ಪೋಲ್ಯಾಂಡ್ ನಲ್ಲಿ ಭಾರತೀಯ ವ್ಯಕ್ತಿಗೆ ಜನಾಂಗೀಯ ನಿಂದನೆ; "ಪರಾವಲಂಬಿ ವಾಪಸ್ ತೆರಳು" ಘೋಷಣೆ

ಪೋಲ್ಯಾಂಡ್ ನಲ್ಲಿ ಭಾರತೀಯ ವ್ಯಕ್ತಿಯೊಬ್ಬರು ಜನಾಂಗೀಯ ನಿಂದನೆ ಎದುರಿಸಿದ್ದು, ಪರಾವಲಂಬಿ ವಾಪಸ್ ತೆರಳು ಎಂಬ ಘೋಷಣೆಗಳನ್ನು ಅಲ್ಲಿನ ಜನರು ಕೂಗಿದ್ದಾರೆ. 
ಜನಾಂಗೀಯ ನಿಂದನೆಗೊಳಗಾದ ವ್ಯಕ್ತಿ
ಜನಾಂಗೀಯ ನಿಂದನೆಗೊಳಗಾದ ವ್ಯಕ್ತಿ

ಲಂಡನ್: ಪೋಲ್ಯಾಂಡ್ ನಲ್ಲಿ ಭಾರತೀಯ ವ್ಯಕ್ತಿಯೊಬ್ಬರು ಜನಾಂಗೀಯ ನಿಂದನೆ ಎದುರಿಸಿದ್ದು, ಪರಾವಲಂಬಿ ವಾಪಸ್ ತೆರಳು ಎಂಬ ಘೋಷಣೆಗಳನ್ನು ಅಲ್ಲಿನ ಜನರು ಕೂಗಿದ್ದಾರೆ. 

ಅಮೇರಿಕಾದ ವ್ಯಕ್ತಿಯಿಂದ ಈ ನಿಂದನೆ ಬಂದಿದ್ದು, ನೀನು ಪರಾವಲಂಬಿ ಜೀವಿ, ಆಕ್ರಮಣಕಾರ ನಿಮ್ಮ ದೇಶಕ್ಕೆ ವಾಪಸ್ ತೆರಳು ಎಂದು ಹೇಳಿದ್ದಾರೆ.

ನಿಂದನೆಗೊಳಗಾದ ಭಾರತೀಯ ವ್ಯಕ್ತಿಯ ಗುರುತು ಇನ್ನೂ ದೃಢಪಟ್ಟಿಲ್ಲ, ಆದರೆ ಆತನನ್ನು ನಿಂದಿಸುತ್ತಿರುವ ವಿಡಿಯೋ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. ಯಾವ ನಗರದಲ್ಲಿ ಈ ದೃಶ್ಯ ಚಿತ್ರೀಕರಣವಾಗಿದೆ ಎಂಬುದೂ ಇನ್ನಷ್ಟೇ ಬಹಿರಂಗವಾಗಬೇಕಿದೆ. 

ಸಾಮಾಜಿಕ ಜಾಲತಾಣ ಟ್ವಿಟರ್ ಬಳಕೆದಾರರು ವಾರ್ಸಾ ಪೊಲೀಸರನ್ನು ಟ್ಯಾಗ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ. ಮಾಲ್ ಬಳಿ ನಡೆಯುತ್ತಿದ್ದ ವ್ಯಕ್ತಿಯನ್ನು ನಿಲ್ಲಿಸಿ, ಆತ ಏಕೆ ಯುರೋಪ್ ನಲ್ಲಿದ್ದಾನೆ ಎಂದು ಅಮೇರಿಕನ್ ಓರ್ವ ಪ್ರಶ್ನಿಸಿದ್ದಾನೆ. ನಾನು ಅಮೇರಿಕದವನು, ಅಮೇರಿಕಾದಲ್ಲಿ ನಿಮ್ಮವರು ಸಾಕಷ್ಟು ಮಂದಿ ಇದ್ದಾರೆ. ಈಗ ಪೋಲ್ಯಾಂಡ್ ಗೆ ಏಕೆ ನೀನು ಬಂದಿರುವೆ? ಇಲ್ಲೇಕೆ ಇರುವೆ? ಪೋಲ್ಯಾಂಡ್ ನ್ನು ನೀನು ಆಕ್ರಮಿಸಿಕೊಳ್ಳಬಹುದೆಂದು ಭಾವಿಸಿದ್ದೀಯ? ಎಂದು ಕ್ಯಾಮರಾದ ಹಿಂದಿದ್ದ ವ್ಯಕ್ತಿ ಭಾರತೀಯ ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೂ ಮುನ್ನ ಭಾರತೀಯ ಮೂಲದ ಅಮೇರಿಕನ್ ಮಹಿಳೆಯೊಬ್ಬರು ಜನಾಂಗೀಯ ನಿಂದನೆಗೆ ಗುರಿಯಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com