ಶಿಂಜೋ ಅಬೆ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ ಭಾಗಿ, ಆತ್ಮೀಯ ಸ್ನೇಹಿತನಿಗೆ ಭಾವಪೂರ್ಣ ಶ್ರದ್ಧಾಂಜಲಿ

ಜಪಾನ್ ಮಾಜಿ ಪ್ರಧಾನಿ ಶಿಂಬೋ ಅಬೆ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಪಾಲ್ಗೊಂಡರು. ಅಬೆ ಅವರ ಚಿತಾಭಸ್ಮವನ್ನು ಚಿನ್ನದ ಪಟ್ಟೆಗಳೊಂದಿಗೆ ನೇರಳ ಬಣ್ಣದ ಬಟ್ಟೆಯಿಂದ ಸುತ್ತಿಡಲಾಗಿದ್ದ ಮರದ ಪೆಟ್ಟಿಗೆಯಲ್ಲಿ ಇಡಲಾಗಿತ್ತು. ಇದನ್ನು ಬುಡೋಕನ್ ಸಭಾಂಗಣಕ್ಕೆ ತರಲಾಯಿತು.
ಶಿಂಜೋ ಅಬೆ ಸರ್ಕಾರಿ ಅಂತ್ಯಕ್ರಿಯೆ
ಶಿಂಜೋ ಅಬೆ ಸರ್ಕಾರಿ ಅಂತ್ಯಕ್ರಿಯೆ
Updated on

ಟೋಕಿಯೊ: ಜಪಾನ್ ಮಾಜಿ ಪ್ರಧಾನಿ ಶಿಂಬೋ ಅಬೆ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಪಾಲ್ಗೊಂಡರು. ಅಬೆ ಅವರ ಚಿತಾಭಸ್ಮವನ್ನು ಚಿನ್ನದ ಪಟ್ಟೆಗಳೊಂದಿಗೆ ನೇರಳ ಬಣ್ಣದ ಬಟ್ಟೆಯಿಂದ ಸುತ್ತಿಡಲಾಗಿದ್ದ ಮರದ ಪೆಟ್ಟಿಗೆಯಲ್ಲಿ ಇಡಲಾಗಿತ್ತು. ಇದನ್ನು ಬುಡೋಕನ್ ಸಭಾಂಗಣಕ್ಕೆ ತರಲಾಯಿತು.

ಚಿತಾಭಸ್ಮದ ಹಿಂದೆ ಕಪ್ಪು ವಸ್ತ್ರ ಧರಿಸಿದ ಅಬೆಯ ಪತ್ನಿ ಅಕಿ ಅಬೆ ನಿಧಾನವಾಗಿ ಹೆಜ್ಜೆ ಹಾಕಿದರು. ಬಿಳಿ ಸಮವಸ್ತ್ರದಲ್ಲಿದ್ದ ರಕ್ಷಣಾ ಸೈನಿಕರು ಅಬೆಯ ಚಿತಾಭಸ್ಮ ತೆಗೆದುಕೊಂಡು ಅದಕ್ಕೆ ಬಿಳಿ ಮತ್ತು ಹಳದಿ ಹೂವುಗಳಿಂದ ಅಲಂಕರಿಸಿ ಪೀಠದ ಮೇಲೆ ಇರಿಸಿದರು. 

ಅಕಿ ಅಬೆ ನಂತರ ಪ್ರಧಾನಿ ಫ್ಯೂಮಿಯೊ ಕಿಷಿದಾ ಸೇರಿದಂತೆ, ಸರ್ಕಾರಿ, ಪಾರ್ಲಿಮೆಂಟರಿ ಮತ್ತು ನ್ಯಾಯಾಂಗದ ಪ್ರತಿನಿಧಿಗಳು ಸಂತಾಪ ಸೂಚಕ ಮಾತುಗಳನ್ನಾಡುತ್ತಿದ್ದಾರೆ. ಪಶ್ಚಿಮ ಜಪಾನಿನ ನಾರಾ ನಗರದ ಸ್ಟ್ರೀಟ್ ವೊಂದರಲ್ಲಿ ಭಾಷಣ ಮಾಡುವಾಗ ಅಬೆ ಹತ್ಯೆಯಾದ ನಂತರ ದೇವಾಲಯವೊಂದರಲ್ಲಿ ಖಾಸಗಿ ಅಂತ್ಯಕ್ರಿಯೆ ನಂತರ ಜುಲೈನಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಿತ್ತು.

ಪ್ರೀತಿಯ ಸ್ನೇಹಿತ ಅಬೆ ಅವರನ್ನು ಕಳೆದುಕೊಂಡು ತನಗೆ ವೈಯಕ್ತಿಕವಾಗಿ ಭರಿಸಲಾಗದ ನಷ್ಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಕಳೆದ ಬಾರಿ ಟೋಕಿಯೋಗೆ ಬಂದಿದ್ದಾಗ ಶಿಂಜೋ ಅಬೆ ಅವರೊಂದಿಗೆ ಧೀರ್ಘ ಹೊತ್ತು ಮಾತನಾಡಿದ್ದೆ. ಅಬೆ ಅವರನ್ನು ಭಾರತ ಕಳೆದುಕೊಂಡಿದ್ದು, ಅವರನ್ನು ಮತ್ತು ಜಪಾನ್ ನನ್ನು ನೆನಪಿಸಿಕೊಳ್ಳುತ್ತದೆ ಎಂದು ಜಪಾನ್ ಪ್ರಧಾನಿ ಪ್ಯೂಮಿಯೊ ಕಿಷಿದಾ ಜೊತೆಗಿನ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳಿದರು. 

ಜಪಾನ್ ಮತ್ತು ಭಾರತದ ಸಂಬಂಧವನ್ನು ಅಬೆ ಉನ್ನತ ಮಟ್ಟಕ್ಕೆ ಕೊಂಡೊಯ್ಯುದ್ದಿದ್ದರು ಮತ್ತು ಅದನ್ನು ಅನೇಕ ಇತರ ಪ್ರದೇಶಗಳಿಗೂ ವಿಸ್ತರಿಸಿದ್ದರು. ಜಾಗತಿಕ ದೃಷ್ಟಿಕೋನದ ಬೆಳವಣಿಗೆಯಲ್ಲಿ ನಮ್ಮ ಸ್ನೇಹವು ಪ್ರಮುಖ ಪಾತ್ರ ವಹಿಸಿದೆ. ಅವರು ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳಿಗಾಗಿ ಭಾರತದ ಜನರು ಅಬೆ ಸಾನ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ಅವರು ಅಬೆ ಸಾನ್‌ನನ್ನು ಕಳೆದುಕೊಂಡಿದ್ದಾರೆ. ಆದರೆ, ನಿಮ್ಮ ನಾಯಕತ್ವದಲ್ಲಿ ಭಾರತ-ಜಪಾನ್ ಸಂಬಂಧಗಳು ಬಲವಾಗಿ ಬೆಳೆಯುತ್ತವೆ ಮತ್ತು ಹೊಸ ಎತ್ತರವನ್ನು ಪಡೆಯುತ್ತವೆ ಮತ್ತು ವಿಶ್ವದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಾನು ನಂಬುತ್ತೇನೆ ಎಂದು ಭಾರತದ ಪ್ರಧಾನಿ ಹೇಳಿದರು. ಅಬೆ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಮೋದಿ ಪಾಲ್ಗೊಂಡಿದ್ದಕ್ಕೆ ಜಪಾನ್ ಪ್ರಧಾನಿ ಕಿಷಿದಾ ಧ್ಯನ್ಯವಾದ ಸಲ್ಲಿಸಿದರು. 

ಅಬೆ ಸರ್ಕಾರಿ ಅಂತ್ಯಕ್ರಿಯೆ ಹಿನ್ನಲೆಯಲ್ಲಿ ಅನೇಕ ವಿದೇಶಿ ಗಣ್ಯರು ನಗರಕ್ಕೆ ಆಗಮಿಸಿರುವುದರಿಂದ ಟೋಕಿಯೋ ನಗರದಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com