ಜರ್ಮನಿ ಪ್ರವಾಸ ಮುಗಿಸಿ ಯುಎಇಗೆ ಹೊರಟ ನರೇಂದ್ರ ಮೋದಿ: ಭೇಟಿ ಫಲಪ್ರದ ಎಂದ ಪ್ರಧಾನಿ

ಯುರೋಪ್ ರಾಷ್ಟ್ರ ಜರ್ಮನಿಯಲ್ಲಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್(UAE) ಗೆ ಪ್ರಧಾನಿ ನರೇಂದ್ರ ಮೋದಿ ತೆರಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಜರ್ಮನಿ: ಯುರೋಪ್ ರಾಷ್ಟ್ರ ಜರ್ಮನಿಯಲ್ಲಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್(UAE) ಗೆ ಪ್ರಧಾನಿ ನರೇಂದ್ರ ಮೋದಿ ತೆರಳಿದ್ದಾರೆ.

ಜರ್ಮನಿ ಭೇಟಿ ಫಲಪ್ರದವಾಗಿತ್ತು ಎಂದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಜರ್ಮನಿಯಲ್ಲಿ ತಮಗೆ ಸಿಕ್ಕಿದ ಆತಿಥ್ಯಕ್ಕೆ ಮನಸೋತಿದ್ದಾರೆ. ಇಲ್ಲಿನ ಆತಿಥ್ಯಕ್ಕೆ ಜರ್ಮನ್ ಸರ್ಕಾರಕ್ಕೆ ಮತ್ತು ಇಲ್ಲಿನ ನಾಗರಿಕರಿಗೆ ಧನ್ಯವಾದ ಹೇಳುತ್ತೇನೆ. ಭಾರತ-ಜರ್ಮನಿ ಸ್ನೇಹವು ಮುಂಬರುವ ದಿನಗಳಲ್ಲಿ ಹೊಸ ದಿಕ್ಕನ್ನು ಕಾಣಲಿದೆ ಎಂದು ನಾನು ವಿಶ್ವಾಸ ಹೊಂದಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

"ನಾನು G7 ಶೃಂಗಸಭೆಯಲ್ಲಿ ಭಾಗವಹಿಸಿ ಜರ್ಮನಿ ಭೇಟಿ ಫಲಪ್ರದಾಯಕವಾಗಿತ್ತು. ಹಲವಾರು ವಿಶ್ವ ನಾಯಕರೊಂದಿಗೆ ಸಂವಾದ ನಡೆಸಿದ್ದೇನೆ, ಮ್ಯೂನಿಚ್‌ನಲ್ಲಿ ಸ್ಮರಣೀಯ ಸಮುದಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಜರ್ಮನಿ ಭೇಟಿ ಸಂದರ್ಭದಲ್ಲಿ ಜಾಗತಿಕ ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಅನೇಕ ವಿಷಯಗಳನ್ನು ಚರ್ಚಿಸಲು ಸಾಧ್ಯವಾಯಿತು ಎಂದಿದ್ದಾರೆ. 

ಪ್ರಧಾನಿಯವರು ಯುಎಇಯಲ್ಲಿ ಅಲ್ಲಿನ ಮಾಜಿ ಅಧ್ಯಕ್ಷ ಮತ್ತು ಅಬುಧಾಬಿ ಆಡಳಿತಗಾರ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನಕ್ಕೆ ಸಂತಾಪ ಸೂಚಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com