ಥಾಯ್ಲೆಂಡ್‌: 23 ಮಕ್ಕಳು ಸೇರಿ 35 ಮಂದಿಗೆ ಗುಂಡಿಕ್ಕಿ ಕೊಂದು, ಕುಟುಂಬವನ್ನೂ ಶೂಟ್ ಮಾಡಿ ಆತ್ಮಹತ್ಯೆಗೆ ಶರಣಾದ ಬಂದೂಕುಧಾರಿ

ಥಾಯ್ಲೆಂಡ್‌ನ ಈಶಾನ್ಯ ಪ್ರಾಂತ್ಯದಲ್ಲಿ ಮಕ್ಕಳ ಡೇ-ಕೇರ್ ಸೆಂಟರ್‌ನಲ್ಲಿ ಗುರುವಾರ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 23 ಮಕ್ಕಳು ಸೇರಿದಂತೆ ಸುಮಾರು 35 ಮಂದಿ ಸಾವನ್ನಪ್ಪಿದ್ದಾರೆ.
ಸ್ಥಳೀಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ
ಸ್ಥಳೀಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ

ಥಾಯ್ಲೆಂಡ್‌: ಥಾಯ್ಲೆಂಡ್‌ನ ಈಶಾನ್ಯ ಪ್ರಾಂತ್ಯದಲ್ಲಿ ಮಕ್ಕಳ ಡೇ-ಕೇರ್ ಸೆಂಟರ್‌ನಲ್ಲಿ ಗುರುವಾರ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 23 ಮಕ್ಕಳು ಸೇರಿದಂತೆ ಸುಮಾರು 35 ಮಂದಿ ಸಾವನ್ನಪ್ಪಿದ್ದಾರೆ.

ಲ್ಯಾಂಫು ಪಟ್ಟಣದ ಮಧ್ಯಭಾಗದಲ್ಲಿ ಬಂದೂಕುಧಾರಿಯು ಮಧ್ಯಾಹ್ನದ ವೇಳೆಗೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಅಚಾಯೋನ್ ಕ್ರೈಥೋಂಗ್ ಹೇಳಿದ್ದಾರೆ. ಸಾವಿಗೀಡಾದವರಲ್ಲಿ ಮಕ್ಕಳು ಮತ್ತು ವಯಸ್ಕರು ಸೇರಿದ್ದಾರೆ ಬಂದೂಕುಧಾರಿ ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು ಡೇ-ಕೇರ್ ಸೆಂಟರ್ ನಲ್ಲಿ ಗುಂಡಿನ ದಾಳಿ ನಡೆಸಿದ ನಂತರ ತನ್ನ ಕುಟುಂಬವನ್ನು ಶೂಟ್ ಮಾಡಿ ಬಳಿಕ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಪ್ರಕಟೆಯಲ್ಲಿ ತಿಳಿಸಿದ್ದಾರೆ.

ಬಂದೂಕುಧಾರಿಯನ್ನು ಪನ್ಯಾ ಖಮ್ರಾಬ್ ಎಂದು ಗುರುತಿಸಲಾಗಿದ್ದು, ಅವರು ಕಳೆದ ವರ್ಷ ಮಾದಕವಸ್ತು ಸೇವನೆಗಾಗಿ ಸೇನಾಪಡೆಯಿಂದ ವಜಾಗೊಂಡಿದ್ದರು ಎಂದು ದಾಳಿ ನಡೆದ ಪ್ರಾಂತ್ಯದ ಪೊಲೀಸ್ ಕರ್ನಲ್ ಜಕ್ಕಪಟ್ ವಿಜಿತ್ರೈತಯಾ ಅವರು ಹೇಳಿದ್ದಾರೆ.

ಮೃತಪಟ್ಟವರಲ್ಲಿ ಎರಡರಿಂದ ಮೂರು ವರ್ಷ ವಯಸ್ಸಿನ 23 ಮಕ್ಕಳಿದ್ದಾರೆ. ದಾಳಿ ನಡೆದ ಸಮಯದಲ್ಲಿ  ಹೆಚ್ಚಿನ ಮಕ್ಕಳು ಮಲಗಿದ್ದರು ಎಂದು ಜಕ್ಕಾಪಟ್ ತಿಳಿಸಿದ್ದಾರೆ. 

ಪನ್ಯಾ ಖಮ್ರಾಬ್ ಅವರು ಡೇ-ಕೇರ್ ಸೆಂಟರ್‌ನಲ್ಲಿ ಗುಂಡಿನ ದಾಳಿ ನಡೆಸಿದ ನಂತರ ತನ್ನ ಹೆಂಡತಿ ಮತ್ತು ಮಗುವನ್ನು ಗುಂಡಿಕ್ಕಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಡೈಲಿ ಮಿರರ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com