ಯುಸ್ ಹೌಸ್ ಗೆ ಐವರು ಭಾರತೀಯ-ಅಮೆರಿಕನ್ ಚುನಾಯಿತ ಪ್ರತಿನಿಧಿಗಳು ಆಯ್ಕೆ; ರಾಜ್ಯ ಶಾಸಕಾಂಗದಿಂದಲೂ ಹಲವರ ಗೆಲುವು
ರಾಜಾ ಕೃಷ್ಣಮೂರ್ತಿ, ರೊ ಖಾನ್ಹಾ, ಪ್ರಮೀಳಾ ಜಯಪಾಲ್, ಆಮಿ ಬೇರಾ ಸೇರಿದಂತೆ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಐವರು ಭಾರತೀಯ ಜನಪ್ರತಿನಿಧಿಗಳು ಯುಸ್ ಹೌಸ್ ಗೆ ಆಯ್ಕೆಯಾಗಿದ್ದಾರೆ. ದೇಶದ ಅತ್ಯಂತ ಧ್ರುವೀಕೃತ ಮಧ್ಯಂತರ ಚುನಾವಣೆಗಳಲ್ಲಿ ಒಂದಾದ ರಾಜ್ಯ ಶಾಸಕಾಂಗಗಳಲ್ಲಿಯೂ ಇತರ ಹಲವು ಮಂದಿ ಆಯ್ಕೆಯಾಗಿದ್ದಾರೆ.
Published: 10th November 2022 02:02 PM | Last Updated: 10th November 2022 04:02 PM | A+A A-

ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ರಾಜಾ ಕೃಷ್ಣಮೂರ್ತಿ, ರೊ ಖಾನ್ಹಾ, ಪ್ರಮೀಳಾ ಜಯಪಾಲ್, ಆಮಿ ಬೇರಾ ಸೇರಿದಂತೆ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಐವರು ಭಾರತೀಯ ಜನಪ್ರತಿನಿಧಿಗಳು ಯುಸ್ ಹೌಸ್ ಗೆ ಆಯ್ಕೆಯಾಗಿದ್ದಾರೆ. ದೇಶದ ಅತ್ಯಂತ ಧ್ರುವೀಕೃತ ಮಧ್ಯಂತರ ಚುನಾವಣೆಗಳಲ್ಲಿ ಒಂದಾದ ರಾಜ್ಯ ಶಾಸಕಾಂಗಗಳಲ್ಲಿಯೂ ಇತರ ಹಲವು ಮಂದಿ ಆಯ್ಕೆಯಾಗಿದ್ದಾರೆ.
ಭಾರತೀಯ- ಅಮೆರಿಕದ ಉದ್ಯಮಿ, ರಾಜಕಾರಣಿ ತಾನೇದಾರ್ ಮಿಚಿಗನ್ನಿಂದ ಚುನಾಯಿತರಾದ ಮೊದಲ ಭಾರತೀಯ-ಅಮೆರಿಕನ್ ಪ್ರಜೆಯಾಗಿದ್ದಾರೆ. 67 ವರ್ಷದ ತಾನೇದಾರ್ ಪ್ರಸ್ತುತ ಮಿಜಿಗನ್ ಹೌಸ್ ನಲ್ಲಿ ಮೂವರು ಜಿಲ್ಲೆಗಳನ್ನು ಪ್ರತಿನಿಧಿಸುತ್ತಿದ್ದಾರೆ.
49 ವರ್ಷದ ರಾಜಾ ಕೃಷ್ಣಮೂರ್ತಿ ಇಲಿನಾಯ್ಸ್ ಜಿಲ್ಲೆಯಿಂದ ಸತತ ನಾಲ್ಕನೇ ಬಾರಿಗೆ ಪುನರ್ ಆಯ್ಕೆಯಾಗಿದ್ದಾರೆ. ಇನ್ನೂ 46 ವರ್ಷದ ರೊ ಖಾನ್ಹಾ ಕ್ಯಾಲಿಪೋರ್ನಿಯಾದಿಂದ ಎದುರಾಳಿ ರಿತೇಶ್ ಟಂಡನ್ ಅವರನ್ನು ಸೋಲಿಸಿದ್ದಾರೆ. ಚೆನ್ನೈ ಮೂಲಕ ಪ್ರಮೀಳಾ ಜಯಪಾಲ್ ವಾಷಿಂಗ್ಟನ್ ಜಿಲ್ಲೆಯಿಂದ ಎದುರಾಳಿ ಕ್ಲಿಫ್ ಮೂನ್ ಅವರನ್ನು ಸೋಲಿಸಿದ್ದಾರೆ.
ಇದನ್ನೂ ಓದಿ: ನವೆಂಬರ್ 15ರಂದು ಬಹುದೊಡ್ಡ ಘೋಷಣೆ ಮಾಡುತ್ತೇನೆ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಕಾಂಗ್ರೆಸ್ ನಲ್ಲಿ 2013ರಿಂದ ಇರುವ 57 ವರ್ಷದ ಬೇರಾ ರಿಪಬ್ಲಿಕನ್ ಪಕ್ಷದ ತಮಿಕಾ ಹ್ಯಾಮಿಲ್ಟನ್ ಅವರನ್ನು ಸೋಲಿಸಿದ್ದಾರೆ. ಕೃಷ್ಣಮೂರ್ತಿ, ಖಾನ್ಹಾ, ಜಯಪಾಲ್ ಮತ್ತು ಬೇರಾ ಹಿಂದಿನ ಹೌಸ್ ನಲ್ಲಿಯೂ ಇದ್ದರು. ರಾಜ್ಯ ಶಾಸಕಾಂಗದಲ್ಲಿಯೂ ಹಲವು ಭಾರತೀಯ- ಅಮೆರಿಕನ್ ಪ್ರಜೆಗಳು ಗೆಲುವು ಸಾಧಿಸಿದ್ದಾರೆ.