
ಸ್ವೀಡನ್: ಸ್ವೀಡನ್ ನ ನೂತನ ಪ್ರಧಾನಿಯಾಗಿ ಉಲ್ಫ್ ಕ್ರಿಸ್ಟರ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ.
ಬಲಪಂಥೀಯ ಸ್ವೀಡನ್ ಡೆಮಾಕ್ರಾಟ್ಸ್ ಬೆಂಬಲದೊಂದಿಗೆ ಮೊದಲ ಬಾರಿಗೆ ಕನ್ಸರ್ವೇಟೀವ್ ಪಕ್ಷದ ನಾಯಕ ಪ್ರಧಾನಿಯಾಗಿ ಆಯ್ಕೆಗೊಂಡಿದ್ದಾರೆ. ಉಲ್ಫ್ ಕ್ರಿಸ್ಟರ್ಸನ್ ಪರವಾಗಿ 176 ಮತಗಳು ಚಲಾವಣೆಯಾದರೆ, ವಿರುದ್ಧ 173 ಮತಗಳು ಚಲಾವಣೆಯಾಗಿದೆ. ಸ್ವೀಡನ್ ನಲ್ಲಿ ಅಸ್ತಿತ್ವಕ್ಕೆ ಬಂದಿರುವ ಮೂರು ಪಕ್ಷಗಳ ಸಮ್ಮಿಶ್ರ ಸರ್ಕಾರ ಇದಾಗಿದೆ.
ಉಲ್ಫ್ ಕ್ರಿಸ್ಟರ್ಸನ್ ನೇತೃತ್ವದ ಸರ್ಕಾರದ ಕಾರ್ಯನಿರ್ವಹಿಸುವುದಕ್ಕೆ ಮೂರೂ ಪಕ್ಷಗಳ ನಡುವೆ ಸಮಾನ ಅಂಶಗಳು ಸಿದ್ಧವಾಗುತ್ತಿದ್ದು, 62 ಪುಟಗಳಷ್ಟು ಮಾರ್ಗಸೂಚಿ ಹಾಕಿಕೊಳ್ಳಲಾಗಿದೆ. ಅಪರಾಧ ತಡೆ, ವಲಸೆ ವಿಷಯ ಮತ್ತು ಹೊಸ ಪರಮಾಣು ರಿಯಾಕ್ಟರ್‌ಗಳ ನಿರ್ಮಾಣ ಸರ್ಕಾರದ ಪ್ರಮುಖ ಆದ್ಯತೆಯ ವಿಷಯಗಳಾಗಿರಲಿದೆ.
Advertisement