ಸಂಸತ್ ಮತದಾನದಲ್ಲಿ ವಿಕ್ರಮಸಿಂಘೆಗೆ ಬೆಂಬಲ ನೀಡಲು ಶ್ರೀಲಂಕಾದ ಅಡಳಿತಾರೂಢ ಪಕ್ಷ ನಿರ್ಧಾರ

ಶ್ರೀಲಂಕಾದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಅಲ್ಲಿನ ಸಂಸತ್ ನಲ್ಲಿ ನಡೆಯಲಿರುವ ಮತದಾನದಲ್ಲಿ ಲಂಕಾದ ಆಡಳಿತಾರೂಢ ಪಕ್ಷ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ ಅವರನ್ನು ಬೆಂಬಲಿಸಲು ನಿರ್ಧರಿಸಿದೆ. 
ಲಂಕಾ ಅಧ್ಯಕ್ಷರ ಕಚೇರಿ
ಲಂಕಾ ಅಧ್ಯಕ್ಷರ ಕಚೇರಿ

ಕೊಲಂಬೋ: ಶ್ರೀಲಂಕಾದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಅಲ್ಲಿನ ಸಂಸತ್ ನಲ್ಲಿ ನಡೆಯಲಿರುವ ಮತದಾನದಲ್ಲಿ ಲಂಕಾದ ಆಡಳಿತಾರೂಢ ಪಕ್ಷ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ ಅವರನ್ನು ಬೆಂಬಲಿಸಲು ನಿರ್ಧರಿಸಿದೆ. 

ತೀವ್ರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಲಂಕಾದ ಮಾಜಿ ಅಧ್ಯಕ್ಷ ಗೋಟಾಬಯ ರಾಜಪಕ್ಸ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದ್ದರಿಂದ  ರಾಜಪಕ್ಸ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದು, ಹೊಸ ಅಧ್ಯಕ್ಷರ ನೇಮಕಕ್ಕೆ ಮುಂದಿನ ವಾರ ಚುನಾವಣೆ ನಡೆಯಲಿದೆ. 

ಶ್ರೀಲಂಕಾ ಪೊದುಜನ ಪೆರಮುನ(ಎಸ್ಎಲ್ ಪಿಪಿ) ಪ್ರಧಾನ ಕಾರ್ಯದರ್ಶಿ ಸಾಗರ ಕರಿಯವಾಸಂ ಈ ಬಗ್ಗೆ ಮಾತನಾಡಿದ್ದು, ತಮ್ಮ ಪಕ್ಷ ಪ್ರಧಾನಿ, ಹಂಗಾಮಿ ಅಧ್ಯಕ್ಷರಾಗಿರುವ ವಿಕ್ರಮ ಸಿಂಘೆ ಅವರನ್ನು ರಾಜಪಕ್ಸ ಅವರ ಉತ್ತರಾಧಿಕಾರಿಯನ್ನಾಗಿ ಬೆಂಬಲಿಸಲಿದೆ ಎಂದು ಹೇಳಿದ್ದಾರೆ.

ತನ್ನದೇ ಪಕ್ಷದ ಮತ್ತೊಂದು ಬಣದ ನಾಯಕ ಡಲ್ಲಾಸ್ ಅಲಹಪ್ಪೆರುಮ ಸಹ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರೂ ಒಂದು ಕಾಲದಲ್ಲಿ ತಮ್ಮ ಪಕ್ಷ ಕಡು ವಿರೋಧಿಯಾಗಿದ್ದ ವಿಕ್ರಮಸಿಂಘೆ ಅವರನ್ನು ಎಸ್ಎಲ್ ಪಿಪಿ ದೇಶದ ಹೊಸ ಅಧ್ಯಕ್ಷರ ಸ್ಥಾನಕ್ಕೆ ಬೆಂಬಲಿಸಲು ನಿರ್ಧರಿಸಿದೆ. ಜುಲೈ.20 ರಂದು ಲಂಕಾ ನೂತನ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com