ಉದ್ಯೋಗ ಕಡಿತ ಸಮರ್ಥಿಸಿಕೊಂಡ ಮಸ್ಕ್, ಜಾಹಿರಾತುದಾರರಿಗೆ ನೀಡಿದರು ಎಚ್ಚರಿಕೆ....

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವಿಟರ್ ಸಂಸ್ಥೆಯನ್ನು ಖರೀದಿಸಿದ ಬಳಿಕ ಉದ್ಯೋಗ ಕಡಿತದ ಬಗ್ಗೆ ಘೋಷಣೆ ಮಾಡಿದ ನಂತರ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ.
ಎಲಾನ್ ಮಸ್ಕ್
ಎಲಾನ್ ಮಸ್ಕ್

ನ್ಯೂಯಾರ್ಕ್: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವಿಟರ್ ಸಂಸ್ಥೆಯನ್ನು ಖರೀದಿಸಿದ ಬಳಿಕ ಉದ್ಯೋಗ ಕಡಿತದ ಬಗ್ಗೆ ಘೋಷಣೆ ಮಾಡಿದ ನಂತರ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ.
 
ಉದ್ಯೋಗ ಕಡಿತದ ಬೆನ್ನಲ್ಲೇ ಜಾಹಿರಾತು ನೀಡುತ್ತಿರುವವರು ಸಂಸ್ಥೆಯಿಂದ ದೂರವಾಗುವ ಮಾತನಾಡಿದ್ದು, ಈ ರೀತಿ ಉದ್ದೇಶ ಹೊಂದಿರುವವರ ಹೆಸರನ್ನು ಬಹಿರಂಗಪಡಿಸುವುದಾಗಿ ಮಸ್ಕ್ ಎಚ್ಚರಿಸಿದ್ದಾರೆ.
 
7,500 ಮಂದಿ ಉದ್ಯೋಗಿಗಳ ಪೈಕಿ ಅರ್ಧದಷ್ಟು ಮಂದಿಯನ್ನು ಟ್ವಿಟರ್ ವಜಾಗೊಳಿಸಿದೆ. ಗ್ರಾಹಕರೊಬ್ಬರಿಗೆ ಈ ವಿಷಯವಾಗಿ ಪ್ರತಿಕ್ರಿಯೆ ನೀಡಿದ ಎಲಾನ್ ಮಸ್ಕ್, ಧನ್ಯವಾದಗಳು, ಇದು ಹೀಗೇ ಮುಂದುವರೆದರೆ, ಬಹಿರಂಗವಾಗಿ ಅವರ ಹೆಸರು ಹೇಳಿ ಅವಮಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಮೈಕ್ ಡಾವಿಸ್ ಎಂಬ ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿ ಡಿಯರ್ ಎಲಾನ್ ಮಸ್ಕ್, ನೀವು 114,000,000 ಟ್ವಿಟರ್ ಅನುಯಾಯಿಗಳನ್ನು ಹೊಂದಿದ್ದೀರಿ, ನಿಮಗೆ ಜಾಹಿರಾತು ಬಹಿಷ್ಕರಿಸುವವರ ಹೆಸರನ್ನು ಬಹಿರಂಗಗೊಳಿಸಿ, ಆ ಮೂಲಕ ನಾವು ಅವರನ್ನೂ ಬಹಿಷ್ಕರಿಸಬಹುದು ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಲಾನ್ ಮಸ್ಕ್, ಜಾಹಿರಾತುದಾರರ ಮೇಲೆ ಕಾರ್ಯಕರ್ತರ ಗುಂಪು ಒತ್ತಡ ಹೇರುತ್ತಿದ್ದು, ಆದಾಯಕ್ಕೆ ಹೊಡೆತ ಕೊಡಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಇದೇ ವೇಳೆ ಎಲಾನ್ ಮಸ್ಕ್ ಉದ್ಯೋಗ ಕಡಿತವನ್ನೂ ಸಮರ್ಥಿಸಿಕೊಂಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com