ಜಿ20 ಶೃಂಗಸಭೆ: ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಜೊತೆ ಪ್ರಧಾನಿ ಮೋದಿ ಮಾತುಕತೆ, ಮ್ಯಾಂಗ್ರೋವ್ ಅರಣ್ಯಕ್ಕೆ ಭೇಟಿ

ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಜೊತೆಗೆ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಬದಿಯಲ್ಲಿ ಎರಡನೇ ದಿನವಾದ ಇಂದು ಬುಧವಾರ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದರು. 
ಫ್ರಾನ್ಸ್ ಅಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಪಿಎಂ ನರೇಂದ್ರ ಮೋದಿ
ಫ್ರಾನ್ಸ್ ಅಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಪಿಎಂ ನರೇಂದ್ರ ಮೋದಿ

ಬಾಲಿ(ಇಂಡೋನೇಷ್ಯಾ): ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಜೊತೆಗೆ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ(G20 summit) ಬದಿಯಲ್ಲಿ ಎರಡನೇ ದಿನವಾದ ಇಂದು ಬುಧವಾರ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದರು. 

ಫ್ರಾನ್ಸ್ ಅಧ್ಯಕ್ಷರು ಮಾತ್ರವಲ್ಲದೆ ಪ್ರಧಾನಿ ಮೋದಿಯವರು ಇಂದು ಇಂಡೋನೇಷ್ಯಾ, ಸ್ಪೈನ್, ಸಿಂಗಾಪುರ, ಜರ್ಮನಿ, ಇಟಲಿ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೇಶಗಳ ಮುಖ್ಯಸ್ಥರನ್ನು ಭೇಟಿ ಮಾಡುವ ಮಾತುಕತೆ ನಡೆಸುವ ಕಾರ್ಯಕ್ರಮ ನಿಗದಿಯಾಗಿದೆ.

ಇಂದು ಪ್ರಧಾನಿ ಮೋದಿಯವರು ಶೃಂಗಸಭೆಯಲ್ಲಿ ಡಿಜಿಟಲ್ ರೂಪಾಂತರ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಇಂದು ಬೆಳಗ್ಗೆ ವಿಶ್ವನಾಯಕರು ಇಂಡ್ಯೋನೇಷ್ಯಾದ ಮ್ಯಾಂಗ್ರೋವ್ ಅರಣ್ಯಗಳಿಗೆ ಭೇಟಿ ನೀಡಿದರು. ಜಾಗತಿಕ ಅರಣ್ಯ ಸಂರಕ್ಷಣೆಯಲ್ಲಿ ಮ್ಯಾಂಗ್ರೋವ್ ಕಾಡುಗಳ ಪಾತ್ರ ಅತ್ಯಂತ ಪ್ರಮುಖವಾದದ್ದು. ಇಂಡೋನೇಷ್ಯಾ ಮತ್ತು ಯುಎಇಗಳ ಜಂಟಿ ಅಭಿಯಾನವಾದ ಮ್ಯಾಂಗ್ರೋವ್ ಹವಾಮಾನ ಮೈತ್ರಿ(MAC)ಯಲ್ಲಿ ಭಾರತ ಮೈತ್ರಿ ಮಾಡಿಕೊಂಡಿದೆ. 

ಭಾರತ ದೇಶದಲ್ಲಿ 5 ಸಾವಿರಕ್ಕೂ ಅಧಿಕ ಚದರಡಿಯಲ್ಲಿ 50ಕ್ಕೂ ಹೆಚ್ಚು ಮ್ಯಾಂಗ್ರೋವ್ ಪ್ರಬೇಧಗಳು ಹರಡಿಕೊಂಡಿವೆ. ಜೀವವೈವಿಧ್ಯತೆ ಮತ್ತು ಪರಿಣಾಮಕಾರಿ ಕಾರ್ಬನ್ ತಗ್ಗಿಸುವಿಕೆಗೆ ನೆರವಾಗುವ ನಿಟ್ಟಿನಲ್ಲಿ ಮ್ಯಾಂಗ್ರೋವ್ ಕಾಡುಗಳ ಮರುಸ್ಥಾಪನೆ ಮತ್ತು ರಕ್ಷಣೆಗೆ ಭಾರತ ಒತ್ತು ನೀಡುತ್ತಿದೆ. 

ಮ್ಯಾಂಗ್ರೋವ್ ಅರಣ್ಯಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿರುವುದನ್ನು ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com