಧಿಯ ಮಾರ್ಗವೂ ಒಂದೇ ಆಗುತ್ತದೆ ಎಂದು ಮೋದಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com