ಆಸಿಯಾನ್ ಶೃಂಗಸಭೆ: ಜೈಶಂಕರ್- ಬ್ಲಿಂಕನ್ ಭೇಟಿ; ಉಕ್ರೇನ್ ಯುದ್ಧ, ಭಾರತ-ಅಮೆರಿಕ ಸಂಬಂಧಗಳ ಬಗ್ಗೆ ಚರ್ಚೆ
ಭಾರತ - ಆಸಿಯಾನ್ ರಾಷ್ಟ್ರಗಳ(ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ಶೃಂಗಸಭೆಯಲ್ಲಿ ಭಾಗವಹಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಭಾನುವಾರ ಅಮೆರಿಕ ವಿದೇಶಾಂಗ ಕಾರ್ಯದರ್ಶಿ....
Published: 13th November 2022 07:36 PM | Last Updated: 14th November 2022 06:49 PM | A+A A-

ಬ್ಲಿಂಕನ್ - ಜೈಶಂಕರ್
ಪನೋಮ್ ಪೆನ್, ಕಾಂಬೋಡಿಯಾ: ಭಾರತ - ಆಸಿಯಾನ್ ರಾಷ್ಟ್ರಗಳ(ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ಶೃಂಗಸಭೆಯಲ್ಲಿ ಭಾಗವಹಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಭಾನುವಾರ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರನ್ನು ಭೇಟಿ ಮಾಡಿದರು.
ಬ್ಲಿಂಕನ್ ಮತ್ತು ಜೈಶಂಕರ್ ಅವರು ಭಾರತ - ಅಮೆರಿಕ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ, ಉಕ್ರೇನ್ ಸಂಘರ್ಷದ ಬಗ್ಗೆ, ಇಂಧನ ಸಮಸ್ಯೆಗಳು, ಜಿ 20 ಮತ್ತು ಇಂಡೋ-ಪೆಸಿಫಿಕ್‌ನ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು.
ಕಾಂಬೋಡಿಯಾ ರಾಜಧಾನಿಯಲ್ಲಿ ನಡೆಯುತ್ತಿರುವ ಭಾರತ - ಆಸಿಯಾನ್ ಶೃಂಗಸಭೆಯಲ್ಲಿ ಜೈಶಂಕರ್ ಹಾಗೂ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಹಾಗೂ ಭಾರತದ ಉನ್ನತಮಟ್ಟದ ಅಧಿಕಾರಿಗಳ ನಿಯೋಗ ಭಾಗವಹಿಸಿದೆ.
ಇದನ್ನು ಓದಿ: ಯುದ್ಧದ ಪರಿಣಾಮಗಳನ್ನು ನೋಡಿದ್ದೇವೆ, ಶಾಂತಿ ಮಾತುಕತೆಗೆ ಮರಳಿ: ರಷ್ಯಾಗೆ ಜೈಶಂಕರ್ ಸಲಹೆ
ನವೆಂಬರ್ 15 ರಿಂದ 16 ರವರೆಗೆ ಇಂಡೋನೇಷ್ಯಾದ ಬಾಲಿಯಲ್ಲಿ ಜಿ -20 ಶೃಂಗಸಭೆ ನಡೆಯಲಿದ್ದು, ಈ ವೇಳೆ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಅದಕ್ಕು ಮುನ್ನ ಜೈಶಂಕರ್ ಮತ್ತು ಬ್ಲಿಂಕೆನ್ ಭೇಟಿ ಮಾಡಿ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದ ಬಗ್ಗೆ ಚರ್ಚಿಸಿದ್ದಾರೆ.
"ಯುಎಸ್ ಸೆಕ್ರೆಟರಿ ಆಫ್ ಸ್ಟೇಟ್ ಬ್ಲಿಂಕನ್ ಅವರೊಂದಿಗೆ ಸಭೆ ನಡೆಸಲಾಯಿತು. ಉಕ್ರೇನ್, ಇಂಡೋ-ಪೆಸಿಫಿಕ್, ಇಂಧನ, G20 ಮತ್ತು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ" ಎಂದು ಜೈಶಂಕರ್ ಅವರು ಟ್ವೀಟ್ ಮಾಡಿದ್ದಾರೆ.