ಮ್ಯಾನ್ಮಾರ್-ಥೈಲ್ಯಾಂಡ್ ಗಡಿಯಲ್ಲಿ ಬಂಡುಕೋರರ ವಶದಲ್ಲಿ 150 ಭಾರತೀಯ ಟೆಕ್ಕಿಗಳು!

ಮ್ಯಾನ್ಮಾರ್ ನ ಮಿಲಿಟರಿ ವಿರುದ್ಧ ಹೋರಾಡುತ್ತಿರುವ ಭಾರೀ ಶಸ್ತ್ರಸಜ್ಜಿತ ಕರೇನ್ ನ್ಯಾಷನಲ್ ಲಿಬರೇಶನ್ ಆರ್ಮಿ(ಕೆಎನ್‌ಎಲ್‌ಎ) ಮ್ಯಾನ್ಮಾರ್-ಥೈಲ್ಯಾಂಡ್ ಗಡಿಯಲ್ಲಿ ಕನಿಷ್ಠ 150 ಭಾರತೀಯ ಐಟಿ ವೃತ್ತಿಪರರನ್ನು ವಶಕ್ಕೆ ಪಡೆದಿರುವ ಮಲೇಶಿಯನ್-ಚೀನೀ ಗ್ಯಾಂಗ್‌ಗೆ ರಕ್ಷಣೆ ಒದಗಿಸುತ್ತಿದೆ ಎಂದು ಶಂಕಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಮ್ಯಾನ್ಮಾರ್ ನ ಮಿಲಿಟರಿ ವಿರುದ್ಧ ಹೋರಾಡುತ್ತಿರುವ ಭಾರೀ ಶಸ್ತ್ರಸಜ್ಜಿತ ಕರೇನ್ ನ್ಯಾಷನಲ್ ಲಿಬರೇಶನ್ ಆರ್ಮಿ(ಕೆಎನ್‌ಎಲ್‌ಎ) ಮ್ಯಾನ್ಮಾರ್-ಥೈಲ್ಯಾಂಡ್ ಗಡಿಯಲ್ಲಿ ಕನಿಷ್ಠ 150 ಭಾರತೀಯ ಐಟಿ ವೃತ್ತಿಪರರನ್ನು ವಶಕ್ಕೆ ಪಡೆದಿರುವ ಮಲೇಶಿಯನ್-ಚೀನೀ ಗ್ಯಾಂಗ್‌ಗೆ ರಕ್ಷಣೆ ಒದಗಿಸುತ್ತಿದೆ ಎಂದು ಶಂಕಿಸಲಾಗಿದೆ.

ಕೆಎನ್‌ಎಲ್‌ಎ ನಿಯಂತ್ರಣದಲ್ಲಿರುವ ಮ್ಯಾನ್ಮಾರ್‌ನ ಕ್ಯಾರೆನ್ ರಾಜ್ಯದಲ್ಲಿನ ಮೈವಾಡ್ಡಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ದಂಗೆಕೋರ ಗುಂಪು ಮತ್ತು ಮ್ಯಾನ್ಮಾರ್ ಸೇನೆಯ ಸಶಸ್ತ್ರ ಕಾರ್ಯಕರ್ತರ ನಡುವೆ ಆಗಾಗ್ಗೆ ಗುಂಡಿನ ಕಾಳಗಗಳು ನಡೆದಿವೆ ಎಂದು ಭಾರತೀಯ ಭದ್ರತಾ ಏಜೆನ್ಸಿಗಳ ಮೂಲಗಳು ಬಹಿರಂಗಪಡಿಸಿವೆ. ಕೆಎನ್‌ಎಲ್‌ಎ ಮತ್ತು ಮತ್ತೊಂದು ದಂಗೆಕೋರರ ಗುಂಪಾದ ಅರಕನ್ ಆರ್ಮಿ ಸಾಂಪ್ರದಾಯಿಕವಾಗಿ ಚೀನಾದಿಂದ ಭಾರೀ ಶಸ್ತ್ರಾಸ್ತ್ರಗಳನ್ನು ತರಲು ಮೈವಾಡ್ಡಿ ಮಾರ್ಗವನ್ನು ಬಳಸುತ್ತಿವೆ.

ಇನ್ನು ಉದ್ಯೋಗ ಹರಸಿ ಹೋಗಿದ್ದ ತಮಿಳುನಾಡು ಮತ್ತು ಕೇರಳದ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಹೆಚ್ಚಾಗಿ ಸಿಕ್ಕಿಬಿದ್ದಿದ್ದಾರೆ. ದುಬೈ ಮೂಲದ ಚೀನೀ ಪ್ರಜೆಗಳಿಂದ ನಿರ್ವಹಿಸಲ್ಪಡುತ್ತಿರುವ ನಾಲ್ಕು ಕಂಪನಿಗಳು ಭಾರತೀಯ ವೃತ್ತಿಪರರನ್ನು ಕ್ರಿಪ್ಟೋ-ಕರೆನ್ಸಿ ಮತ್ತು ಸೈಬರ್ ವಂಚನೆಯಲ್ಲಿ ತೊಡಗಿಸಿದೆ ಎಂಬ ಸುದ್ದಿ ಜುಲೈನಲ್ಲಿ ಬೆಳಕಿಗೆ ಬಂದಿದ್ದು ನಂತರ ಅಂತಹ 32 ಭಾರತೀಯರನ್ನು ರಕ್ಷಿಸಲಾಗಿತ್ತು. ಅಲ್ಲದೆ ಇತರರು ತಮ್ಮನ್ನು ಮುಕ್ತಗೊಳಿಸಲು ಹಣ ಪಾವತಿಸಿದ್ದಾರೆ ಎಂದು ಹೇಳಲಾಗುತ್ತದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಟೆಕ್ಕಿಗಳನ್ನು ರಕ್ಷಿಸಲು ಸಹಾಯ ಮಾಡಲು ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಲು ಪ್ರಯತ್ನಿಸುತ್ತಿದೆ. ಆದರೆ ಮೈವಡ್ಡಿಯ ನಿಖರವಾದ ಆನ್-ದಿ-ಗ್ರೌಂಡ್ ಮಾಹಿತಿಯ ಕೊರತೆಯಿಂದ ಇನ್ನೂ ಸಿಲುಕಿರುವ ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ಬಿಡುಗಡೆ ಮಾಡಲು ಅಧಿಕಾರಿಗಳ ಪ್ರಯತ್ನಗಳನ್ನು ವಿಳಂಬಗೊಳಿಸುತ್ತಿದೆ. 

ಕೆಎನ್‌ಎಲ್‌ಎ ನಿಯಂತ್ರಣದಲ್ಲಿರುವ ಜಿಲ್ಲೆಯಲ್ಲಿ ಭಾರತೀಯ ಅಧಿಕಾರಿಗಳು ಥೈಲ್ಯಾಂಡ್-ಮ್ಯಾನ್ಮಾರ್ ಗಡಿಯ ಸಮೀಪ ಎಲ್ಲಿಯೂ ತಲುಪದಂತೆ ತಡೆಯುತ್ತದೆ. ಸೆಪ್ಟೆಂಬರ್ 20ರಂದು ನಡೆದ ಜಂಟಿ ಕಾರ್ಯಾಚರಣೆಯಲ್ಲಿ, KNLA ಮತ್ತು ಅದರ ರಾಜಕೀಯ ವಿಭಾಗವಾದ ಕರೆನ್ ನ್ಯಾಷನಲ್ ಯೂನಿಯನ್(KNU), ಮತ್ತೊಂದು ಸಶಸ್ತ್ರ ಸಂಘಟನೆಯೊಂದಿಗೆ, ಮೈವಾಡ್ಡಿಗೆ ಹೊಂದಿಕೊಂಡಿರುವ ಕಾವ್ಕಾನಿಕ್ ಜಿಲ್ಲೆಯ ಕೈಕ್ ಗ್ರಾಮದಲ್ಲಿನ ಮಿಲಿಟರಿ ನೆಲೆಯನ್ನು ವಶಪಡಿಸಿಕೊಂಡಿತ್ತು. ಇನ್ನು ಆಗಸ್ಟ್‌ನಲ್ಲಿ ನಡೆದ ಎರಡನೇ ದಾಳಿಯಲ್ಲಿ 13 ಪೊಲೀಸರನ್ನು ಹತ್ಯೆ ಮಾಡಲಾಗಿತ್ತು.

ಕಳೆದ ಏಪ್ರಿಲ್‌ನಲ್ಲಿ ಕ್ಷಿಪಣಿಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿರುವ ಆರೋಪದ ಮೇಲೆ ಯುನೈಟೆಡ್ ಸ್ಟೇಟ್ಸ್ ಡ್ರಗ್ ಎನ್‌ಫೋರ್ಸ್‌ಮೆಂಟ್ ಏಜೆನ್ಸಿಯು ಕೆಎನ್‌ಎಲ್‌ಎ, ಮ್ಯಾನ್ಮಾರ್ ಶಾನ್ ಸ್ಟೇಟ್ ಆರ್ಮಿ(ದಕ್ಷಿಣ) ಮತ್ತು ಯುನೈಟೆಡ್ ವಾ ಸ್ಟೇಟ್ ಆರ್ಮಿಯ ನಾಲ್ವರು ಪ್ರತಿನಿಧಿಗಳನ್ನು ಬಂಧಿಸಿತು.

ನಾಗಾಲ್ಯಾಂಡ್ ಮತ್ತು ಮಿಜೋರಾಂ ಗಡಿಯಲ್ಲಿರುವ ಮ್ಯಾನ್ಮಾರ್‌ನ ಸಾಗಯಿಂಗ್ ವಿಭಾಗದಿಂದ ಈಶಾನ್ಯ ದಂಗೆಕೋರ ಗುಂಪುಗಳಿಗೆ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com