ನಾಟಕೀಯ ಮರುಚುನಾವಣೆ ನಂತರ ಪಂಜಾಬ್ ಸಿಎಂ ಆಗಿ ಪಾಕ್ ಪ್ರಧಾನಿ ಪುತ್ರ ಹಮ್ಜಾ ಷರೀಫ್ ಪ್ರಮಾಣ

ನಾಟಕೀಯ ಬೆಳವಣಿಗೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಪುತ್ರ ಹಮ್ಜಾ ಶೆಹಬಾಜ್ ಷರೀಫ್ ಅವರು ಎರಡನೇ ಬಾರಿಗೆ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.
ಹಮ್ಜಾ ಷರೀಫ್
ಹಮ್ಜಾ ಷರೀಫ್

ಲಾಹೋರ್: ನಾಟಕೀಯ ಬೆಳವಣಿಗೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಪುತ್ರ ಹಮ್ಜಾ ಶೆಹಬಾಜ್ ಷರೀಫ್ ಅವರು ಎರಡನೇ ಬಾರಿಗೆ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.

ಮುಖ್ಯಮಂತ್ರಿಯಾಗಿ ಹಮ್ಜಾ ಶಹಬಾಜ್ ಆಯ್ಕೆಯನ್ನು ಖಂಡಿಸಿ ಪಾಕಿಸ್ತಾನದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಮತ್ತೊಂದು ಕಡೆ ಕೇವಲ ಮೂರು ಮತಗಳಿಂದ ಸಿಎಂ ಆಗಿ ಮರು ಆಯ್ಕೆಯಾದ ಹಮ್ಜಾ ಷರೀಫ್ ವಿರುದ್ಧ ಪ್ರತಿಸ್ಪರ್ಧಿ ಅಭ್ಯರ್ಥಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

47 ವರ್ಷದ ಹಮ್ಜಾ ಷರೀಫ್ ಅವರಿಗೆ ಪಂಜಾಬ್ ರಾಜ್ಯಪಾಲ ಬಲಿಗುರ್ ರೆಹಮಾನ್ ಅವರು ಪ್ರಮಾಣ ವಚನ ಬೋಧಿಸಿದರು.

ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಪಂಜಾಬ್ ವಿಧಾನಸಭೆಯಲ್ಲಿ ಶುಕ್ರವಾರ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಎರಡನೇ ಬಾರಿ ಚುನಾವಣೆ ನಡೆಯಿತು.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಪರ್ವೇಜ್ ಇಲಾಹಿ ವಿರುದ್ಧ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ನಾಯಕ ಹಮ್ಜಾ ಶಹಬಾಜ್ ಅವರು ಪಂಜಾಬ್‌ನ ಮುಖ್ಯಮಂತ್ರಿಯಾಗಿ ಮರು ಆಯ್ಕೆಯಾಗಿದ್ದಾರೆ. ಪಾಕಿಸ್ತಾನ ಮುಸ್ಲಿಂ ಲೀಗ್-ಕ್ವಾಡ್ (PML-Q) ಮತಗಳನ್ನು ಪಂಜಾಬ್ ವಿಧಾನಸಭೆ ಉಪ ಸಭಾಪತಿ ತಿರಸ್ಕರಿಸಿದ ಬಳಿಕ ಅವರು ಜಯ ಸಾಧಿಸಿದ್ದಾರೆ.

368 ಸದಸ್ಯ ಬಲದ ಪಂಜಾಬ್ ಅಸೆಂಬ್ಲಿಯಲ್ಲಿ, ಹಮ್ಜಾ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್) 179 ಮತಗಳನ್ನು ಪಡೆದರೆ, ಇಲಾಹಿ ಅವರ ಪಕ್ಷ 176 ಮತಗಳನ್ನು ಗಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com