ಲಂಕಾದಲ್ಲಿ ತೀವ್ರಗೊಂಡ ಪ್ರತಿಭಟನೆ: ಪ್ರಧಾನಿ ರನೀಲ್ ವಿಕ್ರಮ ಸಿಂಘೆ ಮನೆಗೆ ಬೆಂಕಿ!

ಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಜನ ದಂಗೆ ಎದ್ದಿದ್ದು, ಉದ್ರಿಕ್ತ ಗುಂಪು ಲಂಕಾದ ಪ್ರಧಾನಿ ರನೀಲ್ ವಿಕ್ರಮ ಸಿಂಘೆ ಮನೆಗೆ ಬೆಂಕಿ ಹಚ್ಚಿದ್ದಾರೆ. 
ಶ್ರೀಲಂಕಾ ಪ್ರಧಾನಿ ರನೀಲ್ ವಿಕ್ರಮ ಸಿಂಘೆ
ಶ್ರೀಲಂಕಾ ಪ್ರಧಾನಿ ರನೀಲ್ ವಿಕ್ರಮ ಸಿಂಘೆ

ಕೊಲಂಬೋ: ಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಜನ ದಂಗೆ ಎದ್ದಿದ್ದು, ಉದ್ರಿಕ್ತ ಗುಂಪು ಲಂಕಾದ ಪ್ರಧಾನಿ ರನೀಲ್ ವಿಕ್ರಮ ಸಿಂಘೆ ಮನೆಗೆ ಬೆಂಕಿ ಹಚ್ಚಿದ್ದಾರೆ. 

ಕೊಲಂಬೋದಲ್ಲಿರುವ ಲಂಕಾ ಪ್ರಧಾನಿ ವಿಕ್ರಮ ಸಿಂಘೆ ಅವರ ಖಾಸಗಿ ನಿವಾಸಕ್ಕೆ ಪ್ರತಿಭಟನಾ ನಿರತರು ಬೆಂಕಿ ಹಚ್ಚಿದ್ದು, ಪ್ರಧಾನಿಗೆ ಸೇರಿದ ವಾಹನಗಳಿಗೆ ಹಾನಿ ಮಾಡಿದ್ದಾರೆ.

ಇದಕ್ಕೂ ಮುನ್ನ ಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವುದಕ್ಕಾಗಿ ಸರ್ವ ಪಕ್ಷ ಸರ್ಕಾರಕ್ಕೆ ದಾರಿ ಮಾಡಿಕೊಡುವುದಕ್ಕಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ರನೀಲ್ ವಿಕ್ರಮ ಸಿಂಘೆ ಘೋಷಿಸಿದ್ದರು. ಹೊಸ ಸರ್ಕಾರ ರಚನೆಯಾಗುವುದರವರೆಗೂ ವಿಕ್ರಮ ಸಿಂಘೆ ಅವರೇ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ. 

ಪ್ರತಿಭಟನಾಕಾರರು ಗೋಟಬಯ ಅವರ ರಾಜೀನಾಮೆಗೆ ಒತ್ತಾಯಿ ಅಧ್ಯಕ್ಷರ ನಿವಾಸಕ್ಕೆ ದಾಂಗುಡಿ ಇಟ್ಟ ಹಿನ್ನೆಲೆಯಲ್ಲಿ  ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರನ್ನು ಶನಿವಾರ ರಾಜಧಾನಿ ಕೊಲಂಬೊದಲ್ಲಿರುವ ಅವರ ಅಧಿಕೃತ ನಿವಾಸದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ವಿದೇಶಿ ಸಾಲದ ಮರುಪಾವತಿ ವೈಫಲ್ಯಕ್ಕೆ ಶ್ರೀಲಂಕಾ ಸರ್ಕಾರ ಕಾರಣವಾಗಿದ್ದು, 2026 ರ ವೇಳೆಗೆ ಪಾವತಿ ಮಾಡಬೇಕಿರುವ ಬಾಕಿ ಇರುವ ಸುಮಾರು USD 25 ಶತಕೋಟಿಯಲ್ಲಿ ಈ ವರ್ಷಕ್ಕೆ ಸುಮಾರು USD 7 ಶತಕೋಟಿ ವಿದೇಶಿ ಸಾಲ ಮರುಪಾವತಿಯನ್ನು ಸ್ಥಗಿತಗೊಳಿಸುವುದಾಗಿ ಕಳೆದ ಏಪ್ರಿಲ್ ನಲ್ಲಿ ಘೋಷಿಸಿತ್ತು. ಶ್ರೀಲಂಕಾದ ಒಟ್ಟು ವಿದೇಶಿ ಸಾಲವು USD 51 ಬಿಲಿಯನ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com