ಕುವೈತ್‍
ಕುವೈತ್‍

ಪ್ರವಾದಿ ಕುರಿತ ಹೇಳಿಕೆಗೆ ಪ್ರತಿಭಟಿಸಿದ್ದ ವಲಸಿಗರನ್ನು ಗಡಿಪಾರು ಮಾಡಲಿರುವ ಕುವೈತ್ 

ಕುವೈತ್ ತನ್ನ ದೇಶದಲ್ಲಿ ಹೇಳಿಕೆಯನ್ನು ಖಂಡಿಸಿ ಪ್ರತಿಭಟಿಸಿದ್ದ ವಲಸಿಗರನ್ನು ಗಡಿಪಾರು ಮಾಡಲು ಮುಂದಾಗಿದೆ. 
Published on

ಭಾರತದ ರಾಜಕಾರಣಿ ನೂಪುರ್ ಶರ್ಮಾ ಪ್ರವಾದಿ ಮೊಹಮದ್ ಕುರಿತು ನೀಡಿದ್ದ ಹೇಳಿಕೆಯನ್ನು ಪ್ರತಿಭಟಿಸಿದ್ದ ರಾಷ್ಟ್ರಗಳ ಪೈಕಿ ಕುವೈತ್ ಕೂಡ ಒಂದಾಗಿತ್ತು. ಈಗ ಅದೇ ಕುವೈತ್ ತನ್ನ ದೇಶದಲ್ಲಿ ಹೇಳಿಕೆಯನ್ನು ಖಂಡಿಸಿ ಪ್ರತಿಭಟಿಸಿದ್ದ ವಲಸಿಗರನ್ನು ಗಡಿಪಾರು ಮಾಡಲು ಮುಂದಾಗಿದೆ. 

ಗಲ್ಫ್ ರಾಷ್ಟ್ರಗಳಲ್ಲಿ ಇಂತಹ ಪ್ರತಿಭಟನೆಗಳಿಗೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಕುವೈತ್ ಈ ನಿರ್ಧಾರ ಕೈಗೊಂಡಿದೆ. 

ಶುಕ್ರವಾರದ ಪ್ರಾರ್ಥನೆಯ ಬಳಿಕ ಪ್ರವಾದಿ ಮೊಹಮ್ಮದ್ ಪರ ಪ್ರತಿಭಟನೆ ನಡೆಸಿದ ವಲಸಿಗರನ್ನು ಬಂಧಿಸಿ ಗಡಿಪಾರು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು ಅವರ ದೇಶಗಳಿಗೆ ಗಡಿಪಾರು ಮಾಡಲಾಗುತ್ತದೆ.  

ಸೌದಿ ಅರೇಬಿಯಾ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಗಲ್ಫ್ ರಾಷ್ಟ್ರಗಳಲ್ಲಿ ವಲಸಿಗರಿಗೆ ಪ್ರತಿಭಟನೆ ನಡೆಸುವ ಅವಕಾಶವಿಲ್ಲ. ಈ ರೀತಿ ಪ್ರತಿಭಟನೆ ಮಾಡಿದವರನ್ನು ಗಡಿಪಾರು ಮಾಡಲಾಗುತ್ತದೆ ಹಾಗೂ ಮತ್ತೆ ಕುವೈತ್ ಗೆ ಬರುವುದಕ್ಕೆ ಅವಕಾಶವಿರುವುದಿಲ್ಲ.

ಪ್ರತಿಭಟನೆಯಲ್ಲಿ ಯಾವೆಲ್ಲಾ ರಾಷ್ಟ್ರದ ಮಂದಿ ಭಾಗಿಯಾಗಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ. 

ಕುವೈತ್ ನಲ್ಲಿ ವಲಸೆ ಹೋಗಿರುವ ಭಾರತೀಯರ ಸಂಖ್ಯೆ 2019 ರಲ್ಲೇ 10 ಲಕ್ಷ ದಾಟಿತ್ತು. ಈ ದೇಶದಲ್ಲಿ ಭಾರತೀಯರ ಸಂಖ್ಯೆ ವಾರ್ಷಿಕ ಶೇ.5-6 ರಷ್ಟು ಏರಿಕೆಯಾಗುತ್ತಿದೆ.

X

Advertisement

X
Kannada Prabha
www.kannadaprabha.com