ರಶ್ದಿ ದಾಳಿಕೋರನಿಗೆ ಜಾಮೀನು ನಿರಾಕರಣೆ: ಸಂದರ್ಶನಕ್ಕೂ ನಿರ್ಬಂಧ

ಪಶ್ಚಿಮ ನ್ಯೂಯಾರ್ಕ್ ನಲ್ಲಿ ಉಪನ್ಯಾಸ ಮಾಡುತ್ತಿರುವಾಗ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ದಾಳಿ ನಡೆಸಿದ ವ್ಯಕ್ತಿಗೆ ನ್ಯಾಯಾಧೀಶರು ಜಾಮೀನು ನಿರಾಕರಿಸಿದ್ದಾರೆ. 
ಲೇಖಕ ಸಲ್ಮಾನ್ ರಶ್ದಿ
ಲೇಖಕ ಸಲ್ಮಾನ್ ರಶ್ದಿ

ಮೇವಿಲ್ಲೆ: ಪಶ್ಚಿಮ ನ್ಯೂಯಾರ್ಕ್ ನಲ್ಲಿ ಉಪನ್ಯಾಸ ಮಾಡುತ್ತಿರುವಾಗ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ದಾಳಿ ನಡೆಸಿದ ವ್ಯಕ್ತಿಗೆ ನ್ಯಾಯಾಧೀಶರು ಜಾಮೀನು ನಿರಾಕರಿಸಿದ್ದಾರೆ. 

ಹಾದಿ ಮತರ್ ಎಂಬ 24 ವರ್ಷದ ಯುವಕ ರಶ್ದಿ ಮೇಲೆ ದಾಳಿ ನಡೆಸಿದ ಯುವಕನಾಗಿದ್ದು, ಆತನ ಪರ ವಕೀಲರು ಇಂದು ಕೋರ್ಟ್ ನಲ್ಲಿ ಜಾಮೀನು ಮಂಜೂರು ಮಾಡಲು ಮನವಿ ಮಾಡಿ ವಾದ ಮಂಡಿಸಿದರು. 

ಪಬ್ಲಿಕ್ ಡಿಫೆಂಡರ್ ನಥಾನಿಯಲ್ ಬರೋನ್, ಮಾತರ್ ವಿರುದ್ಧ ಕ್ರಿಮಿನಲ್ ಇತಿಹಾಸವಿಲ್ಲ ಹಾಗೂ ಬಿಡುಗಡೆ ಮಾಡಿದಲ್ಲಿ ಆತ ದೇಶ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದರು. ಅಷ್ಟೇ ಅಲ್ಲದೇ ಆತನನ್ನು ಇರಿಸಲಾಗಿರುವ ಚೌಟಕ್ವಾ ಕೌಂಟಿ ಜೈಲಿನಲ್ಲಿ ಮಾತರ್ ನ್ನು ಭೇಟಿ ಮಾಡುವುದಕ್ಕೆ ಪತ್ರಕರ್ತರಿಗೆ ಅವಕಾಶ ನೀಡದೆ ಇರುವುದಕ್ಕೆ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಲಾಯಿತು.
 
ಮಾತರ್ ನ್ನು ಸಂಪರ್ಕಿಸುವುದಕ್ಕಾಗಿ ಹಲವು ನೂರು ಕರೆಗಳು ಜೈಲಿಗೆ ಬಂದಿತ್ತು ಎಂದು ವಕೀಲರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com