ಶ್ರೀಲಂಕಾ ಬಿಕ್ಕಟ್ಟು: ಸಿಂಗಾಪುರಕ್ಕೆ ತೆರಳಿದ ನಂತರ ಅಧ್ಯಕ್ಷ ಸ್ಥಾನಕ್ಕೆ ಗೋಟಬಯ ರಾಜೀನಾಮೆ ಸಲ್ಲಿಕೆ

ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ತೀವ್ರ ಪ್ರತಿಭಟನೆ ಭುಗಿಲೆಳುತ್ತಿದ್ದಂತೆ ಮಾಲ್ಡೀವ್ಸ್ ಗೆ ಪಲಾಯನವಾಗಿದ್ದ  ಅಧ್ಯಕ್ಷ  ಗೋಟಬಯ ರಾಜಪಕ್ಸ ಗುರುವಾರ ಕೊನೆಗೂ ತನ್ನ ಸ್ಥಾನಕ್ಕೆ  ರಾಜೀನಾಮೆ ನೀಡಿದ್ದಾರೆ.
ಗೋಟಬಯ ರಾಜಪಕ್ಸ
ಗೋಟಬಯ ರಾಜಪಕ್ಸ

ಕೊಲಂಬೋ: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ತೀವ್ರ ಪ್ರತಿಭಟನೆ ಭುಗಿಲೆಳುತ್ತಿದ್ದಂತೆ ಮಾಲ್ಡೀವ್ಸ್ ಗೆ ಪಲಾಯನವಾಗಿದ್ದ  ಅಧ್ಯಕ್ಷ  ಗೋಟಬಯ ರಾಜಪಕ್ಸ ಗುರುವಾರ ಕೊನೆಗೂ ತನ್ನ ಸ್ಥಾನಕ್ಕೆ  ರಾಜೀನಾಮೆ ನೀಡಿದ್ದಾರೆ.

ಸ್ಪೀಕರ್ ಕಚೇರಿ ಪ್ರಕಾರ  ಗೋಟಬಯ ತನ್ನ ಪತ್ನಿ ಹಾಗೂ ಇಬ್ಬರು ಅಂಗರಕ್ಷಕರೊಂದಿಗೆ ಮಾಲ್ಡೀವ್ಸ್ ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದಂತೆ ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ವರದಿಯಾಗಿದೆ. ಎಎಫ್ ಪಿ ಪತ್ರಕರ್ತರ ಪ್ರಕಾರ ರಾಜಪಕ್ಸ ಮಾಲ್ಡೀವ್ಸ್‌ನಿಂದ  ಸೌದಿ ಏರ್ ಲೈನ್ಸ್ ವಿಮಾನದಲ್ಲಿ ರಾತ್ರಿ 7-17ಕ್ಕೆ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.

ಗೋಟಬಯ ಸಿಂಗಾಪುರ ಕಡೆಗೆ ತೆರಳುತ್ತಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಪತ್ರಕರ್ತರು ಚಾಂಗಿ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು. ಆದರೆ, ರಾಜಪಕ್ಸ ತೆರಳುವುದು ಕಾಣಲಿಲ್ಲ. 

ರಾಜಪಕ್ಸ ಅವರು ಸಿಂಗಾಪುರ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಆದರೆ, ಅದು ಖಾಸಗಿ ಭೇಟಿಯಾಗಿರುತ್ತದೆ. ಅವರು ಯಾವುದೇ ಭದ್ರತೆಯನ್ನು ಕೇಳಿಲ್ಲ, ನಾವು ಕೊಟ್ಟಿಲ್ಲ, ಸಿಂಗಾಪುರದಲ್ಲಿ ಸಾಮಾನ್ಯವಾಗಿ ಭದ್ರತೆ ಮನೆಗೆ ಅವಕಾಶವಿಲ್ಲ ಎಂದು ಸಿಂಗಾಪುರ ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ.

ರಾಜಪಕ್ಸ ಆಗಮನದ ನಂತರ ಪ್ರಕಟಣೆ ಹೊರಡಿಸಿರುವ ಸಿಂಗಾಪುರ ಪೊಲೀಸರು, ಜನರು ನಮ್ಮ ಸ್ಥಳೀಯ ಕಾನೂನಿಗೆ ವಿಧೇಯರಾಗಿರಬೇಕು, ಅಕ್ರಮವಾಗಿ ಗುಂಪುಗೂಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಸಿಂಗಾಪುರದಲ್ಲಿ ಕೆಲವು ದಿನಗಳ ಕಾಲ ರಾಜಪಕ್ಸ ತಂಗಲಿದ್ದಾರೆ ಎಂದು ಶ್ರೀಲಂಕಾ ಭದ್ರತಾ ಮೂಲಗಳು ತಿಳಿಸಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com