ಬ್ರಿಟನ್ ಪ್ರಧಾನಿ ಲಿಜ್ ಟ್ರಸ್
ಬ್ರಿಟನ್ ಪ್ರಧಾನಿ ಲಿಜ್ ಟ್ರಸ್

ಬ್ರಿಟನ್ ಪ್ರಧಾನಿಗೆ ಅಧಿಕಾರ ವಹಿಸಿಕೊಂಡ 6 ವಾರಗಳಲ್ಲೇ ಸಂಕಷ್ಟ, ಬಂಡಾಯದ ಬಿಸಿ 

ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಕ್ರಿಸ್ ಮಸ್ ವರೆಗಾದರೂ ಅಧಿಕಾರದಲ್ಲಿ ಉಳಿಯುತ್ತಾರಾ? ಇದು ಸದ್ಯಕ್ಕೆ ಬ್ರಿಟನ್ ನ ಎಲ್ಲಾ ಪ್ರಜೆಗಳನ್ನು ಕಾಡುತ್ತಿರುವ ಪ್ರಶ್ನೆ! 

ಲಂಡನ್: ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಕ್ರಿಸ್ ಮಸ್ ವರೆಗಾದರೂ ಅಧಿಕಾರದಲ್ಲಿ ಉಳಿಯುತ್ತಾರಾ? ಇದು ಸದ್ಯಕ್ಕೆ ಬ್ರಿಟನ್ ನ ಎಲ್ಲಾ ಪ್ರಜೆಗಳನ್ನು ಕಾಡುತ್ತಿರುವ ಪ್ರಶ್ನೆ! 

ಪ್ರಧಾನಿ ಅಭ್ಯರ್ಥಿಯಾಗಿದ್ದ ರಿಷಿ ಸುನಕ್ ವಿರುದ್ಧ ಗೆದ್ದು ಪ್ರಧಾನಿಯಾಗಿ ನೇಮಕಗೊಂಡಿದ್ದ ಲಿಜ್ ಟ್ರಸ್ ಅಧಿಕಾರಕ್ಕೆ ಬಂದು ಕೇವಲ 40 ದಿನಗಳಾಗಿವೆಯಷ್ಟೇ. ಆಗಲೇ ಅವರಿಗೆ ಹಲವು ವಿಷಯಗಳಲ್ಲಿ ಬಂಡಾಯ ಎದುರಾಗಲು ಶುರುವಾಗಿದೆ. 

ಲಿಜ್ ಟ್ರಸ್ ಅವರ ಪ್ರಮುಖ ಆರ್ಥಿಕ ಯೋಜನೆಗಳ ಪೈಕಿ ಒಂದಾಗಿದ್ದ ಯೋಜಿತ ತೆರಿಗೆ ಕಡಿತದ ವಿಷಯದಲ್ಲಿ ಸರ್ಕಾರ ಯು-ಟರ್ನ್ ತೆಗೆದುಕೊಂಡಿದ್ದು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಲಿಜ್ ತೀವ್ರ ಮುಖಭಂಗ ಎದುರಿಸಬೇಕಾಗಿಬಂದಿದೆ. 6 ವಾರಗಳಲ್ಲಿ ಬ್ರಿಟನ್ ಪ್ರಧಾನಿ ಅಧಿಕಾರವನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಅವರ ಪ್ರಸ್ತಾವಿತ ಯೋಜನೆಗಳು  ಹಣದುಬ್ಬರ-ಪೀಡಿತ ಮಾರುಕಟ್ಟೆಗಳನ್ನು ತಹಬದಿಗೆ ತರಲು ಹಾಗೂ ಸಂಸದರ ಕಳವಳಗಳನ್ನು ನಿವಾರಿಸಲು ವಿಫಲವಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com