ರಷ್ಯಾ ಡ್ರೋನ್ ಗಳನ್ನು ಹೊಡೆದುರುಳಿಸುವಲ್ಲಿ ಉಕ್ರೇನ್ ಯಶಸ್ವಿ; ವಿದ್ಯುತ್ ಸ್ಥಾವರಗಳ ದುರಸ್ತಿ

ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ ಡ್ರೋನ್ ಗಳನ್ನು ಉಕ್ರೇನ್ ಹೊಡೆದುರುಳಿಸುವಲ್ಲಿ ಯಶಸ್ಸು ಕಂಡಿದೆ. 
ಉಕ್ರೇನ್ ನಲ್ಲಿ ರಷ್ಯಾ ದಾಳಿ
ಉಕ್ರೇನ್ ನಲ್ಲಿ ರಷ್ಯಾ ದಾಳಿ

ಕೀವ್: ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ ಡ್ರೋನ್ ಗಳನ್ನು ಉಕ್ರೇನ್ ಹೊಡೆದುರುಳಿಸುವಲ್ಲಿ ಯಶಸ್ಸು ಕಂಡಿದೆ. 

ರಷ್ಯಾ ಬಳಸಿದ್ದ ಇರಾನಿಯನ್ ಡ್ರೋನ್ ಗಳನ್ನು ಹೊಡೆದುರುಳಿಸಿ ಸಾರ್ವಜನಿಕರಲ್ಲಿ ರಷ್ಯಾ ಬಗ್ಗೆ ಉಂಟಾಗಿದ್ದ ಭೀತಿಯನ್ನು ತೊಡೆದುಹಾಕಲು ಉಕ್ರೇನ್ ಯತ್ನಿಸುತ್ತಿದ್ದು, ಇದರಲ್ಲಿ ಯಶಸ್ಸು ಕಂಡಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

ರಷ್ಯಾ ಉಕ್ರೇನ್ ಮೇಲೆ ದಾಳಿಯನ್ನು ಪ್ರಾರಂಭಿಸಿ ಹತ್ತಿರ ಹತ್ತಿರ 9 ತಿಂಗಳಾಗಿದ್ದು, ರಷ್ಯಾ ನ್ಯೂಕ್ಲಿಯರ್ ಬಾಂಬ್ ಬೆದರಿಕೆ ಹಾಕಿರುವುದು ಆತಂಕವನ್ನುಂಟುಮಾಡಿದೆ. ಇನ್ನು ಈ ನಡುವೆ ಚಳಿಗಾಲ ಪ್ರಾರಂಭವಾಗಿದ್ದು, ಉಕ್ರೇನ್ ನ ಮೂಲಸೌಕರ್ಯಗಳ ಮೇಲೆ ರಷ್ಯಾ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಉಕ್ರೇನ್ ಮಂದಿ ಕಡಿಮೆ ವಿದ್ಯುತ್ ಬಳಕೆ ಮಾಡುವ ಅನಿವಾರ್ಯತೆ ಎದುರಾಗಲಿದೆ. ಈ ನಡುವೆ ವಿದ್ಯುತ್ ಸ್ಥಾವರಗಳ ದುರಸ್ತಿಯಾಗುತ್ತಿದೆ. ಶನಿವಾರದಿಂದ ರಷ್ಯಾ ದಾಳಿ ನಡೆಸಿದ್ದ ಡ್ರೋನ್ ಗಳ ಪೈಕಿ ಮೂರನೇ ಎರಡರಷ್ಟು ಡ್ರೋನ್ ಗಳನ್ನು ಉಕ್ರೇನ್ ಹೊಡೆದುಹಾಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com