ಉಗ್ರರಿಂದ ಪಾಕಿಸ್ತಾನದ ಹಿರಿಯ ಸಚಿವನ ಅಪಹರಣ; ಜೈಲಿನಲ್ಲಿರುವ ಭಯೋತ್ಪಾದಕರ ಬಿಡುಗಡೆಗೆ ಆಗ್ರಹ  

ಪಾಕಿಸ್ತಾನದ ಹಿರಿಯ ಸಚಿವನನ್ನು ಅಪಹರಣ ಮಾಡಿರುವ ಅಲ್ಲಿನ ಭಯೋತ್ಪಾದಕರು ತಮ್ಮ ಸಹಚರರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. 
ಉಗ್ರರು (ಸಂಗ್ರಹ ಚಿತ್ರ)
ಉಗ್ರರು (ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಪಾಕಿಸ್ತಾನದ ಹಿರಿಯ ಸಚಿವನನ್ನು ಅಪಹರಣ ಮಾಡಿರುವ ಅಲ್ಲಿನ ಭಯೋತ್ಪಾದಕರು ತಮ್ಮ ಸಹಚರರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. 

ತಮ್ಮ ಬೇಡಿಕೆ ಈಡೇರಿಕೆಗೆ ಸಚಿವರನ್ನು ಅಪಹರಣ ಮಾಡುವುದಷ್ಟೇ ಅಲ್ಲದೇ ಉಗ್ರರು ಖೈಬರ್ ಪಖ್ತುನ್ಖ್ವಾ, ಗಿಲ್ಗಿಟ್ ಬಾಲ್ಟಿಸ್ಥಾನ್ ನ್ನು ಸಂಪರ್ಕಿಸುವ ರಸ್ತೆಯನ್ನು ಬಂದ್ ಮಾಡಿದ್ದು ಹಲವು ಪ್ರವಾಸಿಗರನ್ನೂ ಅಪಹರಿಸಿದ್ದಾರೆ.
 
ಉಗ್ರರ ಎದುರು ಸರ್ಕಾರ ಮಂಡಿಯೂರಿದ್ದು ಸಂಧಾನದ ನಂತರ ಭಯೋತ್ಪಾದಕರು ನಂಗ ಪರ್ಬತ್ ನಲ್ಲಿ ವಿದೇಶಿಗರನ್ನು ಹತ್ಯೆ ಮಾಡಿರುವ ಭಯೋತ್ಪಾದಕರನ್ನು ಬಿಡುಗಡೆ ಮಾಡುವಂತೆ ಮನವಿ ಮುಂದಿಟ್ಟು ಸಚಿವರನ್ನು ಬಿಡುಗಡೆ ಮಾಡಿದ್ದಾರೆ. 

ಸ್ವತಃ ಸಚಿವ ತನ್ನನ್ನು ಉಗ್ರರು ಬಿಡುಗಡೆ ಮಾಡಿರುವುದನ್ನು ಖಚಿತಪಡಿದ್ದಾರೆ. ನಂಗ ಪರ್ಬತ್ ನಲ್ಲಿ 10 ಮಂದಿ ವಿದೇಶಿಗರನ್ನು ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿರುವ ಹಬಿಬುರ್ ರೆಹಮಾನ್ ಹಾಗೂ ಆತನ ಸಹಚರರು ಶುಕ್ರವಾರ ಸಂಜೆ 4 ರ ವೇಳೆಗೆ ರಸ್ತೆ ಬಂದ್ ಮಾಡಿದ್ದರು ಎಂದು ತಿಳಿದುಬಂದಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com