ಟ್ವೀಟರ್ ಜೊತೆ ತಿಕ್ಕಾಟ: 7 ಬಿಲಿಯನ್ ಡಾಲರ್ ಮೌಲ್ಯದ ಟೆಸ್ಲಾ ಷೇರು ಮಾರಿದ ಎಲಾನ್ ಮಸ್ಕ್

44 ಬಿಲಿಯನ್ ಡಾಲರ್ ಗೆ ಟ್ವೀಟರ್ ಖರೀದಿ ಪ್ರಕ್ರಿಯೆ ರದ್ದು ಮಾಡಿದ ಬಳಿಕ ಇದೀಗ ಕಾನೂನು ಸಮರದಲ್ಲಿ ಸಿಕ್ಕಿಬಿದ್ದಿರುವ ಬಿಲಿಯನೇರ್, ಟೆಸ್ಲಾ ಸಿಇಒ ಎಲಾನ್ ಮಸ್ಕ್ 7 ಬಿಲಿಯನ್ ಡಾಲರ್ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಎಲಾನ್ ಮಸ್ಕ್
ಎಲಾನ್ ಮಸ್ಕ್

ವಾಷಿಂಗ್ಟನ್: 44 ಬಿಲಿಯನ್ ಡಾಲರ್ ಗೆ ಟ್ವೀಟರ್ ಖರೀದಿ ಪ್ರಕ್ರಿಯೆ ರದ್ದು ಮಾಡಿದ ಬಳಿಕ ಇದೀಗ ಕಾನೂನು ಸಮರದಲ್ಲಿ ಸಿಕ್ಕಿಬಿದ್ದಿರುವ ಬಿಲಿಯನೇರ್, ಟೆಸ್ಲಾ ಸಿಇಒ ಎಲಾನ್ ಮಸ್ಕ್ 7 ಬಿಲಿಯನ್ ಡಾಲರ್ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್‌ನ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಫೈಲಿಂಗ್‌ಗಳ ಪ್ರಕಾರ, ಆಗಸ್ಟ್ 5ರಿಂದ 9ರ ನಡುವೆ ಟೆಸ್ಲಾ ಮಾಲೀಕ ಬರೋಬ್ಬರಿ 7.9 ಮಿಲಿಯನ್ ಷೇರುಗಳನ್ನು ಮಾರಾಟ ಮಾಡಿದ್ದಾರೆ. 

ಟ್ವೀಟರ್ ಜೊತೆಗಿನ ತಿಕ್ಕಾಟದ ಬಳಿಕ ಕಳೆದ ಎಪ್ರಿಲ್ ನಲ್ಲಿ ಸಂಸ್ಥೆಯನ್ನು ಖರೀದಿಸುವ ಪ್ರಕ್ರಿಯೆಯಿಂದ ಎಲಾನ್ ಮಸ್ಕ್ ಹಿಂದೆ ಸರಿದಿದ್ದರು. ಹೀಗಾಗಿ ಟ್ವೀಟರ್ ಮಸ್ಕ್ ವಿರುದ್ಧ ಕಾನೂನು ಸಮರ ಸಾರಿತ್ತು. ಪ್ರಕರಣ ವಿಚಾರಣೆ ಅಕ್ಟೋಬರ್ ನಲ್ಲಿ ನಡೆಯಲಿದೆ. 

ಮಸ್ಕ್ ಸಹ ಟ್ವೀಟರ್ ವಿರುದ್ಧ ಕಾನೂನು ಸಮರ ಸಾರಿದ್ದು ಖರೀದಿ ಪ್ರಕ್ರಿಯೆಗೂ ಮುನ್ನ ಟ್ವೀಟರ್ ವ್ಯವಹಾರ ಕುರಿತಂತೆ ತನ್ನನ್ನು ದಾರಿ ತಪ್ಪಿಸಿತ್ತು ಎಂದು ದೂರಿದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com