ಕಾಬೂಲ್ ನಲ್ಲಿ ಗುರುದ್ವಾರದ ಮೇಲೆ ದಾಳಿ: ಇಬ್ಬರು ಭಕ್ತಾದಿಗಳ ಸಾವು

ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಗುರುದ್ವಾರದ ಮೇಲೆ ದಾಳಿ ನಡೆದಿದ್ದು, ಸ್ಫೋಟ, ಗುಂಡಿನ ದಾಳಿಯಲ್ಲಿ ಇಬ್ಬರು ಭಕ್ತಾದಿಗಳು ಸಾವನ್ನಪ್ಪಿದ್ದರೆ, 7 ಮಂದಿಗೆ ಗಾಯಗಳಾಗಿವೆ ಎಂದು ತಾಲೀಬಾನ್ ಅಧಿಕಾರಿಗಳು ಹೇಳಿದ್ದಾರೆ.
ಗುರುದ್ವಾರದ ಮೇಲೆ ದಾಳಿ
ಗುರುದ್ವಾರದ ಮೇಲೆ ದಾಳಿ
Updated on

ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಗುರುದ್ವಾರದ ಮೇಲೆ ದಾಳಿ ನಡೆದಿದ್ದು, ಸ್ಫೋಟ, ಗುಂಡಿನ ದಾಳಿಯಲ್ಲಿ ಇಬ್ಬರು ಭಕ್ತಾದಿಗಳು ಸಾವನ್ನಪ್ಪಿದ್ದರೆ, 7 ಮಂದಿಗೆ ಗಾಯಗಳಾಗಿವೆ ಎಂದು ತಾಲೀಬಾನ್ ಅಧಿಕಾರಿಗಳು ಹೇಳಿದ್ದಾರೆ.

ಸಿಖ್ ಭಕ್ತಾದಿ ಹಾಗೂ ತಾಲೀಬಾನ್ ನ ಭದ್ರತಾ ಪಡೆಯ ಅಧಿಕಾರಿ ದಾಳಿಯಲ್ಲಿ ಮೃತಪಟ್ಟಿದ್ದು, ತಕ್ಷಣಕ್ಕೆ ಯಾವುದೇ ಸಂಘಟನೆಗಳು ಹೊಣೆ ಹೊತ್ತುಕೊಂಡಿಲ್ಲ. 

ಗುರುದ್ವಾರದ ಮೇಲೆ ಗನ್ ಮ್ಯಾನ್ ದಾಳಿ ನಡೆಸಿದ್ದು, ತಾಲಿಬಾನ್ ಫೈಟರ್ ಗಳು ಹಾಗೂ ಕಾಬೂಲ್ ನಲ್ಲಿನ ದಾಳಿಕೋರರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರರಾಗಿರುವ ತಾಲಿಬಾನ್ ನೇಮಿತ ವ್ಯಕ್ತಿ ಅಬ್ದುಲ್ ನಫಿ ಟಾಕೋರ್ ಹೇಳಿದ್ದಾರೆ. 

ಗುರುದ್ವಾರದ ಹೊರ ಭಾಗದಲ್ಲಿ ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ಸ್ಫೋಟಿಸಲಾಯಿತು. ಆ ಘಟನೆಯಲ್ಲಿ ಯಾವುದೇ ಸಾವು ಸಂಭವಿಸಲಿಲ್ಲ. ಮೊದಲು ಗನ್ ಮ್ಯಾನ್ ಹ್ಯಾಂಡ್ ಗ್ರೆನೇಡ್ ನ್ನು ಗೇಟ್ ಬಳಿ ಎಸೆದ ಇದರಿಂದ ಬೆಂಕಿ ಹೊತ್ತಿಕೊಂಡಿತು ಎಂದು ತಾಲೀಬಾನ್ ವಕ್ತಾರರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗತೊಡಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com