ವ್ಯಕ್ತಿ ತಲೆಗೆ ಗುಂಡು: ಆಫ್ಘಾನ್ ವಶಪಡಿಸಿಕೊಂಡ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಮರಣದಂಡನೆ ಜಾರಿಗೊಳಿಸಿದ ತಾಲಿಬಾನ್!

ಆಫ್ಘಾನ್ ವಶಪಡಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ತಾಲಿಬಾನ್ ಆಡಳಿತ ಸಾರ್ವಜನಿಕ ಮರಣದಂಡನೆ ಜಾರಿಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಆಫ್ಘಾನ್ ವಶಪಡಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ತಾಲಿಬಾನ್ ಆಡಳಿತ ಸಾರ್ವಜನಿಕ ಮರಣದಂಡನೆ ಜಾರಿಗೊಳಿಸಿದೆ. 

ವ್ಯಕ್ತಿಯೊಬ್ಬನನ್ನು ಕೊಂದ ಆರೋಪದ ಮೇಲೆ ಅಪರಾಧಿಯನ್ನು ಗಲ್ಲಿಗೇರಿಸಲಾಗಿದೆ ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ. ಕಳೆದ ವರ್ಷ ತಾಲಿಬಾನ್ ಬಂಡುಕೋರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಮೊದಲ ಸಾರ್ವಜನಿಕ ಮರಣದಂಡನೆಯಾಗಿದೆ. ಆಗಸ್ಟ್ 2021ರಲ್ಲಿ ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ ಅಫ್ಘಾನಿಸ್ತಾನದ ಹೊಸ ಆಡಳಿತ ಜಾರಿಗೊಳಿಸಿದ ಕಠಿಣ ನೀತಿಗಳನ್ನು ಮುಂದುವರಿಸಲು ಮತ್ತು ಇಸ್ಲಾಮಿಕ್ ಕಾನೂನು ಅಥವಾ ಷರಿಯಾದ ತಮ್ಮದೇ ಆದ ವ್ಯಾಖ್ಯಾನಕ್ಕೆ ಅಂಟಿಕೊಳ್ಳುವ ಉದ್ದೇಶಗಳನ್ನು ಘೋಷಣೆ ವಿವರಿಸಿದೆ.

ತಾಲಿಬಾನ್ ಸರ್ಕಾರದ ಉನ್ನತ ವಕ್ತಾರ ಜಬಿಹುಲ್ಲಾ ಮುಜಾಹಿದ್ ಪ್ರಕಾರ, ರಾಜಧಾನಿ ಮತ್ತು ಕಾಬೂಲ್ ಪ್ರಾಂತ್ಯ ಸೇರಿದಂತೆ ನೂರಾರು ಜನರು ಮತ್ತು ಹಲವಾರು ಉನ್ನತ ತಾಲಿಬಾನ್ ಅಧಿಕಾರಿಗಳ ಸಮ್ಮುಖದಲ್ಲಿ ಪಶ್ಚಿಮ ಫರಾಹ್ ಪ್ರಾಂತ್ಯದಲ್ಲಿ ಮರಣದಂಡನೆ ನಡೆಯಿತು. ದೇಶದ ಮೂರು ಅತ್ಯುನ್ನತ ನ್ಯಾಯಾಲಯಗಳು ಮತ್ತು ತಾಲಿಬಾನ್‌ನ ಸರ್ವೋಚ್ಚ ನಾಯಕ ಮುಲ್ಲಾ ಹೈಬತುಲ್ಲಾ ಅಖುಂಡ್‌ಜಾದಾ ಅವರ ಅನುಮೋದನೆಯ ನಂತರ, ಶಿಕ್ಷೆಯ ನಿರ್ಧಾರವನ್ನು "ಬಹಳ ಎಚ್ಚರಿಕೆಯಿಂದ ಮಾಡಲಾಗಿದೆ" ಎಂದು ಮುಜಾಹಿದ್ ಹೇಳಿದರು. ಐದು ವರ್ಷಗಳ ಹಿಂದೆ ವ್ಯಕ್ತಿಯೋರ್ವನನ್ನು ಕೊಂದು ಆತನ ಮೋಟಾರ್‌ಸೈಕಲ್ ಮತ್ತು ಮೊಬೈಲ್ ಫೋನ್ ಕದ್ದಿದ್ದಕ್ಕಾಗಿ ಹೆರಾತ್ ಪ್ರಾಂತ್ಯದ ತಜ್ಮೀರ್ ಎಂಬಾತನನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ.

ಮೃತನನ್ನು ಫರಾಹ್ ಪ್ರಾಂತ್ಯದ ನಿವಾಸಿ ಮುಸ್ತಫಾ ಎಂದು ಗುರುತಿಸಲಾಗಿದೆ. ಮೃತನ ಕುಟುಂಬದ ಆರೋಪದ ನಂತರ ತಾಲಿಬಾನ್ ಭದ್ರತಾ ಪಡೆಗಳು ತಜ್ಮೀರ್ ನನ್ನು ಬಂಧಿಸಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಯಾವಾಗ ಬಂಧಿಸಲಾಗಿತ್ತು ಎಂದು ತಿಳಿಸಿಲ್ಲ. ಆದರೆ ತಜ್ಮೀರ್ ಕೊಲೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದನು. ಹೀಗಾಗಿ ತಜ್ಮೀರ್‌ಗೆ ಮೃತ ಮುಸ್ತಫಾ ತಂದೆ ರೈಫಲ್‌ನಿಂದ ಮೂರು ಬಾರಿ ಗುಂಡು ಹಾರಿಸಿದರು ಎಂದು ಮುಜಾಹಿದ್ ಹೇಳಿದ್ದಾರೆ.

1990ರ ದಶಕದ ಉತ್ತರಾರ್ಧದಲ್ಲಿ ದೇಶದ ಹಿಂದಿನ ತಾಲಿಬಾನ್ ಆಳ್ವಿಕೆಯಲ್ಲಿ ತಾಲಿಬಾನ್ ನ್ಯಾಯಾಲಯಗಳಲ್ಲಿ ಅಪರಾಧಗಳಿಗೆ ಶಿಕ್ಷೆಗೊಳಗಾದವರಿಗೆ ಸಾರ್ವಜನಿಕ ಮರಣದಂಡನೆ, ಥಳಿಸುವಿಕೆ ಮತ್ತು ಕಲ್ಲೆಟ್ಟು ನಡೆಸಿತು. 20 ವರ್ಷಗಳ ಯುದ್ಧದ ನಂತರ ಅಮೆರಿಕಾ ಮತ್ತು ನ್ಯಾಟೋ ಪಡೆಗಳು ದೇಶದಿಂದ ಹಿಂದೆ ಸರಿದ ನಂತರ 2021ರಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com