ಬಾಲಾಜಿ ಟೆಲಿ ಫಿಲ್ಮ್ಸ್ ನ ಮಾಜಿ ಸಿಒಒ, ಆತನ ಸ್ನೇಹಿತನ ಶವ ಕೀನ್ಯಾದಲ್ಲಿ ಪತ್ತೆ: ವರದಿ 

ಕೀನ್ಯಾದಲ್ಲಿ ಜುಲೈ ತಿಂಗಳ ಮಧ್ಯದ ದಿನಗಳಿಂದ ನಾಪತ್ತೆಯಾಗಿದ್ದ ಇಬ್ಬರು ಭಾರತೀಯ ಟೆಕ್ಕಿಗಳು ಹತ್ಯೆಗೀಡಾಗಿದ್ದಾರೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ.
ಬಾಲಾಜಿ ಟೆಲಿ ಫಿಲ್ಮ್ಸ್ ನ ಮಾಜಿ ಸಿಒಒ ಝುಲ್ಫೀಕರ್ ಖಾನ್
ಬಾಲಾಜಿ ಟೆಲಿ ಫಿಲ್ಮ್ಸ್ ನ ಮಾಜಿ ಸಿಒಒ ಝುಲ್ಫೀಕರ್ ಖಾನ್

ಕೀನ್ಯಾ: ಕೀನ್ಯಾದಲ್ಲಿ ಜುಲೈ ತಿಂಗಳ ಮಧ್ಯದ ದಿನಗಳಿಂದ ನಾಪತ್ತೆಯಾಗಿದ್ದ ಇಬ್ಬರು ಭಾರತೀಯ ಟೆಕ್ಕಿಗಳು ಹತ್ಯೆಗೀಡಾಗಿದ್ದಾರೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ.

ಅಧ್ಯಕ್ಷ ವಿಲ್ಲಿಯಮ್ ರುಟೋ ಅವರ ಆಪ್ತರ ಮಾಹಿತಿಯ ಪ್ರಕಾರ ಸರ್ಕಾರದ ವಿಶೇಷ ಪೊಲೀಸ್ ದಳದಿಂದ ಇಬ್ಬರು ಟೆಕ್ಕಿಗಳು ಹತ್ಯೆಗೀಡಾಗಿದ್ದಾರೆ. 

ಬಾಲಾಜಿ ಟೆಲಿಫಿಲ್ಮ್ಸ್ ನ ಮಾಜಿ ಸಿಒಒ ಝುಲ್ಫೀಕರ್ ಖಾನ್ ಹಾಗೂ ಮತ್ತೋರ್ವ ಭಾರತೀಯ ಮೊಹಮ್ಮದ್ ಝೈದ್ ಸಮಿ ಕಿದ್ವಾಯಿ ನೈರೋಬಿಯ ಜನಪ್ರಿಯ ಕ್ಲಬ್ ನಿಂದ ಹೋಗಿದ್ದವರು ಎರಡು ತಿಂಗಳ ಕಾಲ ನಾಪತ್ತೆಯಾಗಿದ್ದರು.

ಖಾನ್ ಹಾಗೂ ಕಿದ್ವಾಯಿ ಇಬ್ಬರೂ ಅಲ್ಲಿನ ಅಧ್ಯಕ್ಷ ವಿಲಿಯನ್ ರುಟೋ ಚುನಾವಣಾ ಅಭಿಯಾನ ಮಾಹಿತಿ ಮತ್ತು ಸಂವನ ವಿಭಾಗದಲ್ಲಿ ಕಾರ್ಯನಿರ್ವಹಿಸಲು ತೆರಳಿದ್ದರು.

ಕೀನ್ಯಾದ ಚುನಾವಣೆಯಲ್ಲಿ ವಿಲಿಯಮ್ ರುಟೋ ಅವರನ್ನು ಬೆಂಬಲಿಸಿದ್ದವರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡುತ್ತಿರುವ ಗುಂಪು ಒಂದಿದ್ದು, ಈ ಪೈಕಿ ಝೈದ್ ಕೂಡಾ ಬಲಿಯಾಗಿದ್ದಿರಬಹುದು ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಅಧ್ಯಕ್ಷರ ನಿಕಟವರ್ತಿಯೋರ್ವ ಪೋಸ್ಟ್ ಹಾಕಿದ್ದಾರೆ.

ಕೀನ್ಯಾದಲ್ಲಿ ಈ ಇಬ್ಬರನ್ನು ಅಪಹರಣ ಮಾಡಿ ಕರೆದೊಯ್ಯುತ್ತಿರುವ ವೀಡಿಯೋ ಲಭ್ಯವಾಗಿದ್ದು, ಈ ಆಧಾರದಲ್ಲಿ ಕೆಲವು ಅಧಿಕಾರಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ಹೊಸ ಪೊಲೀಸ್ ತಂಡಕ್ಕೆ ವರ್ಗಾಯಿಸುವಂತೆ ಸೂಚನೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com